More

    ಕೋನಸೀಮಾ ಜಿಲ್ಲೆಗೆ ಬಿ. ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಹೆಸರಿಡಲು ಆಂಧ್ರ ಸರ್ಕಾರದ ನಿರ್ಧಾರ

    ವಿಜಯವಾಡ: ಆಂಧ್ರ ಪ್ರದೇಶ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಕೋನಸೀಮಾ ಜಿಲ್ಲೆಯ ಹೆಸರನ್ನು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಬದಲಾಯಿಸಲು ಆಂಧ್ರ ಸರ್ಕಾರ ನಿರ್ಧರಿಸಿದೆ. ಸಾರ್ವಜನಿಕರ ಆಕ್ಷೇಪಣೆ/ಸಲಹೆಗಳನ್ನು ಕೋರಿ ಸರ್ಕಾರ ಬುಧವಾರ (ಮೇ.18) ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. 30 ದಿನಗಳ ಬಳಿಕ ಅಂತಿಮ ಅಧಿಸೂಚನೆಯನ್ನು ಸರ್ಕಾರ ಹೊರಡಿಸಲಿದೆ.

    ಆಂಧ್ರ ಜಿಲ್ಲೆಗಳ ರಚನೆ ಕಾಯಿದೆ (5) ಸೆಕ್ಷನ್ 3ರ ಅಡಿಯಲ್ಲಿ ರಾಜ್ಯದಲ್ಲಿ ಹೆಚ್ಚುವರಿ 13 ಜಿಲ್ಲೆಗಳ ರಚನೆ ಮಾಡಿ ಆಂಧ್ರ ಸರ್ಕಾರವು ಈ ಹಿಂದೆಯೇ ಹೊಸ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಹೊಸ ಜಿಲ್ಲೆಗಳನ್ನು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ 13 ಜಿಲ್ಲೆಗಳಿಂದ ರಚಿಸಲಾಗಿದ್ದು, ಇದೀಗ ಒಟ್ಟು ಜಿಲ್ಲೆಗಳ ಸಂಖ್ಯೆಯನ್ನು 26ಕ್ಕೆ ತರಲಾಗಿದೆ. ಈ ಜಿಲ್ಲೆಗಳಲ್ಲಿ ಒಂದನ್ನು ಏಳು ವಿಧಾನಸಭಾ ಕ್ಷೇತ್ರಗಳನ್ನು ಒಟ್ಟುಗೂಡಿಸಿ ಕೋನಸೀಮಾ ಜಿಲ್ಲೆ ಎಂದು ಹೆಸರಿಸಲಾಗಿತ್ತು.

    ಅಮಲಾಪುರ ಕೇಂದ್ರವಾಗಿರುವ ಕೋನಸೀಮಾ ಜಿಲ್ಲೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿಡಬೇಕು ಎಂದು ದಲಿತ ಸಮುದಾಯಗಳು ಹಾಗೂ ವಿವಿಧ ಪಕ್ಷಗಳು ಕಳೆದ ಕೆಲವು ವಾರಗಳಿಂದ ಒತ್ತಾಯಿಸಿದ್ದವು. ಕೊನೆಗೂ ಒತ್ತಾಯಕ್ಕೆ ಮಣಿದಿರುವ ಸರ್ಕಾರ ಅಂತಿಮವಾಗಿ ಹೆಸರನ್ನು ಬದಲಾಯಿಸಲು ನಿರ್ಧರಿಸಿದೆ.

    ಕೋನಸೀಮಾವನ್ನು ಮಾಜಿ ಲೋಕಸಭಾ ಸ್ಪೀಕರ್ ಜಿಎಂಸಿ ಬಾಲಯೋಗಿ ಅಥವಾ ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಮರುನಾಮಕರಣ ಮಾಡಬೇಕೆಂದು ಹಲವಾರು ಬೇಡಿಕೆಗಳು ಬಂದಿದ್ದವು. ಅಂತಿಮವಾಗಿ ಜಗನ್ ಮೋಹನ್ ರೆಡ್ಡಿ ಅವರು ತೆಲುಗು ದೇಶಂ ಪಕ್ಷ (ಟಿಡಿಪಿ)ವನ್ನು ಪ್ರತಿನಿಧಿಸಿದ್ದ ಬಾಲಯೋಗಿ ಬದಲಿಗೆ ಅಂಬೇಡ್ಕರ್ ಅವರ ಹೆಸರನ್ನು ಕೋನಸೀಮಾ ಜಿಲ್ಲೆಗೆ ಮರುನಾಮಕರಣ ಮಾಡಲು ಆಯ್ಕೆ ಮಾಡಿದ್ದಾರೆ.

    ಆಂಧ್ರ ಸರ್ಕಾರದ ಈ ಕ್ರಮವು ಮುಂದಿನ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿಗೆ ವರವಾಗಿ ಪರಿಣಮಿಸಬಹುದು. ಹೊಸದಾಗಿ ರಚನೆಯಾಗಿರುವ ಅಂಬೇಡ್ಕರ್​ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಮತ್ತು ಇತರೆ ಅಲ್ಪಸಂಖ್ಯಾತ ಮತದಾರರು ಇದ್ದಾರೆ. ಹಾಗಾಗಿ ಜಿಲ್ಲೆಗೆ ಅಂಬೇಡ್ಕರ್ ಹೆಸರನ್ನು ಮರುನಾಮಕರಣ ಮಾಡುವುದರಿಂದ ವೈಎಸ್‌ಆರ್‌ಸಿಪಿಗೆ ಹೊಸ ಮೈಲೇಜ್ ಸಿಗಲಿದೆ. (ಏಜೆನ್ಸೀಸ್​)

    ಅನಂತರಾಜು ಡೆತ್​ ಕೇಸ್​ಗೆ ಮತ್ತೊಂದು ಟ್ವಿಸ್ಟ್​: ಪತ್ನಿ-ಪ್ರೇಯಸಿ ನಡುವಿನ 2ನೇ ಆಡಿಯೋ ವೈರಲ್​, ಸ್ಥಳೀಯರಲ್ಲಿ ಗುಸುಗುಸು ಶುರು

    ಶಾಸಕನ ಕಾರಿನಲ್ಲಿ ಚಾಲಕನ ಮೃತದೇಹ ಪತ್ತೆ: ಸಾವಿಗೆ ಕಾರಣ ಕೇಳಿದ್ದಕ್ಕೆ ತಡಬಡಾಯಿಸಿದ ಎಂಎಲ್​ಸಿ!

    ನಿಮ್ಮ ಮಕ್ಕಳು ಡೆಡ್ಲಿ ಚೈನೀಸ್ ರಿಂಗ್​ ಧರಿಸಿದ್ರೆ ಎಚ್ಚರ! ಅಗ್ನಿಶಾಮಕ ಠಾಣೆಗೆ ದೌಡಾಯಿಸುತ್ತಿರೋ ಪಾಲಕರು​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts