More

    ಕಾರಿಗೆ ಲಾರಿ ಡಿಕ್ಕಿ: ಒಂಚೂರು ಗಾಯವಿಲ್ಲದೆ ಸಾವಿನಿಂದ ಬಚಾವ್​ ಆದ ನಟ ಗಿನ್ನೆಸ್ಸ್​ ಪಕ್ರು ಅವರ ಮನವಿ ಇದು!

    ಥಿರುವಲ್ಲ: ಪ್ರಖ್ಯಾತ ಮಲಯಾಳಂ ನಟ ಗಿನ್ನೆಸ್ಸ್​ ಪಕ್ರು ಅಲಿಯಾಸ್​ ಅಜಯ್​ ಕುಮಾರ್​ ಅವರ ಕಾರು ಅಪಘಾತಕ್ಕೀಡಾಗಿರುವ ಘಟನೆ ಕೇರಳದ ಥಿರುವಲ್ಲ ಪಟ್ಟಣದಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಥಿರುವಲ್ಲ ಬೈಪಾಸ್​ ರಸ್ತೆಯಲ್ಲಿ ಬರುತ್ತಿದ್ದ ಪಾರ್ಸೆಲ್​ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅದೃಷ್ಟವಶಾತ್​ ನಟ ಗಿನ್ನೆಸ್ಸ್​ ಪಕ್ರು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮತ್ತೊಂದು ವಾಹನವನ್ನು ಓವರ್​ಟೇಕ್​ ಮಾಡಲು ಹೋದ ಲಾರಿ ಎದುರು ಬರುತ್ತಿದ್ದ ಗಿನ್ನೆಸ್ಸ್​ ಪಕ್ರು ಅವರ ಕಾರಿನ ಚಕ್ರಕ್ಕೆ ಡಿಕ್ಕಿ ಹೊಡೆದಿದೆ. ಪಕ್ರು ಅವರು ತಿರುವನಂತಪುರದಿಂದ ಕೊಚ್ಚಿಗೆ ತೆರಳು ಮಾರ್ಗ ಮಧ್ಯೆ ಈ ಘಟನೆ ನಡೆದಿದೆ.

    ಘಟನೆ ಸಂಬಂಧ ಥಿರುವಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಗ್ಗೆ ಪಕ್ರು ಅವರು ಫೇಸ್​ಬುಕ್​ ಮೂಲಕ ಪ್ರತಿಕ್ರಿಯೆ ನೀಡಿದ್ದು, ಸೀಟ್​ ಬೆಲ್ಟ್​ ಧರಿಸಿದ್ದರಿಂದ ಪ್ರಾಣ ಉಳಿಯಿತು. ದಯವಿಟ್ಟು ಸೀಟ್​ ಬೆಲ್ಟ್​ ಧರಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಲಾರಿ ಡಿಕ್ಕಿ ಹೊಡೆದರೂ ಒಂದೇ ಒಂದು ಗಾಯಗಳಾಗದೇ ಪಕ್ರು ಅವರು ಬಚಾವ್​ ಆಗಿದ್ದಾರೆ. ಚಾಲಕ ಶಿವನ್​, ನೆರವಿಗೆ ಬಂದ ಯುವಕರು, ಎಸ್​ಐ ಹುಮಾಯುನ್​, ತಮ್ಮ ಸ್ನೇಹಿತ ಮ್ಯಾಥೀವ್​ ನೈನಾನ್​ ಮತ್ತು ಮುಂತಾದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. (ಏಜೆನ್ಸೀಸ್​)

    ವಾಹನ ಚಾಲಕರೇ ಎಚ್ಚರ! ನೀವು ತಪ್ಪು ಮಾಡದಿದ್ರೂ ನಿಮ್ಮ ವಾಹನಕ್ಕೆ ಬಿದ್ದಿರುತ್ತದೆ ದಂಡ

    ಒಂದೇ ಉಸಿರಲಿ ಹನುಮಾನ್ ಚಾಲೀಸಾ ಹಾಡಿದ ಶಂಕರ್ ಮಹಾದೇವನ್

    ಅಲ್ಲು ಅರ್ಜುನ್​, ಮಂಚು ಮನೋಜ್ ಬಳಿಕ​ ನಟ ನಾಗಚೈತನ್ಯಗೂ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts