More

    ಕೋವಿಡ್​ ಟೈಂನಲ್ಲಿ ಪ್ರಾಣ ಪಣಕ್ಕಿಟ್ಟು ಕೆಲ್ಸ ಮಾಡಿದ ಪೈಲಟ್​ಗೆ 85 ಕೋಟಿ ದಂಡ! ಸರ್ಕಾರ ಕೊಟ್ಟ ಕಾರಣವಿದು

    ಭೋಪಾಲ್​: ಮಹಾಮಾರಿ ಕೋವಿಡ್​ 19 ಸಾಂಕ್ರಮಿಕ ಸಮಯದಲ್ಲಿ ಪ್ರಾಣ ಪಣಕ್ಕಿಟ್ಟು ಕರೊನಾ ವಾರಿಯರ್ಸ್​ ಆಗಿ ಸೇವೆ ಸಲ್ಲಸಿದ ಪೈಲಟ್​ಗೆ ಸರ್ಕಾರ ಶಾಕ್​ ನೀಡಿದೆ. ಕಳೆದ ವರ್ಷ ಒಂದು ಸಣ್ಣ ವಿಮಾನ ಮಧ್ಯ ಪ್ರದೇಶದ ಗ್ವಾಲಿಯರ್​ನಲ್ಲಿ ಪತನವಾಗಿತ್ತು. ಇದೀಗ ಆ ಪ್ರಕರಣದಲ್ಲಿ ಮಧ್ಯಪ್ರದೇಶ ಸರ್ಕಾರ ಪೈಟಲ್​ಗೆ ಬರೋಬ್ಬರಿ 85 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ.

    ವೈರಸ್​ ಹರಡುತ್ತಿರುವ ಸಮಯದಲ್ಲಿ ಪೈಲಟ್​ ಕ್ಯಾಪ್ಟನ್​ ಮಜೀದ್​ ಅಖ್ತರ್​ ತನ್ನ ಸಹ ಪೈಲಟ್​ ಜತೆಯಲ್ಲಿ ಕರೊನಾ ಸ್ಯಾಂಪಲ್​ ಮತ್ತು ಔಷಧಿಗಳನ್ನು ಸರ್ಕಾರದ ವಿಮಾನದಲ್ಲಿ ಸಾಗಿಸುತ್ತಿದ್ದರು. ಕಳೆದ 2021ರ ಮೇ 6ರಂದು ಮಜೀದ್​ ಅಖ್ತರ್​ ಅವರು ಅಹಮದಾಬಾದ್​ನಿಂದ ಗ್ವಾಲಿಯರ್​ಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ವಿಮಾನದಲ್ಲಿ 71 ಬಾಕ್ಸ್​ ರೆಮಿಡಿಸೀವರ್​ ಡ್ರಗ್ಸ್​ ಸಾಗಿಸಲಾಗುತ್ತಿತ್ತು. ಆದರೆ, ಗ್ವಾಲಿಯರ್​ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ಆಗುವ ವೇಳೆ ಅನಿರೀಕ್ಷಿತ ಅಪಘಾತವೊಂದು ಸಂಭವಿಸಿತ್ತು.

    ವಿಮಾನ ನಿಲ್ದಾಣದ ರನ್​ವೇ ಮೇಲೆ ಅಳವಡಿಸಿದ್ದ ಅರೆಸ್ಟರ್ ತಡೆಗೋಡೆಗೆ ಅಪ್ಪಳಿಸಿತು. ಈ ವೇಳೆ ವಿಮಾನದ ಒಳಗಿದ್ದ ಮಜೀದ್​ ಅಖ್ತರ್​, ಸಹ ಪೈಲಟ್​ ಶಿವ್​ ಜೈಸ್ವಾಲ್​ ಮತ್ತು ರಾಜ್ಯ ಸರ್ಕಾರದ ಅಧಿಕಾರಿ ದಿಲೀಪ್​ ದ್ವಿವೇದಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಪತನದಿಂದ ವಿಮಾನ ನಿರುಪಯುಕ್ತವಾಯಿತು. ಇದಾದ ಬಳಿಕ ಅಧಿಕಾರಿಗಳು ಮಜೀದ್​ ಅವರ ಮೇಲೆ ಕ್ರಮ ಕೈಗೊಂಡು ಅವರ ಪರವಾನಗಿಯನ್ನು ಅಮಾನತು ಮಾಡಿದರು.

    ಕೋವಿಡ್​ ಟೈಂನಲ್ಲಿ ಪ್ರಾಣ ಪಣಕ್ಕಿಟ್ಟು ಕೆಲ್ಸ ಮಾಡಿದ ಪೈಲಟ್​ಗೆ 85 ಕೋಟಿ ದಂಡ! ಸರ್ಕಾರ ಕೊಟ್ಟ ಕಾರಣವಿದು

    ಇದೀಗ ಮಧ್ಯಪ್ರದೇಶ ಸರ್ಕಾರ ಮಜೀದ್​ ಅವರಿಗೆ ನೋಟಿಸ್​ ಕಳುಹಿಸಿದ್ದು, 85 ಕೋಟಿ ರೂ. ದಂಡ ಪಾವತಿಸುವಂತೆ ಕೇಳಿದೆ. ಸುಮಾರು 60 ಕೋಟಿ ರೂಪಾಯಿ ವೆಚ್ಚದ ರಾಜ್ಯದ ವಿಮಾನ ನಿರುಪಯುಕ್ತವಾಗಿದ್ದು, ಇದರ ಪರಿಣಾಮವಾಗಿ ಇತರ ಖಾಸಗಿ ನಿರ್ವಾಹಕರಿಂದ ವಿಮಾನಗಳನ್ನು ಬಾಡಿಗೆಗೆ ಪಡೆಯಲಾಗಿದ್ದು, ಅದರ ವೆಚ್ಚ 25 ಕೋಟಿ ರೂ. ಆಗಿದೆ ಎಂದು ಸರ್ಕಾರವು 85 ಕೋಟಿ ರೂ. ದಂಡದ ಆದೇಶಕ್ಕೆ ಸಮರ್ಥನೆ ನೀಡಿದೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಜೀದ್​, ವಿಮಾನ ನಿಲ್ದಾಣದಲ್ಲಿ ತಡೆಗೋಡೆ ಇರುವ ಬಗ್ಗೆ ಯಾವುದೇ ಮಾಹಿತಿಯನ್ನು ನನಗೆ ನೀಡಲಿಲ್ಲ. ಅಲ್ಲದೆ, ಇನ್ಶುರೆನ್ಸ್​ ಇಲ್ಲದೆ ವಿಮಾನ ಹಾರಾಟ ನಡೆಸಲು ಅನುಮತಿ ನೀಡಿದ್ದು ಯಾರು ಎಂಬುದನ್ನು ಮೊದಲ ತನಿಖೆ ನಡೆಸಿ, ಇದರಲ್ಲಿ ನನ್ನ ತಪ್ಪು ಇಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಫ್ರೀ ಇದ್ದಾಗ ಕರೆ ಮಾಡಲು ಹೇಳಿ ನಟಿಗೆ ಫೋನ್​ ನಂಬರ್​ ಕೊಟ್ಟ ನೆಟ್ಟಿಗನಿಗೆ ಕಾದಿತ್ತು ಬಿಗ್​ ಶಾಕ್​..!

    ಕೈ-ಕಾಲು ತೊಳೆಯಲು ಕಾಳಿ ನದಿ ದಡಕ್ಕೆ ಹೋದವನನ್ನು ಎಳೆದೊಯ್ದ ಮೊಸಳೆ: ದಾಂಡೇಲಿ ಯುವಕನ ದುರಂತ ಸಾವು

    ಹೈಕೋರ್ಟ್​ನಲ್ಲಿ ಹಿಜಾಬ್ ವಿಚಾರಣೆ; ವಿವಾದ ಕುರಿತ 2 ಪ್ರತ್ಯೇಕ ಅರ್ಜಿ ಕೈಗೆತ್ತಿಕೊಳ್ಳಲಿರುವ ನ್ಯಾಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts