More

    ಐಪಿಎಲ್​ ಮೆಗಾ ಹರಾಜು 2022: ಎರಡನೇ ದಿನದ ಹರಾಜಿನಲ್ಲಿ ಸೇಲಾದ ಮೊದಲ ಆಟಗಾರ ಈತ

    ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಶನಿವಾರ ಆರಂಭವಾಗಿದ್ದು, ಎರಡನೇ ಹಾಗೂ ಅಂತಿಮ ದಿನವಾದ ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಿದೆ.

    ನಿನ್ನೆ ನಡೆದ ಹರಾಜಿನಲ್ಲಿ ಶ್ರೇಯಸ್ ಅಯ್ಯರ್​, ಮೊಹಮ್ಮದ್​ ಶಮಿ, ಫಾಪ್​ ಡುಪ್ಲೆಸಿಸ್​, ಶಿಖರ್​ ಧವನ್​ ಹಾಗೂ ಆರ್​ ಅಶ್ವಿನ್​ ಸೇರಿದಂತೆ ಅನೇಕ ಸ್ಟಾರ್​ ಆಟಗಾರರ ಜತೆಯಲ್ಲಿ ಕೆಲ ದೇಶಿಯ ಪ್ರತಿಭೆಗಳು ಕೂಡ ಬಿಕರಿಯಾಗಿದ್ದರು. ಇಶಾನ್​ ಕಿಶಾನ್​ 15 ಕೋಟಿ ರೂ.ಗೆ ಮುಂಬೈ ತಂಡಕ್ಕೆ ಸೇಲಾಗುವ ಮೂಲಕ ಮೊದಲ ದಿನ ಅತಿ ಹೆಚ್ಚು ಮೊತಕ್ಕೆ ಸೇಲಾದ ಆಟಗಾರನೆಂಬ ಹೆಗ್ಗಳಿಕೆ ಹೊಂದಿದ್ದಾರೆ.

    ಇದೀಗ ಎರಡನೇ ದಿನ ಆರಂಭವಾಗಿರುವ ಹರಾಜಿನಲ್ಲಿ ಮೊದಲ ಆಟಗಾರನಾಗಿ ದಕ್ಷಿಣ ಆಫ್ರಿಕಾದ ಐಡೆನ್​ ಮರ್ಕ್ರಮ್​ ಬಿಕರಿಯಾಗಿದ್ದಾರೆ. ಮರ್ಕ್ರಮ್​ ಅವರನ್ನು ಸನ್​ ರೈಸರ್ಸ್​ ಹೈದರಾಬಾದ್​ ತಂಡ ಖರೀದಿಸಿದೆ. ಉಳಿದಂತೆ ಅಂಜಿಕ್ಯ ರಹಾನೆ 1 ಕೋಟಿ ರೂಪಾಯಿಗೆ ಕೆಕೆಆರ್​ ಪಾಲಾದರೆ, ಮಂದೀಪ್​ ಸಿಂಗ್​ 1.10 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್​ಗೆ ಸೇಲಾಗಿದ್ದಾರೆ.

    ಮಾರ್ನಸ್ ಲ್ಯಾಬುಶೇನ್​ ಮತ್ತು ಇಯಾನ್ ಮಾರ್ಗನ್ ಡೇವಿಡ್​ ಮಲಾನ್​ ಮಾರಾಟವಾಗದೇ ಉಳಿದಿದ್ದಾರೆ. ಹರಾಜು ಪ್ರಕ್ರಿಯೆ ಮುಂದುರಿದಿದೆ. (ಏಜೆನ್ಸೀಸ್​)

    ಐಪಿಎಲ್​ ಮೆಗಾ ಹರಾಜು 2022: ಇಂದಿನ ಹರಾಜಿನಲ್ಲಿ ಸೇಲಾದ ಆಟಗಾರರ ಪಟ್ಟಿ ಇಲ್ಲಿದೆ…

    ಮೈಮಾಟ ಪ್ರದರ್ಶಿಸಿದ ಮಾತ್ರಕ್ಕೆ ಕೆಟ್ಟ ಸಿನಿಮಾ ಉಳಿಯುವುದಿಲ್ಲ: ದೀಪಿಕಾ ಚಿತ್ರದ ವಿರುದ್ಧ ಕಂಗನಾ ಕೆಂಗಣ್ಣು

    ಅಂಗಡಿಯ ಬಾಗಿಲು ಮುಚ್ಚದೇ ಟೀ ಕುಡಿಯಲು ಹೋಗಿದ್ದ ಮಾಲೀಕನಿಗೆ ಕಾದಿತ್ತು ಬಿಗ್​ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts