More

    ರಾಯ್ಪುರ್​ ವಿಮಾನ ನಿಲ್ದಾಣದ ರನ್​ವೇನಲ್ಲಿ ಸರ್ಕಾರಿ ಹೆಲಿಕಾಪ್ಟರ್​ ಪತನ: ಪೈಲಟ್​ಗಳಿಬ್ಬರ ದುರ್ಮರಣ

    ರಾಯ್ಪುರ್​: ಛತ್ತೀಸ್​ಗಢ ರಾಜಧಾನಿ ರಾಯ್ಪುರ್​ನಲ್ಲಿರು ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದ ರನ್​ವೇನಲ್ಲಿ ಸರ್ಕಾರಿ ಹೆಲಿಕಾಪ್ಟರ್​ ಪತನಗೊಂಡು ಇಬ್ಬರು ಪೈಲಟ್​ಗಳು ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

    ಮೃತಪಟ್ಟ ಇಬ್ಬರು ಪೈಲಟ್‌ಗಳನ್ನು ಕ್ಯಾಪ್ಟನ್ ಗೋಪಾಲ್ ಕೃಷ್ಣ ಪಾಂಡಾ ಮತ್ತು ಕ್ಯಾಪ್ಟನ್ ಎಪಿ ಶ್ರೀವಾಸ್ತವ ಎಂದು ಗುರುತಿಸಲಾಗಿದೆ. ಒಬ್ಬರು ಸ್ಥಳದಲ್ಲೇ ಸಾವಿಗೀಡಾದರೆ, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಮಾಮೂಲಿ ತರಬೇತಿ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು, ಹೆಲಿಕಾಪ್ಟರ್​ ಸಂಪೂರ್ಣ ನಾಶವಾಗಿದೆ. ತಾಂತ್ರಿಕ ದೋಷವೇ ಚಾಪರ್​ ಪತನಕ್ಕೆ ಕಾರಣ ಎಂದು ಹೇಳಲಾಗಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮತ್ತು ರಾಜ್ಯ ಸರ್ಕಾರದ ಆದೇಶದ ಮೇರೆಗೆ ನಿಖರವಾದ ಕಾರಣವನ್ನು ತಿಳಿಯಲು ತನಿಖೆ ನಡೆಯಲಿದೆ.

    ಘಟನೆಯ ಬೆನ್ನಲ್ಲೇ ಟ್ವೀಟ್​ ಮೂಲಕ ಛತ್ತೀಸ್​ಗಢದ ಮುಖ್ಯಮಂತ್ರಿ ಭೂಪೇಶ್​ ಬಾಗೇಲ್​ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

    ರಾಯ್‌ಪುರದ ವಿಮಾನ ನಿಲ್ದಾಣದಲ್ಲಿ ರಾಜ್ಯದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿರುವ ದುಃಖದ ಸುದ್ದಿ ಇದೀಗ ಬಂದಿದೆ. ಈ ದುರಂತ ಅಪಘಾತದಲ್ಲಿ ನಮ್ಮ ಪೈಲಟ್‌ಗಳಾದ ಕ್ಯಾಪ್ಟನ್ ಪಾಂಡಾ ಮತ್ತು ಕ್ಯಾಪ್ಟನ್ ಶ್ರೀವಾಸ್ತವ ಇಬ್ಬರು ನಿಧನರಾಗಿದ್ದಾರೆ. ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬ ಸದಸ್ಯರಿಗೆ ಶಕ್ತಿಯನ್ನು ನೀಡಲಿ ಮತ್ತು ಅಗಲಿದ ಆತ್ಮಗಳಿಗೆ ಶಾಂತಿ ನೀಡಲಿ ಎಂದು ಭೂಪೇಶ್​ ಬಾಗೇಲ್​ ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

    ರಾಹುಲ್​ಗೆ ಕೈ ಅಧ್ಯಕ್ಷ ಸ್ಥಾನ?; ಇಂದು ಉದಯಪುರ್ ಚಿಂತನಾ ಶಿಬಿರ

    ಚೇತರಿಕೆ ಕಂಡ 2 ವರ್ಷದ ನಂತರವೂ ಕರೊನಾ ಲಕ್ಷಣ; ಅರ್ಧದಷ್ಟು ಮಂದಿ ಆಸ್ಪತ್ರೆಗೆ: ಅಧ್ಯಯನ ವರದಿಯಿಂದ ಬಹಿರಂಗ

    ಕೆಪಿಎಸ್ಸಿ ಪರೀಕ್ಷೆಯಲ್ಲೂ ದೊಡ್ಡಮಟ್ಟದ ಡೀಲ್!; ಲೆಕ್ಕಪತ್ರ ಇಲಾಖೆ ಹುದ್ದೆ ಪರೀಕ್ಷೆ ಮೇಲೆ ಅನುಮಾನ, ಪ್ರತಿ ಹುದ್ದೆಗೆ 40 ಲಕ್ಷ ರೂ.ಫಿಕ್ಸ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts