More

    ಧೋನಿಯಂತೆ ಕೊಹ್ಲಿ ಮೃದುವಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ: ವಿರಾಟ್​ ಕೊಂಡಾಡಿದ ಭಜ್ಜಿ

    ನವದೆಹಲಿ: ಏಕದಿನ ಹಾಗೂ ಟಿ20 ಮಾದರಿಯ ಪಂದ್ಯಗಳ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದ ಬಳಿಕ ವಿರಾಟ್​ ಕೊಹ್ಲಿ ಅಸಮಾಧಾನಗೊಂಡಿರುವುದು ಎಲ್ಲರಿಗೂ ತಿಳಿದಿದೆ. ಬಿಸಿಸಿಐ ಹಾಗೂ ಕೊಹ್ಲಿ ನಡುವೆ ಬಿರುಕು ಮೂಡಿದೆ. ಅಲ್ಲದೆ, ರೋಹಿತ್​ ಜತೆಗೂ ಕೊಹ್ಲಿ ಸಂಬಂಧ ಉತ್ತಮವಾಗಿಲ್ಲ ಎಂಬುದು ಇತ್ತೀಚಿನ ಘಟನೆಗಳಿಂದ ಸಾಬೀತಾಗಿದೆ. ಕೊಹ್ಲಿ ವಿರುದ್ಧ ಸಾಕಷ್ಟು ಪರ-ವಿರೋಧಗಳ ವ್ಯಕ್ತವಾಗುತ್ತಿರುವ ನಡುವೆಯೇ ಇತ್ತೀಚೆಗಷ್ಟೇ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ ವಿದಾಯ ಘೋಷಿಸಿದ ಮಾಜಿ ಟೀಮ್​ ಇಂಡಿಯಾ ಆಟಗಾರ ಹರ್ಭಜನ್​ ಸಿಂಗ್​, ಕೊಹ್ಲಿಯನ್ನು ಕೊಂಡಾಡಿದ್ದಾರೆ.

    ಕೊಹ್ಲಿಯ ಆಕ್ರಮಣಕಾರಿ ಮನೋಭಾವದ ಬಗ್ಗೆ ಮಾತನಾಡಿರುವ ಭಜ್ಜಿ, ಧೋನಿಯಂತೆ ಕೊಹ್ಲಿ ಮೃಧುವಾಗಿದ್ದರೆ, ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇಷ್ಟು ರನ್​ ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಕೊಹ್ಲಿಯ ಆಕ್ರಮಣಕಾರಿ ಮನೋಭಾವವೇ ಭಾರತ ತಂಡವನ್ನು ತವರಿನ ಹೊರಗೆ ಪಂದ್ಯಗಳನ್ನು ಗೆಲ್ಲಲು ಆಡುವ ಸಾಮರ್ಥ್ಯವಾಗಿ ಪರಿವರ್ತಿಸಿದೆ ಎಂದು ಭಜ್ಜಿ ಅಭಿಪ್ರಾಯಪಟ್ಟಿದ್ದಾರೆ.

    ಕೊಹ್ಲಿ ಆಕ್ರಮಣತ್ವ ಟೀಮ್​ ಇಂಡಿಯಾಗೆ ಸಂಪೂರ್ಣ ಹೊಂದಾಣಿಕೆ ಆಗುತ್ತದೆ. ಈ ರೀತಿ ತಂಡವನ್ನು ಮುನ್ನೆಡೆಸುವ ಆಟಗಾರ ಬೇಕಾಗಿದ್ದು, ಕೊಹ್ಲಿ ಅದನ್ನು ಮಾಡಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋದಾಗ ಹೇಗೆ ಟೆಸ್ಟ್​ ಸರಣಿಯನ್ನು ಉಳಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದೆವು. ಆದರೆ, ಕೊಹ್ಲಿ ನಾಯಕತ್ವದಲ್ಲಿ ಆಸ್ಟ್ರೇಲಿಯಾದ ಟೆಸ್ಟ್ ಸರಣಿಯನ್ನು ಹೇಗೆ ಗೆಲ್ಲುತ್ತೇವೆ ಎಂದು ಯೋಚಿಸುವ ರೀತಿ ಬದಲಾದೆವು ಎಂದು ಭಜ್ಜಿ ಹೇಳಿದ್ದಾರೆ.

    ಭಾರತ ಟೆಸ್ಟ್​ ಸರಣಿಯನ್ನು ಸೋತರು ಕೊಹ್ಲಿ ಹೆಚ್ಚು ರನ್​ ಗಳಿಸಿದ್ದ ಒಂದು ಸರಣಿ ನೆನಪಿದೆ. ಭಾರತ 400 ರನ್​ ಗುರಿ ಮುಟ್ಟಬೇಕಿತ್ತು. ಆ ಪಂದ್ಯದಲ್ಲಿ ಕೊಹ್ಲಿ ದೊಡ್ಡ ಮೊತ್ತದ ರನ್​ ಕಲೆಹಾಕಿದ್ದರು. ಕೊಹ್ಲಿ ಪೆವಿಲಿಯನ್​ ಮರಳಿದಾಗ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳಬಹುದಿತ್ತು ಎಂದಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ ಡ್ರಾ ಆದ ಟೆಸ್ಟ್​ಗೆ ಮಹತ್ವ ಇರುವುದಿಲ್ಲ. ನೀವು ಗೆಲ್ಲಿರಿ ಅಥವಾ ಸೋಲಿರಿ ಆ ದಿನ ನಾವು ಹೋರಾಟ ಮಾಡುವುದನ್ನು ಕಲಿಯುತ್ತೇವೆ. ಹಾಗೆಯೇ ನಾವು ಗೆಲ್ಲಲು ಕಲಿಯುತ್ತೇವೆ ಮತ್ತು ಒಂದು ದಿನ ನಾವು ಗೆಲ್ಲುತ್ತೇವೆ ಎಂದಿದ್ದರು ಎಂದು ಭಜ್ಜಿ ಹಳೆಯ ಘಟನೆಯನ್ನು ಮೆಲುಕು ಹಾಕಿದ್ದಾರೆ.

    ಕೊಹ್ಲಿಯ ವಿಧಾನವು ಧೋನಿಯಂತಿದ್ದರೆ, ಅವರು ಎಂದಿಗೂ ಬ್ಯಾಟಿಂಗ್ ಮೈಲಿಗಲ್ಲುಗಳನ್ನು ಸಾಧಿಸುತ್ತಿರಲಿಲ್ಲ ಎಂದು ಭಜ್ಜಿ ಹೇಳಿದ್ದು, ಸದ್ಯ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಸರಣಿಗೆ ಶುಭ ಹಾರೈಸಿದ್ದಾರೆ. (ಏಜೆನ್ಸೀಸ್​)

    ಇಂದು ಅಥ್ಲೀಟ್ಸ್ ಪೂವಮ್ಮ-ಜಿತಿನ್ ಮದುವೆ, ಕ್ರೀಡಾ ದಂಪತಿ ಪಟ್ಟಿಗೆ ಹೊಸ ಸೇರ್ಪಡೆ

    ಅನಿವಾಸಿ ಭಾರತೀಯರ ಕೂಗಿಗೆ ಕಿವುಡಾದ ಸರ್ಕಾರ: ಕರ್ನಾಟಕ ಎನ್​ಆರ್​ಐ ಸಮಿತಿ ನಿಷ್ಕ್ರಿಯ; ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಸಮಸ್ಯೆ ಕೇಳುವವರಿಲ್ಲ

    ಶಿವಪುರದಲ್ಲಿ ಸಂಸ್ಥಾಪನಾ ದಿನ, ಕಾಂಗ್ರೆಸ್ ಶಕ್ತಿ ಪ್ರದರ್ಶನ: ಮೇಕೆದಾಟು ಅಭಿಯಾನ, ಮುಂಬರುವ ಚುನಾವಣೆಗೆ ಕಹಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts