More

    30 ಸಾವಿರ ಮನೆಗಳಿಗೆ ತೆರಳಿ ಹೆರಿಗೆ, 40 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ ಡಾ. ಅಂಬಣ್ಣಗೆ ರಾಜ್ಯೋತ್ಸವ ಪ್ರಶಸ್ತಿ

    ವಿಜಯನಗರ: ಅವರು ಸೈಕಲ್ ಮೇಲೆ ಹಳ್ಳಿ, ಹಳ್ಳಿಗೆ ತೆರಳಿ ಚಿಕಿತ್ಸೆ ನೀಡಿದ ವೈದ್ಯ. 30 ಸಾವಿರ ಮನೆಗಳಿಗೆ ತೆರಳಿ ಹೆರಿಗೆ ಮಾಡಿಸಿ, ತಮ್ಮ 62 ವರ್ಷದ ಸುಧಿರ್ಘ ವೃತ್ತಿ ಜೀವನದಲ್ಲಿ 40 ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿದ 74 ವಯೋಮಾನದ ಬಡವರ ಡಾಕ್ಟರ್ ಅಂಬಣ್ಣನವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ

    ರಾಜ್ಯ ಸರ್ಕಾರ 2021ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯ ಡಾ. ಅಂಬಣ್ಣನವರಿಗೆ ಸಂಕೀರ್ಣ ಕ್ಷೇತ್ರದಿಂದ ಆಯ್ಕೆ ಮಾಡಿ ಪ್ರಶಸ್ತಿ ಘೋಷಿಸಿದೆ.

    ಸ್ವತಂತ್ರ ಪೂರ್ವ 1937 ರಲ್ಲಿ ಹೊಸಪೇಟೆಯ ನಾಣಿಕೇರಿಯಲ್ಲಿ ಜನಿಸಿದ ಅಂಬಣ್ಣನವರು ತಮ್ಮ 21 ನೇ ವರ್ಷದಲ್ಲೇ ವೈದ್ಯಕೀಯ ವೃತ್ತಿ ಆರಂಭಿಸಿದ್ರು. ಯಾವುದೇ ಫಲಾಪೇಕ್ಷೆ ಇಲ್ಲದೇ, ಸೈಕಲ್ ಮೇಲೆ ಸವಾರಿ ಮಾಡಿ, ಹಳ್ಳಿ, ಹಳ್ಳಿಗೂ ಹೋಗಿ ಸೇವೆ ಮಾಡಿದ್ದಾರೆ. ವೈದ್ಯಕೀಯ ವೃತ್ತಿ ಪ್ರಾರಂಭಿಸಿದಾಗ ಸರಕಾರಿ ನೌಕರಿಗೆ ಹೋಗದೇ, ಹಳ್ಳಿ ಜನರ ಸೇವೆಗೆ ನಾನು ಇಲ್ಲೇ ಉಳಿದೆ. ಯಾವುದೇ ಫಲಾಪೇಕ್ಷೆ ಇಲ್ಲದೇ, ನಾನು ಈ ವೃತ್ತಿ ಮಾಡುತ್ತಿದ್ದೆನೆ. ನನ್ನ ಸೇವೆ ಗುರುತಿಸಿ ರಾಜ್ಯ ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದ್ದು, ಖುಷಿ ತಂದಿದೆ. ಎಲ್ಲಾ ವೈದ್ಯರು ಯಾವುದೇ ಫಲಾಪೇಕ್ಷೆ ಇಲ್ಲದೇ, ಸೇವೆ ಮಾಡಿದ್ರೆ, ಭಾರತ ಉದ್ಧಾರ ಆಗುತ್ತದೆ‌. ರೋಗಿಗಗಳು ಸಹ ಖುಷಿ ಪಡ್ತಾರೆ. ಕರೊನಾದಂತಹ ಸಮಯದಲ್ಲಿಯೂ ನಾನು ಜನರಿಗೆ ಸೇವೆ ಮಾಡಿದ್ದೇನೆ ಎಂದು ಅಂಬಣ್ಣನವರು ಹೇಳಿದರು.

    1992 ರಲ್ಲಿ ನನಗೆ ಕ್ಯಾನ್ಸರ್ ಬಂದಿತ್ತು, ನಮ್ಮ ಮನೆಯವರೂ ಎಲ್ಲರೂ ಸತ್ತೆ ಹೋದ ಅಂತ ಮನೆಗೆ ಹೋದ್ರು, ಹೂವಿನ ಹಾರವೂ ತಂದಿದ್ರು ಅವತ್ತು ಮೊಹರಂ ಹಬ್ಬ, ಹಿಂದೂ- ಮುಸ್ಲಿಂ- ಕ್ರೈಸ್ಥರೆಲ್ಲರೂ ಸಹ ನಾನು ಬದುಕಲಿ ಅಂತ ಪ್ರಾರ್ಥನೆ ಮಾಡಿದ್ರು. ನಾನು ಬದುಕುಳಿದೆ. ಅಂತ ತಮ್ಮ ಜೀವನದ ಕಹಿ ಅನುಭವಗಳನ್ನು ಸಹ ಹಂಚಿಕೊಂಡರು.

    2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 66 ಸಾಧಕರಿಗೆ ಗೌರವ

    ಉಪ್ಪಿನಲ್ಲಿ ಅಪ್ಪು ಚಿತ್ರ ಬಿಡಿಸಿ ಆಂಧ್ರಪ್ರದೇಶದ ಅಭಿಮಾನಿ ಹೇಳಿದ್ದು ಹೀಗೆ….

    ಬಿಗ್​ಬಾಸ್​ ಮನೆಯೊಳಗೆ ರೋಮ್ಯಾನ್ಸ್​! ಫೇಮಸ್​ ಯೂಟ್ಯೂಬರ್​ ಪ್ರೀತಿಗೆ ಗುಡ್​ ಬೈ ಹೇಳಿದ ನಟಿ ದೀಪ್ತಿ

    ನಗು ನಗುತ್ತಾ ಗಂಡನ ಕಳುಹಿಸಿದ ಬೆನ್ನಲ್ಲೇ ಪತ್ನಿ ಮಾಡಿದ ನಿರ್ಧಾರಕ್ಕೆ ಪತಿಯು ಬಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts