More

    ಕೆಪಿಎಸ್ಸಿ ಪರೀಕ್ಷೆಯಲ್ಲೂ ದೊಡ್ಡಮಟ್ಟದ ಡೀಲ್!; ಲೆಕ್ಕಪತ್ರ ಇಲಾಖೆ ಹುದ್ದೆ ಪರೀಕ್ಷೆ ಮೇಲೆ ಅನುಮಾನ, ಪ್ರತಿ ಹುದ್ದೆಗೆ 40 ಲಕ್ಷ ರೂ.ಫಿಕ್ಸ್?

    ಬೆಂಗಳೂರು: ಸಬ್ ಇನ್​ಸ್ಪೆಕ್ಟರ್ ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಪರೀಕ್ಷಾ ಅಕ್ರಮದ ಬೆನ್ನಲ್ಲೇ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕರ ಹುದ್ದೆಗಳ ನೇಮಕಾತಿಯಲ್ಲೂ ದೊಡ್ಡಮಟ್ಟದ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ಕೆಪಿಎಸ್ಸಿ ಸದಸ್ಯರ ಹೆಸರು ಹೇಳಿಕೊಂಡು ಅಭ್ಯರ್ಥಿಗಳಿಗೆ ಕರೆ ಮಾಡಿರುವ ‘ಮಧ್ಯವರ್ತಿ’ಯೊಬ್ಬ ತಲಾ ಹುದ್ದೆಗೆ 40 ಲಕ್ಷ ರೂ.ಗೆ ಡೀಲ್ ಕುದುರಿಸಲು ಯತ್ನಿಸಿರುವ ಆಡಿಯೋ ಮತ್ತು ವಾಟ್ಸ್​ಆಪ್ ಸಂದೇಶಗಳು ವಿಜಯವಾಣಿಗೆ ಲಭ್ಯವಾಗಿರುವುದು ನೇಮಕಾತಿಯಲ್ಲಿ ಅಕ್ರಮವನ್ನು ಪುಷ್ಟೀಕರಿಸಿದೆ.

    ನ್ಯಾಯ ಕೋರಿ ದೂರು: ಸಹಾಯಕ ನಿಯಂತ್ರಕರ 48 (ಗ್ರೂಪ್ ಎ) ಹುದ್ದೆಗಳ ನೇಮಕಕ್ಕೆ 2020 ಜ.31ರಂದು ಕೆಪಿಎಸ್ಸಿ ಅಧಿಸೂಚನೆ ಹೊರಡಿಸಿತ್ತು. 2020 ಮೇ 24ರಂದು ಪೂರ್ವಭಾವಿ ಪರೀಕ್ಷೆ ಹಾಗೂ ಡಿಸೆಂಬರ್​ನಲ್ಲಿ ಮುಖ್ಯ ಪರೀಕ್ಷೆ ನಡೆಸಿತ್ತು. 2022 ಮೇ 5ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಮುಖ್ಯ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಅಭ್ಯರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಅಕ್ರಮದ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಕೆಪಿಎಸ್ಸಿ ಹಾಗೂ ಡಿಜಿಪಿಗೆ ದೂರು ನೀಡಿದ್ದಾರೆ.

    ದುರ್ವ್ಯವಹಾರ ಒಪ್ಪಿದ ಕೆಪಿಎಸ್ಸಿ: ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 31ನೇ ಸ್ಥಾನದಲ್ಲಿರುವ ಯಶೋದಾ ಎಸ್.ಎಂ. ಪರೀಕ್ಷೆಯಲ್ಲಿ ಮಾಲ್ ಪ್ರಾಕ್ಟೀಸ್ ನಡೆಸಿದ್ದಾರೆ ಎಂದು ಕೆಪಿಎಸ್ಸಿಯೇ ಹೇಳಿದೆ. ಆದರೆ, ಯಾವ ರೀತಿಯ ಅಕ್ರಮ ಎಂಬುದನ್ನು ಉಲ್ಲೇಖಿಸಿಲ್ಲ. ಆದರೂ ಅವರ ಹೆಸರನ್ನು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಕಟಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಅವ್ಯವಹಾರ ಎಸಗಿದ್ದಾರೆ ಎಂದ ಮೇಲೆ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅವರ ಹೆಸರು ಹೇಗೆ ಬಂತು ಎಂಬುದೇ ಪ್ರಶ್ನೆಯಾಗಿದೆ.

    ಮೊಬೈಲಲ್ಲೇ ನೌಕ್ರಿ ಆಫರ್!

    2022 ಏ.11ರಂದು ಸಂಜೆ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗೆ ಕರೆ ಮಾಡಿದ್ದ ವಿನಯ್ ಎಂಬಾತ, ಕೆಪಿಎಸ್ಸಿ ಸದಸ್ಯರ ಕಡೆಯಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ. ಸಹಾಯಕ ನಿಯಂತ್ರಕರ ಹುದ್ದೆಗಳಿಗೆ ಡೀಲ್ ನಡೆಯುತ್ತಿವೆ. ನಿಮ್ಮ ಆರ್ಥಿಕ ಪರಿಸ್ಥಿತಿ ಹೇಗಿದೆ? ನಿಮಗೆ ಎಷ್ಟು ಹಣ ಹೊಂದಿಸಲು ಸಾಧ್ಯ. ಹಣ ಕೊಟ್ಟರೆ 90ಕ್ಕೂ ಹೆಚ್ಚು ಅಂಕಗಳನ್ನು ಕೊಡಿಸಿ ಪಾಸ್ ಮಾಡಿಸುವ ಭರವಸೆ ಕೊಟ್ಟಿದ್ದಾರೆ. ಇದೇ ರೀತಿ ಪರೀಕ್ಷೆ ಬರೆದಿದ್ದ ಎಲ್ಲ ಅಭ್ಯರ್ಥಿಗಳಿಗೂ ಕರೆ ಮಾಡಿ ಆಫರ್ ಕೊಟ್ಟಿದ್ದಾನೆ. ನೇರವಾಗಿ ಕೆಪಿಎಸ್ಸಿ ಸದಸ್ಯರೇ ವ್ಯವಹಾರ ನಡೆಸುತ್ತಿದ್ದು, ಒಂದು ವೇಳೆ ಕೆಲಸ ಆಗದಿದ್ದರೆ ತಿಂಗಳಲ್ಲಿ ನೀವು ಕೊಟ್ಟಿರುವ ಹಣ ವಾಪಸ್ ಕೊಡುತ್ತಾರೆ ಎಂದು ಹೇಳಿರುವುದು ಕಾಲ್ ರೆಕಾರ್ಡ್ ಆಗಿದೆ.

    ನಲವತ್ತು ಲಕ್ಷ ರೂ. ಕೊಟ್ಟು ಆಯ್ಕೆ?

    ಕೆಪಿಎಸ್ಸಿಯ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ ಹಲವು ಅಭ್ಯರ್ಥಿಗಳು 40 ಲಕ್ಷ ರೂ.ವರೆಗೆ ಹಣ ಕೊಟ್ಟು ಆಯ್ಕೆಯಾಗಿದ್ದಾರೆಂದು ಆರೋಪಿಸಲಾಗುತ್ತಿದೆ. ಪರೀಕ್ಷಾ ಕೊಠಡಿಯಲ್ಲಿ ಸರಿಯಾಗಿ ಬರೆಯದಿದ್ದವರೂ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿದ್ದಾರೆ. ಆಯ್ಕೆ ಪಟ್ಟಿ ಬಿಡುಗಡೆಗೂ ಮುನ್ನವೇ ಕೆಲ ಅಭ್ಯರ್ಥಿಗಳು ತಾವು ಆಯ್ಕೆಯಾಗುವುದಾಗಿ ಹೇಳಿಕೊಳ್ಳುತ್ತಿದ್ದರು. ಅದರಂತೆ ಅವರೆಲ್ಲರೂ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದೆಲ್ಲವೂ ಅನುಮಾನಕ್ಕೆ ಕಾರಣವಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

    ಛೇ.. ಇದೆಂಥ ದುರಂತ!; ಮಗಳಿಗೆ ಮದ್ವೆ ಮಾಡಿಸಿ ಗಂಡನ ಮನೆಗೆ ಕಳಿಸಿದ ಬೆನ್ನಿಗೇ ತಂದೆಯ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts