More

    ಧೋನಿ ಬದಲು ರವೀಂದ್ರ ಜಡೇಜಾರನ್ನು ಮೊದಲು ರಿಟೇನ್ ಮಾಡಿಕೊಂಡಿದ್ದೇಕೆ ಸಿಎಸ್​ಕೆ? ಇಲ್ಲಿದೆ ಅಸಲಿ ಕಾರಣ

    ಬೆಂಗಳೂರು: ಇಂಡಿಯನ್​ ಪ್ರೀಮಿಯರ್​ ಲೀಗ್​ನ 8 ತಂಡಗಳು ತನ್ನಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಉಳಿದ ಆಟಗಾರರನ್ನು ಖರೀದಿಸುವ ಇಡೀ ತಂಡಗಳ ಬಹುದೊಡ್ಡ ಹರಾಜು ಪ್ರಕ್ರಿಯೆಯನ್ನು ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ಬಾರಿ ಐಪಿಎಲ್​ಗೆ ಹೊಸದಾಗಿ ಎರಡು ತಂಡಗಳು ಸೇರಿಕೊಂಡಿದ್ದು, 2022ರ 15ನೇ ಆವೃತ್ತಿಯ ಐಪಿಎಲ್​ಗೆ ಉತ್ಸಾಹ ಇಮ್ಮಡಿಯಾಗಿದೆ.

    ಕೆಲ ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡ ವಿಚಾರಕ್ಕೆ ಬಂದರೆ ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ತಂಡ ಎಲ್ಲರ ಗಮನ ಸೆಳೆದಿದೆ. ಸಿಎಸ್​ಕೆ ತಂಡವೂ ರವೀಂದ್ರ ಜಡೇಜಾ, ಎಂ.ಎಸ್​. ಧೋನಿ, ರುತುರಾಜ್​ ಗಾಯಕವಾಡ್​ ಮತ್ತು ಮೋಯಿನ್​ ಅಲಿಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದು, ಉಳಿದ ಆಟಗಾರರನ್ನು ಬಿಟ್ಟುಕೊಟ್ಟಿದೆ. ಗಮನಾರ್ಹ ಅಂದರೆ ಈ ಬಾರಿ ಸಿಎಸ್​ಕೆ ತನ್ನ ಮೊದಲ ಆಟಗಾರನಾಗಿ 16 ಕೋಟಿ ಸಂಬಳದೊಂದಿಗೆ ರವೀಂದ್ರ ಜಡೇಜಾರನ್ನು ಉಳಿಸಿಕೊಂಡಿತು.

    ಈ ಹಿಂದಿನ ಆವೃತ್ತಿಗಳಲ್ಲಿ ಮೊದಲು ಎಂ.ಎಸ್​. ಧೋನಿ ಅವರನ್ನು ಮೊದಲ ಆಟಗಾರನಾಗಿ ಸಿಎಸ್​ಕೆ ಉಳಿಕೊಂಡು ಬಂದಿತ್ತು. ಆದರೆ, ಈ ಬಾರಿ ಆ ಸಂಪ್ರದಾಯಕ್ಕೆ ಸಿಎಸ್​ಕೆ ಅಂತ್ಯವಾಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೆ, ಅಭಿಮಾನಿಗಳಿಗೂ ಇದೊಂದು ರೀತಿಯಲ್ಲಿ ಶಾಕ್​ ಆಗಿದೆ.

    ಐಪಿಎಲ್​ನಲ್ಲೇ ಸಿಎಸ್​ಕೆ ಶ್ರೇಷ್ಠ ತಂಡ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ಲಾನ್​ ಅನ್ನು ಅಚ್ಚುಕಟ್ಟಾಗಿ ಕಾರ್ಯರೂಪಕ್ಕೆ ತರುವಲ್ಲಿ ಸಿಎಸ್​ಕೆ ಮೇಲುಗೈ ಸಾಧಿಸಿದೆ. ಇದೀಗ ರವೀಂದ್ರ ಜಡೇಜಾರನ್ನು ಮೊದಲ ಆಟಗಾರನಾಗಿ ಉಳಿಸಿಕೊಂಡಿದ್ದರ ಹಿಂದೆ ಒಂದು ಬಲವಾದ ಕಾರಣ ಇದೆ ಎಂದು ಕೆಲವು ವಿಶ್ಲೇಷಣೆಗಳು ನಡೆದಿವೆ.

    ಸಂದರ್ಶನದಲ್ಲಿ ಮಾತನಾಡಿರುವ ರಾಬಿನ್​ ಉತ್ತಪ್ಪ, ಎಂ.ಎಸ್​. ಧೋನಿ ಪ್ಲಾನ್​ ಬಗ್ಗೆ ನನಗೆ ಖಚಿತವಿದೆ. ತಂಡದಲ್ಲಿ ರವೀಂದ್ರ ಜಡೇಜಾ ಮಹತ್ವ ಏನು ಎಂಬುದು ಧೋನಿಗೆ ಚೆನ್ನಾಗಿ ತಿಳಿದಿದೆ. ನಾನು ಕೇಳಿರುವ ಪ್ರಕಾರ ಧೋನಿ ನಿವೃತ್ತಿಯ ಬಳಿಕ ಮುಂದಿನ ಆವೃತ್ತಿಗಳಲ್ಲಿ ಜಡೇಜಾ ಸಿಎಸ್​ಕೆ ನಾಯಕರಾಗಲಿದ್ದಾರೆ ಎಂದು ಹೇಳಿದ್ದಾರೆ.

    ಇನ್ನು ಪೃಥ್ವಿ ಪಟೇಲ್​ ಕೂಡ ಇದೇ ಆಲೋಚನೆಯನ್ನು ಟ್ವೀಟ್​ ಮಾಡಿದ್ದಾರೆ. ಮುಂದಿನ ನಾಯಕ ಸ್ಥಾನಕ್ಕೆ ಈಗಲೇ ಸುಳಿವು ಸಿಕ್ಕಿದೆ. ಜಡೇಜಾ ಓರ್ವ ಉತ್ತಮ ಆಟಗಾರ. ಏಕದಿನ ಪಂದ್ಯಗಳಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿ ಪಂದ್ಯದ ದಿಕ್ಕು ಬದಲಾಯಿಸಿರುವುದನ್ನು ನೋಡಿದ್ದೇವೆ. ಇದೀಗ ನಾಯಕರಾಗಿ ಹೇಗೆ ಆಡಲಿದ್ದಾರೆ ಎಂಬುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇವೆ. ಧೋನಿ ನಿವೃತ್ತಿ ಘೋಷಿಸಿದರೆ, ಜಡೇಜಾ ಜವಬ್ದಾರಿ ಹೊತ್ತುಕೊಳ್ಳಲಿದ್ದಾರೆ ಎಂದು ಪಟೇಲ್​ ಹೇಳಿದ್ದಾರೆ. (ಏಜೆನ್ಸೀಸ್​)

    ಇಂದು ಐಪಿಎಲ್ ಆಟಗಾರರ ರಿಟೇನ್ ಪಟ್ಟಿ ಪ್ರಕಟ; ಯಾರು ರಿಟೇನ್, ಯಾರು ರಿಲೀಸ್?

    ಯಾರಾಗಲಿದ್ದಾರೆ ಆರ್​ಸಿಬಿ ಕ್ಯಾಪ್ಟನ್​? ಇಲ್ಲಿದೆ ನೋಡಿ ಅಭಿಮಾನಿಗಳು ಹಾಗೂ ವಿಶ್ಲೇಷಕರ ಲೆಕ್ಕಾಚಾರ!

    ಹಸೆಮಣೆ ಏರಿದ 65 ವರ್ಷದ ಮೈಸೂರಿನ ವೃದ್ಧಜೋಡಿ: 35 ವರ್ಷದ ಬಳಿಕ ಪ್ರಿಯಕರನ ಸೇರಿದ ಪ್ರೇಯಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts