More

    ವಿಧಿ ನೀನೆಷ್ಟು ಕ್ರೂರಿ? ಭಾರತದಿಂದ ಆಸ್ಕರ್​ ಪ್ರವೇಶ ಪಡೆದ ಗುಜರಾತಿ ಸಿನಿಮಾದ ಬಾಲನಟ ಇನ್ನಿಲ್ಲ

    ನವದೆಹಲಿ: ಇತ್ತೀಚೆಗಷ್ಟೇ ಭಾರತದಿಂದ ಆಸ್ಕರ್​ಗೆ ಆಯ್ಕೆಯಾಗಿರುವ ಗುಜರಾತಿ ಸಿನಿಮಾ ‘ಛೆಲ್ಲೋ ಶೋ’ದಲ್ಲಿ ಬಾಲನಟನಾಗಿ ನಟಿಸಿರುವ ರಾಹುಲ್​ ಕೊಲಿ (10) ಅಕಾಲಿಕ ಮರಣ ಹೊಂದಿದ್ದಾರೆ.

    ಕಳೆದ ನಾಲ್ಕು ತಿಂಗಳಿಂದ ಲುಕೆಮಿಯಾದಿಂದ ಬಳಲುತ್ತಿದ್ದ ರಾಹುಲ್, ಚಿಕಿತ್ಸೆ ಫಲಿಸದೇ​ ನಿನ್ನೆ (ಅ.11) ಕೊನೆಯುಸಿರೆಳೆದಿದ್ದಾರೆ. ಛೆಲ್ಲೋ ಶೋ ಮೂಲಕ ರಾಹುಲ್​ ಗುಜರಾತಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದ. ಈ ಸಿನಿಮಾ 2023ರ ಆಸ್ಕರ್​ಗೆ ಆಯ್ಕೆಯಾಗಿದೆ. ಇಂಗ್ಲಿಷ್​ನಲ್ಲಿ ಈ ಚಿತ್ರದ ಶೀರ್ಷಿಕೆ, ‘ಲಾಸ್ಟ್ ಫಿಲ್ಮ್​ ಶೋ’.

    ಫಿಲ್ಮ್​ ಫೆಡರೇಷನ್​ ಆಫ್ ಇಂಡಿಯಾ 2023ರ ಆಸ್ಕರ್​ಗೆ ಭಾರತದಿಂದ ಗುಜರಾತಿ ಸಿನಿಮಾ ಚೆಲ್ಲೋ ಶೋ ಆಯ್ಕೆ ಆಗಿದೆ ಎಂಬುದಾಗಿ ಸೆ.20ರಂದು ಘೋಷಿಸಿದೆ. 95ನೇ ಅಕಾಡೆಮಿ ಅವಾರ್ಡ್ಸ್​ನ ಬೆಸ್ಟ್​ ಇಂಟರ್​ನ್ಯಾಷನಲ್ ಫೀಚರ್ ಫಿಲ್ಮ್ ಕೆಟಗರಿಯಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳಲಿದೆ.

    ಪಾನ್ ನಳಿನ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಭವಿನ್​ ರಬರಿ, ಭವೇಶ್ ಶ್ರಿಮಲಿ, ರಿಚಾ ಮೀನಾ, ದೀಪೆನ್ ರಾವಲ್, ಪರೇಶ್ ಮೆಹ್ತ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಯ್​ ಕಪೂರ್ ಫಿಲ್ಸ್ಮ್​ ಮತ್ತು ಆರೆಂಜ್​ ಸ್ಟುಡಿಯೊದಿಂದ ನಿರ್ಮಾಣಗೊಂಡಿರುವ ಈ ಸಿನಿಮಾ ಅ. 14ರಂದು ತೆರೆ ಕಾಣಲಿದೆ. (ಏಜೆನ್ಸೀಸ್​)

    ಬೆಂಗ್ಳೂರು ವಿವಿಯಲ್ಲಿ ಬಿಬಿಎಂಪಿಯಿಂದ ಅವೈಜ್ಞಾನಿಕ ಹಂಪ್ಸ್​ ನಿರ್ಮಾಣ: ಒಂದೇ ದಿನ 3 ಅಪಘಾತ, ಕೋಮಾಗೆ ಜಾರಿದ ಬೈಕ್​ ಸವಾರ

    ಒಂದೇ ವೇದಿಕೆಯಲ್ಲಿ ರಮ್ಯಾ-ರಚಿತಾ; ಹೆಡ್ ಬುಷ್ ಪ್ರಿ-ರಿಲೀಸ್​ನಲ್ಲಿ ಸ್ಟಾರ್ ನಟಿಯರು

    ಅನಗತ್ಯ ಅಧಿಕಾರಿಗಳಿಗೆ ಕೊಕ್: 2 ಸಾವಿರ ಹುದ್ದೆಗಳು ರದ್ದು; ಸಂಪುಟ ಉಪಸಮಿತಿ ಶಿಫಾರಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts