More

    ಕೆಲಸ ಮುಗಿಸಿಕೊಂಡು ಖುಷಿಯಿಂದಲೇ ಮನೆಗೆ ಮರಳಿದ ಪತಿಗೆ ಕಾದಿತ್ತು ಭಾರೀ ಆಘಾತ..!

    ಹೈದರಾಬಾದ್​: ಇಬ್ಬರು ಮಕ್ಕಳೊಂದಿಗೆ ಮಹಿಳೆಯೊಬ್ಬಳು ನಾಪತ್ತೆಯಾಗಿರುವ ಘಟನೆ ಹೈದರಾಬಾದ್​ನ ಚಂದ್ರಯಾನಗುಟ್ಟ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಸೈಯದ್​ ಸಮ್ಯಿದ್ದೀನ್​ ಮತ್ತು ಮುಶ್ರತ್​ ಅನ್ಸಾರಿ (24) ದಂಪತಿ ಚಂದ್ರಾಯನಗುಟ್ಟ ಹಷ್ಮಾಬಾದ್ ಏರಿಯಾದ ನಿವಾಸಿಗಳು. ದಂಪತಿಗೆ ಸೈದಾ ಜೈನಾ ಫಾತಿಮಾ (5) ಮತ್ತು ಸೈದಾ ಜೋಹಾ ಫಾತಿಮಾ (2) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    ಇದೇ ತಿಂಗಳ 21ರಂದು ಸೈಯದ್​ ಕೆಲಸಕ್ಕೆಂದು ಮನೆ ಬಿಟ್ಟು ಹೋದ. ಕೆಲಸ ಮುಗಿಸಿಕೊಂಡು ಮನೆಗೆ ಬಂದು ನೋಡಿದಾಗ ಆತನಿಗೆ ಕಾದಿತ್ತು. ಪತ್ನಿ ಮತ್ತು ಮಕ್ಕಳು ಕಾಣುತ್ತಿರಲಿಲ್ಲ. ಎಷ್ಟೇ ಹುಡುಕಾಡಿದರೂ ಕೂಡ ಮೂವರ ಸುಳಿವು ಸಿಕ್ಕೇ ಇಲ್ಲ. ಪತ್ನಿಯ ಮೊಬೈಲ್​ಗೆ ಫೋನ್​ ಮಡಿದರೂ ಕೂಡ ಸ್ವಿಚ್​ ಆಫ್​ ಆಗಿದೆ.

    ಸಂಬಂಧಿಕರ ಮನೆ ಸೇರಿದಂತೆ ಎಲ್ಲ ಕಡೆಗಳಲ್ಲೂ ಹುಡುಕಾಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಸೈಯದ್​ ಚಂದ್ರಯಾನಗುಟ್ಟ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ನಾಪತ್ತೆ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ದಲಿತ ವ್ಯಕ್ತಿಯ ಅಂತ್ಯಕ್ರಿಯೆಗೆ ಅಡ್ಡಿ: ತೆಗೆದಿದ್ದ ಗುಂಡಿ ಮುಚ್ಚಿಸಿ ಅಮಾನವೀಯತೆ ಮೆರೆದ ಪೊಲೀಸರು

    30.26 ಲಕ್ಷ ರೈತರಿಗೆ 19,370 ಕೋಟಿ ರೂ. ಸಾಲ: ಸಾಲ ಮನ್ನಾ ಯೋಚನೆ ಇಲ್ಲ, ಬಲವಂತದ ಸಾಲ ವಸೂಲಿಯೂ ಇಲ್ಲ

    ಬಿಜೆಪಿಯಲ್ಲಿ ಸಂಪುಟ ಸಂಚಲನ: ಆಕಾಂಕ್ಷಿಗಳಿಂದ ಹೆಚ್ಚಿದ ಒತ್ತಡ; ಗರಿಗೆದರಿದ ರಾಜಕೀಯ ಚಟುವಟಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts