ತನ್ನ ಕಾರು ಅಪಘಾತಕ್ಕೀಡಾದ ಬಗ್ಗೆಯೇ ಹೊಸ ಹಾಡು ರಚಿಸಿ ಧ್ವನಿ ನೀಡಿದ ಕಚ್ಚಾ ಬಾದಾಮ್​ ಗಾಯಕ!

ಕೋಲ್ಕತ: ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ಕಚ್ಚಾ ಬಾದಾಮ್ ಖ್ಯಾತಿಯ ಗಾಯಕ ಭುವನ್​ ಬದ್ಯಕರ್​​ ಕಳೆದ ಸೋಮವಾರ (ಫೆ.28) ರಾತ್ರಿ ಕಾರು ಅಪಘಾತಕ್ಕೀಡಾಗಿದ್ದರು. ಇದೀಗ ಚೇತರಿಸಿಕೊಂಡಿರುವ ಭುವನ್​ ಹೊಸ ಹಾಡನ್ನು ಹಾಡಿದ್ದು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಚ್ಚಾ ಬಾದಾಮ್​ ಹಾಡಿನ ಮೂಲಕ ಗಳಿಸಿದ ಹಣದಲ್ಲಿ ಭುವನ್​ ಇತ್ತೀಚೆಗಷ್ಟೇ ಸೆಕೆಂಡ್​ ಹ್ಯಾಂಡ್​ ಕಾರು ಖರಿದೀಸಿದ್ದಾರೆ. ಸೋಮವಾರ ಕಾರು ಓಡಿಸುವುದನ್ನು ಕಲಿಯುವಾಗ ಗೋಡೆಯೊಂದಕ್ಕೆ ಡಿಕ್ಕಿ ಹೊಡೆದು ಎದೆಗೆ ಪೆಟ್ಟಾಗಿತ್ತು. ಬಳಿಕ ಭುವನ್​ ಅವರು ಸುರಿಯಲ್ಲಿರುವ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಗೆ … Continue reading ತನ್ನ ಕಾರು ಅಪಘಾತಕ್ಕೀಡಾದ ಬಗ್ಗೆಯೇ ಹೊಸ ಹಾಡು ರಚಿಸಿ ಧ್ವನಿ ನೀಡಿದ ಕಚ್ಚಾ ಬಾದಾಮ್​ ಗಾಯಕ!