ಹೋಟೆಲ್​ ರೂಂ ಬಾಗಿಲ್​ ಲಾಕ್​ ಮಾಡಿ ಯುವಕ ಎಸ್ಕೇಪ್​: ಬಾಗಿಲು ತೆರೆದ ಪೊಲೀಸರಿಗೆ ಕಾದಿತ್ತು ಶಾಕ್!​​

blank

ತಿರುವನಂತಪುರಂ: ಕೇರಳ ರಾಜಧಾನಿ ತಿರುವನಂತಪುರದ ಹೋಟೆಲ್​ ಒಂದರಲ್ಲಿ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾಗಿದ್ದು, ಸಾವಿನ ಬಗ್ಗೆ ಅನೇಕ ಅನುಮಾನ ಹುಟ್ಟಿಕೊಂಡಿವೆ. ಆಕೆಯೊಂದಿಗೆ ಹೋಟೆಲ್​ಗೆ ಬಂದ ಯುವಕ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮೃತ ಮಹಿಳೆಯನ್ನು ಗಾಯತ್ರಿ ಎಂದು ಗುರುತಿಸಲಾಗಿದೆ. ಈಕೆ ಕಟ್ಟಕಾಡದ ನಿವಾಸಿ. ಕೊಲ್ಲಂ ನಿವಾಸಿ ಪ್ರವೀಣ್​ ಎಂಬಾತನ ಜತೆಯಲ್ಲಿ ನಿನ್ನೆ (ಮಾ.5) ಮಧ್ಯಾಹ್ನ ಹೋಟೆಲ್​ಗೆ ಬಂದಿದ್ದಳು. ಪ್ರವೀಣ್​ ಕೊಠಡಿಯನ್ನು ಲಾಕ್​ ಮಾಡಿ ಸಂಜೆ ಹೊರ ಹೋದವನು ಮತ್ತೆ ಬರಲಿಲ್ಲ. ಕೊಠಡಿಯಲ್ಲಿ ಮಹಿಳೆಯೊಬ್ಬಳು ಇದ್ದಾಳೆ ಎಂಬ ಮಾಹಿತಿ ಹೋಟೆಲ್​ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ಮಾಹಿತಿ ಮೇರೆಗೆ ಹೋಟೆಲ್​ಗೆ ಆಗಮಿಸಿದ ಪೊಲೀಸರು ಬಾಗಿಲು ಮುರಿದು ನೋಡಿದಾಗ ಗಾಯತ್ರಿ ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ. ಆಕೆಯ ಬಾಯಲ್ಲಿ ನೊರೆ ಇತ್ತು. ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾಳೋ ಅಥವಾ ಕೊಲೆಯೋ ಎಂಬುದು ಸ್ಪಷ್ಟವಾಗಬೇಕಿದೆ.

ಅಂದಹಾಗೆ ಗಾಯತ್ರಿ ಮತ್ತು ಪ್ರವೀಣ್​ ಜ್ಯುವೆಲ್ಲರಿ ಶಾಪ್​ ಒಂದರ ಉದ್ಯೋಗಿಗಳು. ಸುಮಾರು 8 ತಿಂಗಳಿನಿಂದ ಕೆಲಸ ಮಾಡುತ್ತಿದ್ದಳು. ಆದರೆ, ಪ್ರವೀಣ್​ನನ್ನು ಬೇರೊಂದು ಶೋರೂಮ್​ಗೆ ವರ್ಗಾಯಿಸಲಾಗಿತ್ತು. ಇಬ್ಬರು ಮದುವೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಅದಕ್ಕೆ ಪುಷ್ಟಿ ನೀಡುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)

ಶಿಕ್ಷಕರ ವಿರುದ್ಧ ಠಾಣೆಯ ಮೆಟ್ಟಿಲೇರಿದ 3ನೇ ಕ್ಲಾಸ್​ ವಿದ್ಯಾರ್ಥಿ: ಬಾಲಕನ ಮಾತು ಕೇಳಿ ಪೊಲೀಸರೇ ಶಾಕ್​!

ಈ ಎರಡು ಪೀಸ್​ ಬಟ್ಟೆಗೆ ಇಷ್ಟೊಂದು ಹಣ ಕೊಡ್ಬೇಕಿತ್ತಾ? ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿರುವ ಕರೀನಾ!

ನಡೆದಾಡುವ ದೇವರೆಂದೇ ಹೆಸರಾಗಿದ್ದ ಚನ್ನಪಟ್ಟಣದ ಗೌಡಗೆರೆ ಗ್ರಾಮದ ಪವಾಡ ಬಸವಪ್ಪ ಇನ್ನಿಲ್ಲ

Share This Article

ನಿಮ್ಮ ಮಕ್ಕಳಿಗೆ ಪ್ರತಿನಿತ್ಯ ಟೀ ಕೊಡ್ತಿದ್ದೀರಾ? ಹೌದು ಎಂದಾದರೆ ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು! Tea

Tea : ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು…

ನಿಮಗೆ ದೃಷ್ಟಿ ದೋಷವಾಗಿದ್ರೆ..ನಿಂಬೆ ಹಣ್ಣಿನಿಂದ ಹೀಗೆ ಮಾಡಿದರೆ ಸಾಕು! Drishti Dosha

Drishti Dosha: ಸಾಮಾನ್ಯವಾಗಿ ಕೆಟ್ಟ ದೃಷ್ಟಿ ಬಿದ್ದಿದೆ ಎಂಬ ಪದವನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಮನೆ ವ್ಯವಹಾರ,…

ನೀವು ಈ ದಿನಾಂಕಗಳಲ್ಲಿ ಹುಟ್ಟಿದ್ದೀರಾ? ಹಾಗಾದರೆ 2025ರಲ್ಲಿ ನಿಮಗೆ ಅದೃಷ್ಟೋ ಅದೃಷ್ಟ… ಹಣದ ಸುಗ್ಗಿ ಗ್ಯಾರಂಟಿ! Numerology

Numerology : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…