More

    ಸರ್ಕಾರಿ ಕಚೇರಿಗಳಲ್ಲಿ ಜನ ಅಲೆಯದಂತೆ ಮಾಡುವುದೇ ನಮ್ಮ ಮೊದಲ ಆದ್ಯತೆ: ಸಿಎಂ ಬಸವರಾಜ ಬೊಮ್ಮಾಯಿ

    ಬೆಂಗಳೂರು: ಅಭಿವೃದ್ಧಿ ಯಾವ ರೀತಿ ಇರಬೇಕೆಂದರೆ ಜನರ ಸುತ್ತ ಅಭಿವೃದ್ಧಿ ಇರಬೇಕು. ಅಭಿವೃದ್ಧಿ ಸುತ್ತ ಜನರು ಓಡಾಡಬಾರದು. ಎಲ್ಲಿ ಜನರು ವಾಸವಾಗಿದ್ದಾರೋ ಅಲ್ಲಿ ಅಭಿವೃದ್ಧಿ ಮುಟ್ಟಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

    ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮಾಣಿಕ್​ ಷಾ ಪರೇಡ್​ ಗ್ರೌಂಡ್​ನಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಸಿಎಂ ಬೊಮ್ಮಾಯಿ ಮಾತನಾಡಿದರು. ನನ್ನ ಕನ್ನಡ ನಾಡಿನ ಪ್ರತಿಯೊಂದು ಕುಟುಂಬವೂ ಬೆಳವಣಿಗೆ ಆಗಬೇಕು. ಪ್ರತಿಯೊಬ್ಬರ ಬದುಕು ಹಸನಾಗಬೇಕು. ಎಲ್ಲ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕು ಅನ್ನೋ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆಂಬ ಭರವಸೆ ನೀಡಿದರು.

    ನನ್ನ ಕನ್ನಡ ನಾಡಿನ ಕಟ್ಟಕಡೆಯ ಕುಟುಂಬ, ಪ್ರತಿಯೊಬ್ಬರ ಬದುಕು ಬೆಳವಣಿಗೆ ಆಗಬೇಕು, ಸುಖ ಶಾಂತಿ ಆರೋಗ್ಯ ಸಿಗಬೇಕೆಂಬ ಸದ್ದುದ್ದೇಶದಿಂದ ಕೆಲಸ ಮಾಡ್ತಿದ್ದೇನೆ. ಇನ್ನು 20 ತಿಂಗಳು ಮಾತ್ರ ಅವಕಾಶ ಇರೊದೆಂದು ನನಗೆ ಗೊತ್ತಿದೆ. ಇದನ್ನೆಲ್ಲ ಮಾಡಲು ದೀರ್ಘಾವಧಿ ಸಮಯ ಬೇಕು. ಅಲ್ಪಾವಧಿಯಲ್ಲಿ ಏನು ಕಾರ್ಯಕ್ರಮ ಕೊಡಬೇಕು ಅದನ್ನ ಮಾಡ್ತೇವೆ ಎಂದರು.

    ಒಂದು ಮಾತಿದೆ. ಅಭಿವೃದ್ಧಿ ಯಾವ ರೀತಿ ಇರಬೇಕೆಂದರೆ ಜನರ ಸುತ್ತ ಅಭಿವೃದ್ಧಿ ಇರಬೇಕು. ಅಭಿವೃದ್ಧಿ ಸುತ್ತ ಜನರು ಓಡಾಡಬಾರದು. ಎಲ್ಲಿ ಜನರು ವಾಸವಾಗಿದ್ದಾರೋ ಅಲ್ಲಿ ಅಭಿವೃದ್ಧಿ ಮುಟ್ಟಬೇಕು. ಸರ್ಕಾರಿ ಕಚೇರಿಗಳಲ್ಲಿ ಜನ ಸುತ್ತಾಡುವುದನ್ನು ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ಜನಸ್ನೇಹಿ ಸರ್ಕಾರ ನಮ್ಮದಾಗುತ್ತದೆ. ಯಾವುದೇ ಸರ್ಕಾರಿ ಕಚೇರಿಯಲ್ಲಿ ಸಾಮಾನ್ಯ ಜನ ಬಂದರೆ, ಅವರಿಗೆ ಕೂಡಲೇ ಪರಿಹಾರವನ್ನ, ಅವರಿಗೆ ಬೇಕಾಗಿರುವ ಪ್ರಮಾಣ ಪತ್ರವನ್ನ ಹಾಗೂ ಅವರ ಕೆಲಸ-ಕಾರ್ಯಗಳನ್ನು ಕೂಡಲೇ ಮಾಡಲು ಅನುವಾಗುವಂತಹ ಇನ್ನಷ್ಟು ಕಾಯಕಲ್ಪವನ್ನು ಕೊಡುವಂತೆ ಕೆಲಸವನ್ನು ಮಾಡುತ್ತೇನೆ. ತಾಲೂಕು ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಜನ ಅಲೆಯದಂತೆ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದರು.

    ಇವತ್ತಿನಿಂದ ನವ ಕರ್ನಾಟಕ ನಿರ್ಮಾಣ ಪ್ರಾರಂಭ: ಸಿಎಂ ಬಸವರಾಜ ಬೊಮ್ಮಾಯಿ ಸಂಕಲ್ಪ

    ಸ್ವಾತಂತ್ರ್ಯದ ಶತಮಾನೋತ್ಸವ ವೇಳೆಗೆ ಯಾವ ದೇಶಕ್ಕೂ ನಾವು ಕಡಿಮೆಯಿಲ್ಲ ಎನ್ನುವಂತೆ ಬೆಳೆದಿರಬೇಕು: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts