More

    U19 World Cup: ಯಶ್​ ಧುಲ್​-ಶೇಕ್​ ರಶೀದ್ ಬ್ಯಾಟಿಂಗ್​​ ಅಬ್ಬರಕ್ಕೆ ಆಸಿಸ್​ ಧೂಳೀಪಟ: ಫೈನಲ್​ಗೆ ಲಗ್ಗೆಯಿಟ್ಟ ಭಾರತ

    ಆಂಟಿಗುವಾ: ನಾಯಕ ಯಶ್​ ಧುಲ್​ (110) ಹಾಗೂ ಉಪನಾಯಕ ಶೇಕ್​ ರಶೀದ್​ (94) ಅಮೋಘ ಬ್ಯಾಟಿಂಗ್​ ನೆರವಿನಿಂದ ಅಂಡರ್​ 19 ವಿಶ್ವಕಪ್​ ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿಯುವ ಮೂಲಕ ಟೀಮ್​ ಇಂಡಿಯಾ ಸತತ ನಾಲ್ಕನೇ ಬಾರಿಗೆ ಫೈನಲ್​ ಪ್ರವೇಶಿಸಿದೆ. ವಿಶ್ವಕಪ್​ ಟ್ರೋಫಿಗಾಗಿ ಫೈನಲ್​ನಲ್ಲಿ ಇಂಗ್ಲೆಂಡ್​ ತಂಡವನ್ನು ಭಾರತ ಎದುರಿಸಲಿದೆ.

    ಆಂಟಿಗುವಾದ ಕೂಲಿಡ್ಜ್​ ಕ್ರಿಕೆಟ್​ ಗ್ರೌಂಡ್​ನಲ್ಲಿ ಬುಧವಾರ ನಡೆದ ಮಹತ್ವದ ಸೆಮಿಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 290 ರನ್​ ಕಲೆಹಾಕಿತು.

    ಟೀಮ್​ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಆಂಗ್ಕ್ರಿಶ್ ರಘುವಂಶಿ (6) ಮತ್ತು ಹರ್ನೂರ್​ ಸಿಂಗ್​ (16) ಉತ್ತಮ ಅಡಿಪಾಯ ಹಾಕುವಲ್ಲಿ ವಿಫಲವಾದರು. ಕೇವಲ 37 ರನ್​ಗೆ​ 2 ವಿಕೆಟ್​ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ಭಾರತಕ್ಕೆ ಮೂರನೇ ಕ್ರಮಾಂಕದಲ್ಲಿ ಬಂದ ಶೇಕ್​ ರಶೀದ್​ ಮತ್ತು ನಾಯಕ ಯಶ್​ ಧುಲ್​ ಆಸರೆಯಾದರು. ರಶೀದ್​ ಅವರು 8 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನೊಂದಿಗೆ 108 ಎಸೆತಗಳಲ್ಲಿ 94 ರನ್​ ಗಳಿಸಿ ಶತಕ ವಂಚಿತರಾದರು. ಆದರೆ, ಉತ್ತಮ ಜತೆಯಾಟದೊಂದಿಗೆ ತಂಡದ ಮೊತವನ್ನು 200ರ ಗಡಿ ದಾಟಿಸಿದರು. ರಶೀದ್​ ಔಟ್ ಆಗುವ ವೇಳೆ ತಂಡದ ಸ್ಕೋರ್​ 241 ಆಗಿತ್ತು.

    ಇತ್ತ ನಾಯಕನ ಜವಬ್ದಾರಿಯುತ ಆಟ ಮುಂದುವರಿಸಿದ ಯಶ್​ ಧುಲ್​ 110 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನೊಂದಿಗೆ 110 ರನ್​ ಕಲೆಹಾಕುವ ಮೂಲಕ ಶತಕ ಸಂಭ್ರಮಿಸಿದರು. ಬಳಿಕ ರನ್​ ಕದಿಯುವ ಆತುರದಲ್ಲಿ ರನೌಟ್​ ಆಗಿ ನಿರ್ಗಮಿಸಿದರು. ಆದರೆ, ಅಷ್ಟರಲ್ಲಾಗಲೇ ತಂಡದ ಸ್ಕೂರ್​ 250ರ ಗಡಿ ದಾಟಿತ್ತು. ಉಳಿದಂತೆ ರಾಜವರ್ಧನ್ ಹಂಗರಗೇಕರ್ 13 ರನ್ ಗಳಿಸಿದರೆ, ನಿಶಾಂತ್​ ಸಿಂಧು (12*) ಮತ್ತು ದಿನೇಶ್​ ಬನ (20*) ರನ್​ ಕಾಣಿಕೆ ನೀಡಿ ಅಜೇಯರಾಗಿ ಉಳಿದರು.

    ಆಸ್ಟ್ರೇಲಿಯಾ ಪರ ಜ್ಯಾಕ್​ ನಿಬೆಟ್​ ಮತ್ತು ವಿಲಿಯಂ ಸಾಲ್ಜಮನ್​ ತಲಾ ಎರಡು ವಿಕೆಟ್​ ಪಡೆದರು. ಆದರೆ, ಉಳಿದ ಬೌಲರ್​ಗಳು ಕೂಡ ಟೀಮ್​ ಇಂಡಿಯಾವನ್ನು ಕಟ್ಟಿಹಾಕುವಲ್ಲಿ ವಿಫಲವಾದರು.

    ಟೀಮ್​ ಇಂಡಿಯಾ ನೀಡಿದ 291 ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 41.5 ಓವರ್​ಗಳಲ್ಲಿ 194 ರನ್​ಗೆ ಸರ್ವಪತನ ಕಂಡಿತು. ಆಸಿಸ್​ ಪರ ಆರಂಭಿಕರಾಗಿ ಕಣಕ್ಕಿಳಿದ ಟೀಗ್ ವೈಲ್ಲಿ 3 ರನ್​ಗೆ ವಿಕೆಟ್​ ಒಪ್ಪಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಕ್ಯಾಂಪ್ಬೆಲ್ ಕೆಲ್ಲವೇ (30), ಕೋರೆ ಮಿಲ್ಲರ್ (38) ಮತ್ತು ಲಾಚ್ಲಾನ್ ಶಾ (51) ಬಿಟ್ಟರೆ ಉಳಿದ ಯಾವ ಆಟಗಾರನು ಕೂಡ ಉತ್ತಮ ನಿರ್ವಹಣೆ ತೋರಲಿಲ್ಲ.

    ಟೀಮ್​ ಇಂಡಿಯಾ ಪರ ಮಾರಕ ಬೌಲಿಂಗ್​ ದಾಳಿ ನಡೆಸಿದ ವಿಕ್ಕಿ ಒಸ್ತಾವಲ್​ 3 ವಿಕೆಟ್​ ಕಬಳಿಸಿದರೆ, ಕಳೆದ ಪಂದ್ಯದ ಹೀರೋ ರವಿ ಕುಮಾರ್​ ಮತ್ತು ನಿಶಾಂತ್​ ಸಿಂಧು ತಲಾ ಎರಡು ವಿಕೆಟ್​ ಉರುಳಿಸಿದರು. ಉಳಿದಂತೆ ಕುಶಾಲ್​ ತಂಬೆ ಮತ್ತು ಆಂಗ್ಕ್ರಿಶ್ ರಘುವಂಶಿ ತಲಾ ಒಂದೊಂದು ವಿಕೆಟ್​ ಕಬಳಿಸಿದರು. (ಏಜೆನ್ಸೀಸ್​)

    ಈ ಫೋಟೋ ನಕಲಿ! ಕೆಟ್ಟದಾಗಿ ತಿರುಚಿದ ಫೋಟೋ ವಿರುದ್ಧ ಗುಡುಗಿದ ನಟಿ ಮಾಳವಿಕ ಮೋಹನನ್​

    ಪಬ್​ಜಿಗೆ ದಾಸನಾಗಿ ಕುಟುಂಬವನ್ನೆ ಕೊಂದ ಬಾಲಕನ ಮಾತು ಕೇಳಿ ಪಾಕ್​ ಪೊಲೀಸರೇ ಶಾಕ್​! PUBG ಬ್ಯಾನ್​ಗೆ ಆಗ್ರಹ

    ಶ್ರೀಲಂಕಾ ವಿರುದ್ಧ ಬೆಂಗಳೂರಿನಲ್ಲಿ ಅಹರ್ನಿಶಿ ಟೆಸ್ಟ್, ಪಿಂಕ್​ ಬಾಲ್​ ಪಂದ್ಯಕ್ಕೆ ಚಿನ್ನಸ್ವಾಮಿ ಆತಿಥ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts