More

    ವಿಜಯ್​ ಅವರ ಬೀಸ್ಟ್​ ಚಿತ್ರವು ಮನಿ ಹೀಸ್ಟ್​, ಗೂರ್ಖಾ ಚಿತ್ರದ ಕಾಪಿಯೇ? ಸ್ಪಷ್ಟನೆ ನೀಡಿದ ನಿರ್ದೇಶಕ

    ಚೆನ್ನೈ: ಕನ್ನಡದ ಕೆಜಿಎಫ್​ ಚಾಪ್ಟರ್​ 2 ಎದುರು ತೆರೆಕಾಣುತ್ತಿರುವ ಕಾಲಿವುಡ್​ನ ಬೀಸ್ಟ್​ ಚಿತ್ರದ ಮೇಲೆಯೂ ನಿರೀಕ್ಷೆ ಹೆಚ್ಚಾಗಿದೆ. ಏಪ್ರಿಲ್​ 14ರಂದು ಕೆಜಿಎಫ್​ ತೆರೆಕಂಡರೆ ಒಂದು ದಿನದ ಮುಂಚೆಯೇ ಬೀಸ್ಟ್​ ಚಿತ್ರಮಂದಿರದಲ್ಲಿ ಧೂಳೆಬ್ಬಿಸಲಿದೆ. ಈಗಾಗಲೇ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಮಿಲಿಯನ್​ಗಟ್ಟಲೆ ವೀಕ್ಷಣೆ ಪಡೆದುಕೊಂಡು ನಿರೀಕ್ಷೆ ದುಪ್ಪಟ್ಟಾಗಿಸಿದೆ. ಆದರೆ, ಟ್ರೇಲರ್​ ನೋಡಿದವರು ಈ ಚಿತ್ರ ಗೂರ್ಕ ಮತ್ತು ಹಾಲಿವುಡ್​ ಮನಿ ಹೀಸ್ಟ್​ ಚಿತ್ರದ ಕಾಪಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಅಸಲಿಗೆ ಈ ಪ್ರಶ್ನೆ ಉದ್ಭವಿಸಲು ಕಾರಣವೆಂದರೆ, ಟ್ರೇಲರ್​ನಲ್ಲಿ ಇರುವ ಅಂಶಗಳು. ಮಾಲ್​ ಒಂದನ್ನು ಹೈಜಾಕ್​ ಮಾಡುವ ಉಗ್ರರು ಸಾರ್ವಜನಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಸರ್ಕಾರಕ್ಕೆ ಬೇಡಿಕೆ ಇಡುತ್ತಾರೆ. ಇದು ಅನೇಕ ಚಿತ್ರಗಳಲ್ಲಿ ಈಗಾಗಲೇ ಬಂದು ಹೋಗಿವೆ ಎಂಬುದು ಹಲವರ ವಾದ. ಇದೀಗ ಈ ಪ್ರಶ್ನೆಗೆ ಸ್ವತಃ ಚಿತ್ರ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಸ್ಪಷ್ಟನೆ ನೀಡಿದ್ದಾರೆ.

    ಸಾರ್ವಜನಿಕ ಸ್ಥಳವನ್ನು ಹೈಜಾಕ್ ಮಾಡುವ ವಿಷಯಾಂಶ ಇರುವ ಚಿತ್ರಗಳು ಚಿತ್ರರಂಗಕ್ಕೆ ಹೊಸದೇನಲ್ಲ. ಆದರೆ, ಸನ್ನಿವೇಶಗಳನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದರಲ್ಲಿ ಮತ್ತು ಚಿತ್ರಕಥೆ ಹಾಗೂ ಮೇಕಿಂಗ್‌ನಲ್ಲಿ ವಿಚಾರದಲ್ಲಿ ಬೀಸ್ಟ್​ ಚಿತ್ರ ವಿಭಿನ್ನವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ತಾನು ಯೋಗಿ ಬಾಬು ಅವರ ‘ಗೂರ್ಖಾ’ವನ್ನು ನೋಡಿದ್ದೇನೆ. ಆದರೆ, ನಮ್ಮ ಚಿತ್ರಕ್ಕೂ ಗೂರ್ಖಾಗೂ ಕಥೆಯು ಸಂಪೂರ್ಣವಾಗಿ ವಿಭಿನ್ನವಾಗಿದೆ. ಆದರೆ, ಕೆಲವು ದೃಶ್ಯಗಳಲ್ಲಿ ಸಾಮ್ಯತೆ ಇರುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡರು.

    ‘ಬೀಸ್ಟ್’ ಮತ್ತು ನೆಟ್‌ಫ್ಲಿಕ್ಸ್ ಸರಣಿಯ ‘ಮನಿ ಹೀಸ್ಟ್’ ನಡುವೆ ಯಾವುದೇ ಸಂಬಂಧವಿಲ್ಲ ಎಂದು ನೆಲ್ಸನ್ ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯವಾಗಿ ನಮ್ಮ ಚಿತ್ರಗಳು ಟ್ರೇಲರ್‌ಗಳಲ್ಲಿ ಸೂಚಿಸುವುದಕ್ಕಿಂತ ಭಿನ್ನವಾಗಿರುತ್ತವೆ ಮತ್ತು ಈ ಚಿತ್ರವೂ ಕೂಡ ಹಾಗೇ ಇರಲಿದೆ ಎಂದು ತಿಳಿಸಿದರು. ದಳಪತಿ ವಿಜಯ್ ಅವರು ನನ್ನನ್ನು ಕರೆದು ತನಗಾಗಿ ಸ್ಕ್ರಿಪ್ಟ್ ಬರೆಯಲು ಹೇಳಿದಾಗ ಅವರು ‘ಬೀಸ್ಟ್​’ ಅನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದಿದ್ದೇನೆ ಎಂದರು. ಈ ಚಿತ್ರವು ಅವರ ಇತ್ತೀಚಿನ ಚಿತ್ರಗಳಿಗಿಂತ ಭಿನ್ನವಾಗಿರುವುದು ಮಾತ್ರವಲ್ಲದೆ ವಿಜಯ್ ಅಭಿಮಾನಿಗಳನ್ನು ಸಂಪೂರ್ಣವಾಗಿ ತೃಪ್ತಿಪಡಿಸುತ್ತದೆ ಎಂದು ಅವರು ಭರವಸೆ ನೀಡಿದರು.

    ಬೀಸ್ಟ್​ ಚಿತ್ರಕ್ಕೆ ಅನಿರುದ್ಧ್ ಅವರ ಸಂಗೀತವಿದೆ ಮತ್ತು ಸನ್ ಪಿಕ್ಚರ್ಸ್‌ನಿಂದ ಅದ್ಧೂರಿಯಾಗಿ ನಿರ್ಮಿಸಲಾಗಿದೆ. ವಿಜಯ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

    ರಷ್ಯಾ ಯೋಧರ ರೇಪ್​ನಿಂದ ತಪ್ಪಿಸಿಕೊಳ್ಳಲು ಯೂಕ್ರೇನ್​ ಯುವತಿಯರ ಈ ನಿರ್ಧಾರ ಮನಕಲಕುವಂತಿದೆ!

    BJP ಸರ್ಕಾರದಲ್ಲಿ HDK ಅವರೇ ಪ್ರಭಾವಿ? ತಹಸೀಲ್ದಾರ್​ ಎತ್ತಂಗಡಿಗೆ ಕೈ ಹಾಕಿದ CPYಗೆ ಕೆಲವೇ ಗಂಟೆಯಲ್ಲಿ ಶಾಕ್

    ಈ ದೇಶದ ರಾಷ್ಟ್ರ ಭಾಷೆ ಹಿಂದಿ ಅನ್ನೋದು ಎಲ್ಲರಿಗೂ ಗೊತ್ತಿದೆ: ಸಿದ್ದರಾಮಯ್ಯಗೆ ಬಿ.ಸಿ. ಪಾಟೀಲ್​ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts