More

    ರಾಹುಲ್​ಗೆ ಕೈ ಅಧ್ಯಕ್ಷ ಸ್ಥಾನ?; ಇಂದು ಉದಯಪುರ್ ಚಿಂತನಾ ಶಿಬಿರ

    ನವದೆಹಲಿ: ಉತ್ತರ ಪ್ರದೇಶ ಸಹಿತ ಪಂಚರಾಜ್ಯಗಳ ಚುನಾವಣೆಯಲ್ಲಿನ ಸೋಲಿನ ಬಳಿಕ ರಾಜಸ್ಥಾನದ ಉದಯಪುರ್​ದಲ್ಲಿ ಶುಕ್ರವಾರ ಆರಂಭವಾಗಲಿರುವ ಕಾಂಗ್ರೆಸ್​ನ ಚಿಂತನಾ ಶಿಬಿರದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಗೆ ಮತ್ತೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಒತ್ತಾಯ ಬಲಗೊಳ್ಳುವ ಸಾಧ್ಯತೆ ಇದೆ. ಪಕ್ಷದ ಹಿರಿಯ ನಾಯಕರೇ ರಾಹುಲ್ ಪರ ನಿಂತಿದ್ದಾರೆ.

    ಮಾರ್ಚ್ 14 ಮತ್ತು ಮೇ 9ರಂದು ನಡೆದ ಕಾಂಗ್ರೆಸ್ ಕಾರ್ಯಕಾರಣಿಯಲ್ಲಿಯೂ (ಸಿಡಬ್ಲ್ಯೂಸಿ) ಲೋಕಸಭೆಯಲ್ಲಿನ ಪಕ್ಷದ ನಾಯಕ ಅಧಿರ್ ರಂಜನ್ ಚೌಧರಿಯಾದಿಯಾಗಿ ಅನೇಕ ಹಿರಿಯ ನಾಯಕರು ರಾಹುಲ್ ಗಾಂಧಿ ಪರವಾಗಿಯೇ ಮಾತನಾಡಿದ್ದರು. ಅಧ್ಯಕ್ಷರ ಹುದ್ದೆಗೆ ಆಗಸ್ಟ್ ಅಥವಾ ಸೆಪ್ಟೆಂಬರ್​ನಲ್ಲಿ ಚುನಾವಣೆ ನಡೆಯಬಹುದು ಎಂದು ಮೂಲಗಳು ಹೇಳಿವೆ.

    2019ರ ಲೋಕಸಭಾ ಚುನಾವಣೆಯ ಸೋಲಿನ ನಂತರ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಸೋನಿಯಾ ಗಾಂಧಿ ಹೆಗಲಿಗೆ ಹಂಗಾಮಿ ಅಧ್ಯಕ್ಷೆಯ ಹೊಣೆ ಬಿತ್ತು. ಇತ್ತೀಚಿನ ಸಿಡಬ್ಲ್ಯೂಸಿ ಸಭೆಯಲ್ಲಿ 2024ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಬಲಗೊಳಿಸಬೇಕು. ಇದಕ್ಕಾಗಿ ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆಗೂ ಸಿದ್ಧ ಎಂಬ ಸಂದೇಶವನ್ನು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೀಡಿದ್ದರು.

    ಛೇ.. ಇದೆಂಥ ದುರಂತ!; ಮಗಳಿಗೆ ಮದ್ವೆ ಮಾಡಿಸಿ ಗಂಡನ ಮನೆಗೆ ಕಳಿಸಿದ ಬೆನ್ನಿಗೇ ತಂದೆಯ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts