More

    ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರು ತತ್ತರ: ವರುಣನ ಅಬ್ಬರ ಮುಂದುವರಿದರೆ ಸಿಲಿಕಾನ್​ ಸಿಟಿಗೆ ಆಪತ್ತು

    ಬೆಂಗಳೂರು: ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನ-ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ವರುಣ ಅರ್ಭಟದಿಂದಾಗಿ ಜನರು ಜಾಗರಣೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿಯೆಲ್ಲ ಸುರಿದ ಮಳೆಯಿಂದಾಗಿ ಅನೇಕ ಏರಿಯಾಗಳು ಜಲಾವೃತ್ತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಮೂರ್ನಾಲ್ಕು ದಿನ ಬಿಡುವು ಕೊಟ್ಟಿದ್ದ ಮಳೆರಾಯ, ನಿನ್ನೆ (ಸೆ.4) ಒಂದೇ ರಾತ್ರಿ ಅಬ್ಬರಿಸಿ ಬೊಬ್ಬಿರಿದಿದ್ದು, ಬೆಂಗಳೂರಿಗರ ಬವಣೆ ಹೇಳತೀರದ್ದಾಗಿದೆ. ಪ್ರವಾಹ ಸೃಷ್ಟಿಯಾಗಿದ್ದು, ಅನೇಕ ಕಡೆಮ ಜನರನ್ನು ಸ್ಥಳಾಂತರ ಸಹ ಮಾಡಲಾಗಿದೆ. ಬೆಳ್ಳಂದೂರು, ಸರ್ಜಾಪುರ ರಸ್ತೆ, ವೈಟ್​ಫೀಲ್ಡ್​, ಹೊರ ವರ್ತುಲ ರಸ್ತೆ ಮತ್ತು ಬಿಇಎಂಎಲ್​ ಲೇಔಟ್​ ಮಳೆಗೆ ತತ್ತರಿಸಿವೆ.

    ಮಳೆಯಿಂದಾಗಿರುವ ಅವಾಂತರಗಳ ವಿಡಿಯೋವನ್ನು ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಮಾರತಹಳ್ಳಿಯ ಸ್ಪೈಸ್​ ಗಾರ್ಡನ್ ವಿಲೇಜ್​ಸೂಪರ್​ ಮಾರ್ಕೆಟ್​ ಹೊರಭಾಗದಲ್ಲಿ ದ್ವಿಚಕ್ರ ವಾಹನ ತೇಲುತ್ತಿರುವುದನ್ನು ಕಾಣಬಹುದಾಗಿದೆ. ತೀವ್ರ ಜಲಾವೃತದಿಂದಾಗಿ ಸ್ಪೈಸ್ ಗಾರ್ಡನ್‌ನಿಂದ ವೈಟ್‌ಫೀಲ್ಡ್‌ವರೆಗಿನ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

    ನಗರದ ಕೆಲವು ಪ್ರೀಮಿಯಂ ಸೊಸೈಟಿಗಳು ಸಹ ಇದೇ ಮೊದಲ ಬಾರಿಗೆ ಈ ರೀತಿಯ ಪ್ರವಾಹವನ್ನು ಎದುರಿಸುತ್ತಿದ್ದು, ಅಲ್ಲಿನ ನಿವಾಸಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಹಾಯವನ್ನು ಕೋರಿದ್ದಾರೆ.

    ವರುಣನ ಅಬ್ಬರವು ಬಹುತೇಕ ನಗರದ ಸಂಚಾರ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿದೆ. ಅದರಲ್ಲೂ ಹೊರ ವರ್ತುಲ ರಸ್ತೆಯು ತೀವ್ರ ಪರಿಣಾಮ ಎದುರಿಸಿದೆ. ಇದು ಬೆಂಗಳೂರಿನ ಹೊರವಲಯದಲ್ಲಿರುವ ಟೆಕ್ ಪಾರ್ಕ್‌ಗಳಿಗೆ ನಗರವನ್ನು ಸಂಪರ್ಕಿಸುತ್ತದೆ. ಇಕೋ ಸ್ಪೇಸ್ ಬಳಿಯ ORR ಬೆಳ್ಳಂದೂರಿನಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಮಳೆ ನೀರಿನಿಂದ ಚರಂಡಿ ತುಂಬಿ ರಸ್ತೆಯ ಮೇಲೆ ಹರಿಯುತ್ತಿದೆ. ಈ ಮಧ್ಯೆ, ಬೆಂಗಳೂರಿನ ಮಾರತ್ತಹಳ್ಳಿ-ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆಯ ಬಳಿ ಜಲಾವೃತಗೊಂಡ ರಸ್ತೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸ್ಥಳೀಯ ಭದ್ರತಾ ಸಿಬ್ಬಂದಿ ರಕ್ಷಿಸಿದ್ದಾರೆ.

    ಮತ್ತೆ ಮಳೆ ಮುನ್ಸೂಚನೆ
    ಕರ್ನಾಟಕದಲ್ಲಿ ಸೆ.9ರವರೆಗೆ ಮಳೆರಾಯ ಅಬ್ಬರಿಸಲಿದ್ದಾನೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಬೆಂಗಳೂರಿಗೂ ಸಹ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಉಳಿದಂತೆ ಕರಾವಳಿ ಕರ್ನಾಟಕದ ಜಿಲ್ಲೆಗಳು ಮತ್ತು ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ. ಕೊಡಗು, ದಕ್ಷಿಣ ಕನ್ನ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಸೆ.5 ರಿಂದ 9ರವರೆಗೆ ಯಲ್ಲೋ ಅಲರ್ಟ್​ ಘೋಷಿಸಲಾಗಿದೆ.

    ಅಪಾಯಕಾರಿ, ವೇಗದ ಗಾಳಿ ಬೀಸುವ ಮುನ್ಸೂಚನೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಉತ್ತರದ ಜಿಲ್ಲೆಗಳಾದ ಬೀದರ್, ಕಲಬುರಗಿ, ವಿಜಯಪುರ, ಗದಗ, ಧಾರವಾಡ, ಹಾವೇರಿ ಮತ್ತು ದಾವಣಗೆರೆಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ನಿರೀಕ್ಷೆಯಿದೆ.

    ಕಳೆದ ವಾರದಿಂದ ರಾಜಧಾನಿ ನಗರವು ಭಾರೀ ಮಳೆಯನ್ನು ಎದುರಿಸುತ್ತಿದೆ ಮತ್ತು ಹಲವಾರು ಪ್ರದೇಶಗಳು, ವಿಶೇಷವಾಗಿ ಐಟಿ ಕಾರಿಡಾರ್‌ಗಳು ಪ್ರವಾಹಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನಾದ್ಯಂತ ಸಾವಿರಾರು ಮನೆಗಳು ಜಲಾವೃತಗೊಂಡಿದೆ. ಮಳೆ ಹೀಗೆ ಮುಂದುವರಿದರೆ, ಬೆಂಗಳೂರಿಗೆ ಮತ್ತಷ್ಟು ಆಪತ್ತು ಎದುರಾಗಲಿದೆ. (ಏಜೆನ್ಸೀಸ್​)

    ದೇಶದ ಅತಿ ಕಿರಿಯ ಮೇಯರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್ಯದ ಅತಿ ಕಿರಿಯ ಶಾಸಕ! ಅಪರೂಪದ ಮದ್ವೆಗೆ ಕೇರಳ ಸಾಕ್ಷಿ

    ಕೇವಲ 2 ರೂಪಾಯಿಗೆ ಭರ್ಜರಿ ನಾನ್​ ವೆಜ್​ ಊಟ! ಚಿಕನ್​, ಮೊಟ್ಟೆಗಾಗಿ ಮುಗಿಬಿದ್ದ ಜನರು

    ಹಳಿ ಮೇಲೆ ನಿಂತು Instagram ರೀಲ್ಸ್​ ಮಾಡುವಾಗ ರೈಲು ಡಿಕ್ಕಿ: ಹಾರಿ ಹೋಗಿ ಬಿದ್ದ ವಿದ್ಯಾರ್ಥಿಯ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts