More

    ಅವಿಶ್ವಾಸ ನಿರ್ಣಯದಲ್ಲಿ ಇಮ್ರಾನ್​ ಖಾನ್ ಸೋತರೆ ಏನಾಗಬಹುದು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪಾಕ್​ ಸಚಿವ​

    ಇಸ್ಲಮಾಬಾದ್​: ಇಂದು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆಯುತ್ತಿರುವ ಅವಿಶ್ವಾಸ ನಿರ್ಣಯದಲ್ಲಿ ಸೋತರೆ ಪ್ರಧಾನಿ ಇಮ್ರಾನ್​ ಖಾನ್​ ಅಧಿಕಾರದಿಂದ ಕೆಳಗೆ ಇಳಿಯಲಿದ್ದು, ಬಂಧನವಾಗುವ ಸಾಧ್ಯತೆ ಇದೆ ಎಂದು ಪಾಕ್​ ಆಂತರಿಕ ಸಚಿವ ಶೇಖ್​ ರಶೀದ್​ ಅಹ್ಮದ್​ ಭಾನುವಾರ ತಿಳಿಸಿದ್ದಾರೆ.

    ಇಂಡಿಯಾ ಟುಡೆ ಜತೆ ಮಾತನಾಡಿರುವ ಸಚಿವ ಶೇಖ್​ ರಶೀದ್ ಅಹ್ಮದ್​, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ನೇತೃತ್ವದ ಆಡಳಿತಾರೂಢ ಒಕ್ಕೂಟದ 155 ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಮುನ್ನ ಸಾಮೂಹಿಕ ರಾಜೀನಾಮೆ ನೀಡಬಹುದು ಎಂದಿದ್ದಾರೆ. ವಿಶ್ವಾಸ ಮತಯಾಚನೆಯಲ್ಲಿ ಇಮ್ರಾನ್ ಖಾನ್ ಸೋತರೆ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

    ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸುವುದರ ಹಿಂದೆ ವಿದೇಶಿ ಪಿತೂರಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಆಂತರಿಕ ಸಚಿವರು, ಪಾಕಿಸ್ತಾನದ ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಪ್ರಸ್ತುತ ಎದುರಾಗಿರುವ ಎಲ್ಲ ಗೊಂದಲಗಳಿಂದ ಹೊರಬರುವ ಏಕೈಕ ಪರಿಹಾರವೆಂದರೆ ಅವಧಿಪೂರ್ವ ಚುನಾವಣೆಗಳನ್ನು ನಡೆಸುವುದು ಎಂದರು.

    ಇಮ್ರಾನ್​ ಖಾನ್​ ಸರ್ಕಾರ ಮುಂದುವರಿಯಬೇಕೇ? ಅಥವಾ ಬೇಡವೇ? ಎಂಬುದು ಇಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಿರ್ಧಾರವಾಗಲಿದೆ. ಪಾಕಿಸ್ತಾನ ಸಂಸತ್ತಿನ ಕೆಳಮನೆಯಲ್ಲಿ ಒಟ್ಟು 342 ಸದಸ್ಯರ ಬಲವನ್ನು ಹೊಂದಿದೆ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಗಲು ಪ್ರತಿಪಕ್ಷಕ್ಕೆ 172 ಮತಗಳ ಅಗತ್ಯವಿದೆ. ಹಾಗೇ ಪ್ರತಿಪಕ್ಷದ ಪ್ಲಾನ್​ ಅನ್ನು ತಲೆಕೆಳಗಾಗಿಸಲು ಇಮ್ರಾನ್​ಗೂ 172 ಮತಗಳ ಅವಶ್ಯಕತೆ ಇದೆ. (ಏಜೆನ್ಸೀಸ್​)

    ಪಾಕ್​ ಮಾಜಿ ಪ್ರಧಾನಿ ನವಾಜ್​ ಷರೀಫ್​ ಮೇಲೆ ಹಾಲಿ ಪ್ರಧಾನಿ ಇಮ್ರಾನ್​ ಖಾನ್​ ಬೆಂಬಲಿಗರಿಂದ ಹಲ್ಲೆ

    ಅವಿಶ್ವಾಸ ನಿರ್ಣಯದಿಂದ ಪಾಕ್​ ಪಿಎಂ ಇಮ್ರಾನ್​ ಖಾನ್ ಸೇಫ್​ ಆಗ್ತಾರಾ? ಇಂದೇ ಇಮ್ರಾನ್ ಸರ್ಕಾರದ ಭವಿಷ್ಯ ನಿರ್ಧಾರ​

    ನೀವು ನನಗೋಸ್ಕರ ನಾನು ಹೇಳಿದ್ದನ್ನು ಮಾಡಿದ್ರೆ ನಿಮಗೋಸ್ಕರ ನಾನು ಬೆತ್ತಲಾಗ್ತೀನಿ ಅಂದ್ರು ಪೂನಂ ಪಾಂಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts