More

    ಇಡೀ ರಾಷ್ಟ್ರವೇ ಸ್ವಾತಂತ್ರ್ಯ ಸಂಭ್ರಮದಲ್ಲಿರುವಾಗ ಗೋವಾ ಏಕೆ ಈ ಅಮೃತ ಘಳಿಗೆಯನ್ನು ಆಚರಿಸುವುದಿಲ್ಲ?

    ಪಣಜಿ: ಮಹಾಮಾರಿ ಕರೊನಾ ವೈರಸ್ ಮೂರನೇ ಅಲೆ ಭೀತಿಯ​ ನಡುವೆಯೂ ರಾಷ್ಟ್ರವು ಇಂದು 75ನೇ ಸ್ವಾತಂತ್ರ್ಯೋತ್ಸವಕ್ಕೆ ಸಾಕ್ಷಿಯಾಗಿದ್ದು, ಈ ಅಮೃತ ಘಳಿಗೆಯಲ್ಲಿ ದೇಶವ್ಯಾಪಿ ರಾಷ್ಟ್ರಭಕ್ತಿ ಮೊಳಗುತ್ತಿದೆ. ಕೋವಿಡ್​ ಮುನ್ನೆಚ್ಛರಿಕಾ ಕ್ರಮದೊಂದಿಗೆ ದೇಶಾದ್ಯಂತ ಸ್ವಾತಂತ್ರ್ಯ ಸಂಭ್ರಮದ ಸರಳ ಆಚರಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.

    ಬ್ರಿಟಿಷ್​ ನಿಯಮದಿಂದ ಮುಕ್ತರಾಗಲು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗ ಬಲಿದಾನಗಳನ್ನು ಪ್ರತಿಯೊಬ್ಬ ನಾಗರಿಕನು ನೆನಪಿನಲ್ಲಿಡಬೇಕಾದ ದಿನವಿದು. ಇಂದು ದೇಶಾದ್ಯಂತ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತಿದೆ. ದೇಶಾದ್ಯಂತ ತ್ರಿವರ್ಣ ರಾರಾಜಿಸುತ್ತಿದ್ದು, ದೇಶ ಭಕ್ತಿ ಮೊಳಗುತ್ತಿದೆ. ಆದರೆ, ಗೋವಾ ಮಾತ್ರ ಈ ದಿನ ಸಾತಂತ್ರ್ಯ ದಿನವನ್ನು ಆಚರಿಸುವುದಿಲ್ಲ. ಏಕೆಂದರೆ ಭಾರತ ಸ್ವಾತಂತ್ರ್ಯ ಪಡೆದರೂ, ಗೋವಾ ಮಾತ್ರ ಆಗಿನ್ನೂ ಪೊರ್ಚುಗೀಸ್​ ವಸಹಾತುಶಾಹಿಗಳು ಅಡಿಯಲ್ಲೇ ಇತ್ತು. ಪೋರ್ಚುಗೀಸರು ಗೋವಾದ ಸುಂದರವಾದ ಭೂಮಿ ಮತ್ತು ರಮಣೀಯ ಸೌಂದರ್ಯಕ್ಕೆ ಮಾರುಹೋಗಿ 450 ವರ್ಷಗಳಿಗೂ ಹೆಚ್ಚು ಕಾಲ ಆ ಪುಟ್ಟ ರಾಜ್ಯವನ್ನು ಆಳಿದರು. ಭಾರತಕ್ಕೆ ವ್ಯಾಪಾರಕ್ಕಾಗಿ ಮೊದಲಿಗರಾಗಿ ಬಂದು ಭಾರತವನ್ನು ಕೊನೆಯದಾಗಿ ಖಾಲಿ ಮಾಡಿದವರೆಂದರೆ ಅದು ಪೋರ್ಚುಗೀಸರು.

    ಗೋವಾ ಆಕ್ರಮಣ ಇತಿಹಾಸ
    1510 ರಲ್ಲಿ ಪೋರ್ಚುಗೀಸರಿಂದ ಆಕ್ರಮಣಕ್ಕೆ ಒಳಗಾದ ಗೋವಾ ತನ್ನ ಮರಳು ಮತ್ತು ಸಮುದ್ರಕ್ಕಿಂತ ಹೆಚ್ಚಿನ ಬದಲಾವಣೆಗಳಿಗೆ ಮತ್ತು ವ್ಯಾಪಾರಕ್ಕೆ ಸಾಕ್ಷಿಯಾಯಿತು. ನಾಲ್ಕು ಶತಮಾನಗಳಿಗೂ ಹೆಚ್ಚು ಕಾಲ, ಗೋವಾದಲ್ಲಿ ಪೋರ್ಚುಗೀಸರಿಂದ ಚಿತ್ರಹಿಂಸೆಗೆ ಒಳಗಾದರು. ಕೊಂಕಣಿ ಭಾಷೆಯ ದಮನದಿಂದಿಡಿದು ಹಿಂದುಗಳ ಕಿರುಕುಳವರೆಗೂ ಸಾಕಷ್ಟು ಆಕ್ರಮಣ ನೀತಿಯನ್ನು ಅನುಸರಿಸಿದರು. ಗೋವಾದ ಕ್ಯಾಥೊಲಿಕರು ಹಿಂದು ದೇವಾಲಯಗಳ ನಾಶಕ್ಕೆ ಮತ್ತು ಹಿಂದು ವಿವಾಹದ ಆಚರಣೆಗಳ ಮೇಲೆ 1540ರ ಸಮಯದಲ್ಲಿ ನಿಷೇಧಗಳನ್ನು ಹೇರಿದರು.

    ಸಾಕಷ್ಟು ಆಕ್ರಮಣ ಮತ್ತು ಧ್ವಂಸ ನೀತಿಯ ಬಳಿಕ ಭಾರತದಲ್ಲಿ ಪೋರ್ಚುಗೀಸರ ಅಂತ್ಯ ಆರಂಭವಾಗಿದ್ದು 1946, ಜೂನ್ 18ರಿಂದ. ಉಳಿದ ಭಾರತ ಸ್ವಾತಂತ್ರ್ಯದ ಕಡೆ ಹೆಜ್ಜೆ ಹಾಕುತ್ತಿರುವ ಸಮಯದಲ್ಲಿ ಸಮಾಜಿಕ ಕಾರ್ಯಕರ್ತ ಹಾಗೂ ರಾಜಕೀಯ ನಾಯಕ ರಾಮ್​ ಮನೋಹರ್​ ಲೋಹಿಯಾ ಅವರು ಬರಹಗಾರ ಡಾ. ಜೂಲಿಯೋ ಮನೆಜಸ್​ ಜತೆ ಗೋವಾಗೆ ಭೇಟಿ ನೀಡಿದ್ದರು.

    ಭೇಟಿ ವೇಳೆ ಲೋಹಿಯಾ ಅವರಿಗೆ ಗೋವಾದ ಕರಾಳ ದರ್ಶನವಾಗಿತ್ತು. ಇದರ ಬೆನ್ನಲ್ಲೇ ಅವರು ರಾಜ್ಯದಲ್ಲಿ ನಾಗರಿಕ ಅಸಹಕಾರ ಚಳುವಳಿಯನ್ನು ಶುರು ಮಾಡಿದ್ದರು. ಈ ವೇಳೆ ಲೋಹಿಯಾ ಅವರವನ್ನು ಬಂಧಿಸಿ, ಸಂಬಂಧಪಟ್ಟ ನಿಯಮದ ಅಡಿಯಲ್ಲಿ ಚಳುವಳಿಯನ್ನು ಪೋರ್ಚುಗೀಸರು ದಮನ ಮಾಡಿದ್ದರು. ಇದಾದ ಬಳಿಕ ಜನರು ಪರಸ್ಪರ ಭೇಟಿಯಾಗಲು, ಸಂಘಟನೆ ಮಾಡಲು ಮತ್ತು ಪೋರ್ಚುಗೀಸರ ವಿರುದ್ಧ ತಂತ್ರಗಳನ್ನು ಎಣೆಯಲು ಆರಂಭಿಸಿದರು.

    ಗೋವಾದಲ್ಲಿ ಅನೇಕ ಯುವ ನಾಯಕರು ಮತ್ತು ಹೋರಾಟಗಾರರಲ್ಲಿ ನಾಗರಿಕ ಅಸಹಕಾರ ಚಳುವಳಿಯು ಪ್ರಭಾವ ಬೀರಿತು. ಆ ಸಮಯದಲ್ಲಿ 13 ವರ್ಷ ವಯಸ್ಸಿನವರಾಗಿದ್ದ ಪ್ರಭಾಕರ ವಿಠ್ಠಲ್ ಸಿನಾರಿ ಮೇಲೂ ಶಾಶ್ವತವಾದ ಪ್ರಭಾವ ಬೀರಿತು. ಬಳಿಕ ಸಿನಾರಿ ಮತ್ತು ಅವರ ಆಪ್ತರು ಸೇರಿ ಆಜಾದ್​ ಗೊಮಂತ್​ಕ್​ ದಳ (ಎಜಿಡಿ) ಹೆಸರಿನಲ್ಲಿ ಒಂದು ಕ್ರಾಂತಿಕಾರಿ ಸಂಘಟನೆಯನ್ನು ಹುಟ್ಟುಹಾಕಿದರು. ಇದೇ ಸಂಘಟನೆ ತದನಂತರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್​ಎಸ್​ಎಸ್​)ದ ಜತೆ ಸೇರಿಕೊಂಡು ಪೋರ್ಚುಗೀಸರ ವಿರುದ್ಧ ಹೋರಾಡಲು ಆರಂಭಿಸಿತು.

    ಹೀಗಿರುವಾಗ ಪುಣೆ ಮೂಲಕ ಕುಸ್ತಿಪಟು ನಾನಾ ಕಾಜ್ರೆಕರ್​, ಸಂಗೀತ ನಿರ್ದೇಶಕ ಸುಧೀರ್​ ಫಡ್ಕೆ, ಬಾಂಬೆಯ ರಾಷ್ಟ್ರೀಯವಾದಿಗಳು ಮತ್ತು ಇತರೆ ಅನೇಕರು ಎಜಿಡಿ ಸಂಘಟನೆ ಜತೆ ಸೇರಿಕೊಂಡು ಯುನೈಟೆಡ್​ ಫ್ರಂಟ್​ ಆಫ್​ ಲಿಬರೇಷ್​ ಎಂಬ ಬಹುದೊಡ್ಡ ಸಂಘಟನೆಯನ್ನು ರಚಿಸಿದರು.

    ಈ ದೊಡ್ಡ ಸಂಘಟನೆ ಗೋವಾವನ್ನು ಸ್ವತಂತ್ರಗೊಳಿಸುವ ಪ್ರಯತ್ನವಾಗಿ ನರೋಲಿ, ದಾದ್ರಾ ಮತ್ತು ನಾಗರ್ ಹವೇಲಿಯ ಪೋರ್ಚುಗೀಸ್ ವಸಾಹತುಗಳನ್ನು ಸ್ವತಂತ್ರಗೊಳಿಸಲು ದಾಳಿಗಳನ್ನು ನಡೆಸಿದರು. ಈ ವೇಳೆ ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್ ಕೂಡ ಸಂಘಟನೆಯ ನೆರವಿಗೆ ನಿಂತರು. ಶಸ್ತ್ರಾಸ್ತ್ರಗಳನ್ನು ಖರೀದಿಗೆ ಹಣವನ್ನು ಸಂಗ್ರಹಿಸಲು ಸಹಾಯ ಮಾಡಲು ಲತಾ ಮಂಗೇಶ್ಕರ್​ ಪುಣೆಯಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದರು.

    ಗೋವಾಗೆ ಸ್ವಾತಂತ್ರ್ಯ ಸಿಕ್ಕಿದ್ದು ಯಾವಾಗ?
    ಗೋವಾ ಜನರ ಹಲವು ವರ್ಷಗಳ ಸುದೀರ್ಘ ಹೋರಾಟ ಮತ್ತು ಕಾಯುವಿಕೆಗೆ ಕೊನೆಗೂ ಒಳ್ಳೆಯ ಫಲ ಸಿಗುವ ಸಮಯ ಬಂದಿತು. 1961 ಡಿಸೆಂಬರ್​ 19ರಂದು ಪೋರ್ಚುಗೀಸರಿಂದ ಗೋವಾ ಸ್ವತಂತ್ರವಾಯಿತು. ಪತ್ರಕರ್ತರು, ಸತ್ಯಾಗ್ರಹಿಗಳು, ಸಶಸ್ತ್ರ ಗೆರಿಲ್ಲಾಗಳು, ಪೌರಾಣಿಕ ಚಲನಚಿತ್ರ ಕಲಾವಿದರು ಸಹ ಗೋವಾದ ಸ್ವಾತಂತ್ರ್ಯದಲ್ಲಿ ಭಾಗವಹಿಸಿದರು. (ಏಜೆನ್ಸೀಸ್​)

    ಸ್ವಾತಂತ್ರ್ಯದ ಶತಮಾನೋತ್ಸವ ವೇಳೆಗೆ ಯಾವ ದೇಶಕ್ಕೂ ನಾವು ಕಡಿಮೆಯಿಲ್ಲ ಎನ್ನುವಂತೆ ಬೆಳೆದಿರಬೇಕು: ಪ್ರಧಾನಿ ಮೋದಿ

    ಸರ್ಕಾರಿ ಕಚೇರಿಗಳಲ್ಲಿ ಜನ ಅಲೆಯದಂತೆ ಮಾಡುವುದೇ ನಮ್ಮ ಮೊದಲ ಆದ್ಯತೆ: ಸಿಎಂ ಬಸವರಾಜ ಬೊಮ್ಮಾಯಿ

    ಇವತ್ತಿನಿಂದ ನವ ಕರ್ನಾಟಕ ನಿರ್ಮಾಣ ಪ್ರಾರಂಭ: ಸಿಎಂ ಬಸವರಾಜ ಬೊಮ್ಮಾಯಿ ಸಂಕಲ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts