More

    ಟಿ20 ವಿಶ್ವಕಪ್​ 2022: ಕೇವಲ 5 ನಿಮಿಷದಲ್ಲೇ ಇಂಡೋ-ಪಾಕ್​ ಪಂದ್ಯದ ಟಿಕೆಟ್​ ಸೋಲ್ಡ್​ ಔಟ್​!

    ನವದೆಹಲಿ: ಈ ವರ್ಷದ ಅಕ್ಟೋಬರ್​ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡವು ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಹೈವೋಲ್ಟೇಜ್​ ಪಂದ್ಯ ವೀಕ್ಷಿಸಲು ಕೋಟ್ಯಂತರ ಕ್ರೀಡಾಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

    ತಾಜಾ ಬೆಳವಣಿಗೆ ಏನೆಂದರೆ ಕ್ರೀಡಾಂಗಣದಲ್ಲಿ ನೇರವಾಗಿ ಇಂಡೋ-ಪಾಕ್​ ಕ್ರಿಕೆಟ್​ ಕದನ ವೀಕ್ಷಿಸಲು ಎಂದಿನಂತೆ ಟಿಕೆಟ್​ಗೆ ಭಾರೀ ಬೇಡಿಕೆ ಇದ್ದೇ ಇರುತ್ತದೆ. ಅದರಂತೆಯೇ ಈ ಬಾರಿಯು ಟಿಕೆಟ್ ಮಾರಾಟ ಆರಂಭವಾದ​ ಕೇವಲ 5 ನಿಮಿಷದಲ್ಲಿ ಎಲ್ಲ ಟಿಕೆಟ್​ ಸೋಲ್ಡ್​ ಔಟ್​ ಆಗಿದೆ.

    ಅಕ್ಟೋಬರ್ 16 ರಿಂದ ನವೆಂಬರ್ 16 ರವರೆಗೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್​ ಟೂರ್ನಿ ನಡೆಯಲಿದೆ. ಒಟ್ಟು 45 ಪಂದ್ಯಗಳಲ್ಲಿ ಪೂರ್ವ ಮಾರಾಟದ ಅವಧಿಯಲ್ಲಿ 200,000 ಟಿಕೆಟ್‌ಗಳು ಮಾರಾಟವಾದ ನಂತರ ಸಾಮಾನ್ಯ ಟಿಕೆಟ್​ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ. ಇಂದು ಕೇವಲ 5 ನಿಮಿಷದಲ್ಲೇ ಇಂಡೋ-ಪಾಕ್​ ಪಂದ್ಯದ ಟಿಕೆಟ್​ಗಳು ಮಾರಾಟವಾಗಿದೆ.

    ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಪುರುಷರ ಟಿ20 ವಿಶ್ವಕಪ್​ ಟೂರ್ನಿಗೆ 800,000 ಕ್ಕೂ ಹೆಚ್ಚು ಅಭಿಮಾನಿಗಳು ಹಾಜರಾಗುವ ನಿರೀಕ್ಷೆಯಿದೆ. ಸಾಮಾನ್ಯ ಸಾರ್ವಜನಿಕ ಮಾರಾಟದಲ್ಲಿ ಇಂಡೋ-ಪಾಕ್​ ಬಿಟ್ಟು ಇತರ ಎಲ್ಲಾ ಪಂದ್ಯಗಳಿಗೆ ಟಿಕೆಟ್​ಗಳನ್ನು ಪಡೆಯಲು ಅಭಿಮಾನಿಗಳಿಗೆ ಇನ್ನೂ ಸಾಕಷ್ಟು ಅವಕಾಶಗಳಿವೆ. ಆದರೆ, ಇಂಡೋ ಪಾಕ್​ ಪಂದ್ಯಗಳ ಟಿಕೆಟ್​ ಮಾತ್ರ ಭರ್ಜರಿ ಮಾರಾಟವಾಗಿದೆ.

    ಈ ಬಗ್ಗೆ ಮಾತನಾಡಿರುವ ಐಸಿಸಿ ಪುರುಷರ T20 ವಿಶ್ವಕಪ್-2022 ಟೂರ್ನಿಯ ಸ್ಥಳೀಯ ಸಂಘಟನಾ ಸಮಿತಿಯ ಸಿಇಒ ಮಿಚೆಲ್ ಎನ್‌ರೈಟ್, ಅಭಿಮಾನಿಗಳ ಪ್ರತಿಕ್ರಿಯೆ ಅದ್ಭುತವಾಗಿದೆ. ಆದ್ಯತೆಯ ಆಧಾರದ ಮೇಲೆ ಪೂರ್ವ-ಮಾರಾಟದಲ್ಲಿ ಟಿಕೆಟ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

    ಅಕ್ಟೋಬರ್​ 16 ರಿಂದ ಆರಂಭವಾಗಲಿರುವ ವಿಶ್ವಕಪ್​ ನವೆಂಬರ್​ 16ಕ್ಕೆ ಅಂತ್ಯವಾಗಲಿದೆ. ಈ ಬಾರಿ ಟಿ20 ವಿಶ್ವಕಪ್​ ಆತಿಥ್ಯವನ್ನು ಆಸ್ಟ್ರೇಲಿಯಾ ವಹಿಸಿದೆ. ಕಳೆದ ಬಾರಿಯ ವಿಶ್ವಕಪ್​ನಂತೆಯೇ ಈ ಬಾರಿಯು ಟೀಮ್​ ಇಂಡಿಯಾ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯ ಎದುರಿಸಲಿದೆ. ಅಕ್ಟೋಬರ್​​ 23ರಂದು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕ್ರಿಕೆಟ್​ ಕದನಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. ಮೆಲ್ಬೋರ್ನ್​ ಸ್ಟೇಡಿಂಯಲ್ಲಿ ಪಂದ್ಯ ನಡೆಯಲಿದೆ.

    ಒಟ್ಟು 16 ತಂಡಗಳು ಭಾಗವಹಿಸಲಿದ್ದು, 45 ಪಂದ್ಯಗಳು ನಡೆಯಲಿವೆ. ಇತಿಹಾಸದಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಪುರುಷರ ಆವೃತ್ತಿಯ ಟಿ20 ವಿಶ್ವಕಪ್​ ಆತಿಥ್ಯವನ್ನು ವಹಿಸಿದೆ. ಈ ಹಿಂದೆ ಅಂದರೆ, 2020ರ ಫೆಬ್ರವರಿ-ಮಾರ್ಚ್​ನಲ್ಲಿ ಮಹಿಳಾ ಟಿ20 ವಿಶ್ವಕಪ್​ ಆತಿಥ್ಯ ವಹಿಸಿತ್ತು.

    ಟಿ20 ಪಂದ್ಯಗಳು ಆಸ್ಟ್ರೇಲಿಯಾದ ಅಡಿಲೇಡ್​, ಬ್ರಿಸ್ಬೇನ್​, ಗೀಲಾಂಗ್​, ಹೋಬರ್ಟ್​, ಮೆಲ್ಬೋರ್ನ್​, ಪರ್ತ್​ ಮತ್ತು ಸಿಡ್ನಿ ಮೈದಾನಗಳಲ್ಲಿ ನಡೆಯಲಿವೆ.

    ಭಾರತದ ವೇಳಾಪಟ್ಟಿ ಹೀಗಿದೆ…
    1. ಅಕ್ಟೋಬರ್​ 23: ಎದುರಾಳಿ ಪಾಕಿಸ್ತಾನ, ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​
    2. ಅಕ್ಟೋಬರ್​ 27: ಎದುರಾಳಿ ಗ್ರೂಪ್​ ಎ ರನ್ನರ್​ ಅಪ್​, ಸಿಡ್ನಿ ಕ್ರಿಕೆಟ್​ ಗ್ರೌಂಡ್​
    3. ಅಕ್ಟೋಬರ್ 30: ಎದುರಾಳಿ ದಕ್ಷಿಣ ಆಫ್ರಿಕಾ, ಪರ್ತ್​ ಸ್ಟೇಡಿಯಂ
    4. ನವೆಂಬರ್​ 02: ಎದುರಾಳಿ ಬಾಂಗ್ಲಾದೇಶ, ಅಡಿಲೇಡ್​ ಓವಲ್​
    5. ನವೆಂಬರ್​ 06: ಎದುರಾಳಿ ಗ್ರೂಪ್​ ಬಿ ವಿನ್ನರ್​, ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​

    2021ರ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಗ್ರೂಪ್​ ಹಂತದಲ್ಲೇ ಟೂರ್ನಿಯಿಂದ ಹೊರ ನಡೆದಿತ್ತು. ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ ಮುಗ್ಗರಿಸಿತ್ತು. ಅಲ್ಲದೆ, ನ್ಯೂಜಿಲೆಂಡ್​ ವಿರುದ್ಧವೂ ಸೋತಿತ್ತು. ಅಫ್ಘಾನಿಸ್ತಾನ, ಸ್ಕಾಟ್​ಲೆಂಡ್​ ಮತ್ತು ನಮಿಬಿಯಾ ವಿರುದ್ಧ ಗೆಲುವು ದಾಖಲಿಸಿದರೂ ಸಹ ಸಮಿಫೈನಲ್​ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಕಳೆದ ವರ್ಷದ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡಿತು. (ಏಜೆನ್ಸೀಸ್​)

    ಅದ್ಧೂರಿಯಾಗೇ ನಡೆಯಿತು ಕಿರಿಮಗಳ ಮದ್ವೆ: ಮೂರೇ ತಿಂಗಳಲ್ಲಿ ಅಪ್ಪ, ಅಮ್ಮ, ಅಣ್ಣನ ದುರಂತ ಸಾವು

    ರಾಜ್ಯದ ಹಲವು ಜಿಲ್ಲೆಗೆ ವ್ಯಾಪಿಸಿದ ಹಿಜಾಬ್​ ವಿವಾದ: ಕಾಲೇಜುಗಳ ಬಳಿ ಬಿಗುವಿನ ವಾತಾವರಣ ಸೃಷ್ಟಿ

    ಕರೊನಾಗೆ ಗಂಡ ಬಲಿ: ಕಂಗಾಲಾದ ಪತ್ನಿ-ಮಗ: ವಿಧವೆಗೆ ಬಾಳು ಕೊಟ್ಟು ಮಾದರಿಯಾದ ಮೃತನ ಸ್ನೇಹಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts