More

    ವಾಹನ ಸವಾರರನ್ನ ಅಡ್ಡಗಟ್ಟಿ ಮೊಬೈಲ್ ಕಿತ್ತುಕೊಂಡು ಆ ಒಂದು ಪದಕ್ಕಾಗಿ ಹುಡುಕಾಡಿದ ಪೊಲೀಸರು..!

    ಹೈದರಾಬಾದ್​: ಪೊಲೀಸರು ವಾಹನಗಳನ್ನು ತಡೆದು ದಾಖಲಾತಿಗಳ ಪರಿಶೀಲನೆ ನಡೆಸುವುದನ್ನು ಕಂಡಿದ್ದೇವೆ. ಆದರೆ, ಹೈದರಾಬಾದ್​ ಪೊಲೀಸರು ಮಾಡುತ್ತಿರುವುದೇ ಬೇರೆ. ವಾಹನಗಳನ್ನು ತಡೆದು ಮೊಬೈಲ್​ ಫೋನ್​ಗಳನ್ನು ಪಡೆದು ಗಾಂಜಾ ಅಥವಾ ಡ್ರಗ್ಸ್​ ಬಗ್ಗೆ ಚಾಟ್​ ಮಾಡಿದ್ದಾರಾ ಎಂದು ಪರಿಶೀಲನೆ ಮಾಡುತ್ತಿದ್ದಾರಂತೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದು ಖಾಸಗಿತನದ ಧಕ್ಕೆ ಎಂದು ಪೊಲೀಸರ ನಡೆಯನ್ನು ಖಂಡಿಸಿದ್ದಾರೆ.

    ಹೈದರಾಬಾದ್​ ಪೊಲೀಸ್​ ಸಿಬ್ಬಂದಿ ನಗರದಲ್ಲಿ ಡ್ರಗ್ಸ್​ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದು, ಅದರ ಭಾಗವಾಗಿ ಎಲ್ಲ ವಾಹನಗಳನ್ನು ತಡೆದು, ಅದರಲ್ಲೂ ದ್ವಿಚಕ್ರ ವಾಹನ ಸವಾರರನ್ನು ನಿಲ್ಲಿಸಿ ಅವರ ಮೊಬೈಲ್​ ಫೋನ್​ಗಳನ್ನು ಪಡೆದುಕೊಂಡು ಡ್ರಗ್ಸ್​ ಎಂಬ ಪದವನ್ನು ಸರ್ಚ್​ ಮಾಡುತ್ತಿರುವುದು ವೈರಲ್​ ಆಗಿರುವ ವಿಡಿಯೋದಲ್ಲಿದೆ.

    ಈ ಬಗ್ಗೆ ಮಾತನಾಡಿರುವ ದಕ್ಷಿಣ ವಲಯದ ಡಿಸಿಪಿ ಗಜರಾವ್, ಸುಮಾರು 100 ಪೊಲೀಸ್​ ಸಿಬ್ಬಂದಿ ಬಹದುರ್​ಪುರ ಪೊಲೀಸ್​ ಠಾಣಾ ವ್ಯಾಪ್ತಿಯ ಅಸಾದಬಾಬಾ ನಗರದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುಮಾರು 58 ವಾಹನಗಳನ್ನು ಪೊಲೀಸ್​ ಸಿಬ್ಬಂದಿ ಹುಡುಕಾಡಿದ್ದಾರೆ. ಈ ವೇಳೆ 10 ರೌಡಿ ಶೀಟರ್‌ಗಳನ್ನು ವಶಕ್ಕೆ ಪಡೆದು ಅಪರಾಧ ಚಟುವಟಿಕೆಗಳಿಂದ ದೂರವಿರುವಂತೆ ಸಲಹೆ ನೀಡಡಲಾಗಿದೆ. ಕಳೆದ ಎರಡು ತಿಂಗಳಿನಿಂದ, ಹೈದರಾಬಾದ್ ಕಮಿಷನರೇಟ್‌ನಲ್ಲಿ ಡ್ರಗ್ಸ್, ಗಾಂಜಾ ವಿರುದ್ಧ ವಿಶೇಷ ಅಭಿಯಾನ ನಡೆಸುತ್ತಿದ್ದೇವೆ ಮತ್ತು ಉಲ್ಲಂಘಿಸುವವರನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

    ಫೋನ್ ಹುಡುಕಾಟದ ವೀಡಿಯೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಕಾರ್ಯಕರ್ತ ಶ್ರೀನಿವಾಸ್ ಕೊಡಾಲಿ, ಹೊಸ ಪೊಲೀಸ್ ಅಭ್ಯಾಸಗಳ ಎಚ್ಚರಿಕೆ ಬಂದಿದೆ. ಹೈದರಾಬಾದ್ ಪೊಲೀಸರು ವಾಹನಗಳನ್ನು ನಿಲ್ಲಿಸಿ, ಫೋನ್ ಚಾಟ್‌ಗಳನ್ನು ಕೆದಕುತ್ತಿದ್ದಾರೆ. ಗಾಂಜಾ ಮುಂತಾದ ಪದಗಳಿಗಳನ್ನು ಹುಡುಕುತ್ತಿದ್ದಾರೆ. ಪೊಲೀಸರು ಎನ್​ಆರ್​ಸಿ, ಮೋದಿ ಅಥವಾ ಬಿಜೆಪಿ ಪದಗಳನ್ನು ಬದಲಿಸುವವರೆಗೆ ಕಾಯಿರಿ ಎಂದು ವ್ಯಂಗ್ಯವಾಡಿದ್ದಾರೆ.

    ನೆಟ್ಟಿಗರು ಸಹ ಪೊಲೀಸರ ನಡೆಯ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಇದು ಖಾಸಗಿತನದ ಧಕ್ಕೆ ಎಂದಿದ್ದಾರೆ. ಮುಂದಿನ ಬಾರಿ ಪೊಲೀಸರು ನಮ್ಮನ್ನು ತಡೆದು ನಮ್ಮ ಪಾಕೆಟ್​ನಲ್ಲಿ ಎಷ್ಟು ಹಣ ಇದೆ? ನೋಟು ಎಷ್ಟಿದೆ? ಚಿಲ್ಲರೆ ಎಷ್ಟಿದೆ? ಕ್ರೆಡಿಟ್​ ಕಾರ್ಡ್ಸ್​ ಮುಂತಾದವುಗಳ ಬಗ್ಗೆ ಕೇಳುತ್ತಾರೆಂದು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಮಧ್ಯರಾತ್ರಿ ಗರ್ಲ್​ಫ್ರೆಂಡ್ ಬೆಡ್​ರೂಮ್​ ಬಾಗಿಲು ಬಡಿದ ಯುವಕ: ಕದ ತೆರೆದವಳಿಗೆ ಕಾದಿತ್ತು ಶಾಕ್​..!

    ದಕ್ಷಿಣ ಭಾರತದ ಚಿತ್ರಗಳಲ್ಲಿ ಈವರೆಗೂ ನಟಿಸದಿರಲು ಜಾಹ್ನವಿ ಕಪೂರ್​ ಕೊಟ್ಟ ಕಾರಣ ಹೀಗಿದೆ..!

    ಶಾರುಖ್‌ರಿಂದ ದೀಪಾವಳಿ ಸಂದೇಶ ಕೊಡಿಸಿದ ಕ್ಯಾಡ್‌ಬರೀಸ್‌ಗೆ ಗ್ರಹಚಾರ- ಶುರುವಾಯ್ತು ಬೈಕಾಟ್‌ ಅಭಿಯಾನ

    ಮಣಿಪಾಲ್​ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts