More

    ಪಾಕ್​ ಮಾಜಿ ಪ್ರಧಾನಿ ನವಾಜ್​ ಷರೀಫ್​ ಮೇಲೆ ಹಾಲಿ ಪ್ರಧಾನಿ ಇಮ್ರಾನ್​ ಖಾನ್​ ಬೆಂಬಲಿಗರಿಂದ ಹಲ್ಲೆ

    ಲಂಡನ್​: ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ವಿರುದ್ಧ ಪ್ರತಿಪಕ್ಷಗಳು ಸಲ್ಲಿಸಿರುವ ಅವಿಶ್ವಾಸ ನಿರ್ಣಯದ ಪರ-ವಿರೋಧ ಮತ ಇಂದು ಚಲಾವಣೆ ಆಗಲಿದ್ದು, ಇಮ್ರಾನ್​ ಖಾನ್​ ಅವರ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ. ಇದರ ಬೆನ್ನಲ್ಲೇ ಪಾಕ್​ ಮಾಜಿ ಪ್ರಧಾನಿ ನವಾಜ್​ ಷರೀಫ್​ ಅವರ ಮೇಲೆ ಲಂಡನ್​ನಲ್ಲಿ ಶನಿವಾರ ದಾಳಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

    ಆಡಳಿತಾರೂಢ ಪಾಕಿಸ್ತಾನ ತೆಹ್ರಿಕ್​ ಇ ಇನ್ಸಫ್​ (ಪಿಟಿಐ) ಪಕ್ಷದ ಕಾರ್ಯಕರ್ತ ನಾವಾಜ್​ ಷರೀಫ್​ ಮೇಲೆ ದಾಳಿ ಮಾಡಿದ್ದು ಈ ಘಟನೆಯಲ್ಲಿ ಷರೀಫ್​ ಅವರ ರಕ್ಷಣಾ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವುದಾಗಿ ಪಾಕಿಸ್ತಾನದ ಪತ್ರಕರ್ತ ಅಹ್ಮದ್​ ನೂರನಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.

    ಇಮ್ರಾನ್​ ಖಾನ್​ ವಿಶ್ವಾಸ ಮತ ಸಾಬೀತಿಗೂ ಒಂದು ದಿನದ ಮುಂಚೆಯೇ ಈ ಘಟನೆ ಲಂಡನ್​ನಲ್ಲಿ ನಡೆದಿದೆ. ಒಂದು ವೇಳೆ ಅವಿಶ್ವಾಸ ನಿರ್ಣಯವು ಯಶಸ್ವಿಯಾದರೆ, ನವಾಜ್ ಷರೀಫ್ ಅವರ ಸಹೋದರ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ನ ಶೆಹಬಾಜ್ ಷರೀಫ್ ಅವರು ಪ್ರಧಾನಿ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಲಿದ್ದಾರೆ.

    ಷರೀಫ್​ ಮೇಲಿನ ಹಲ್ಲೆಯ ಬಗ್ಗೆ ಮಾತನಾಡಿರುವ ಅವರ ಪುತ್ರಿ, ಮರ್ಯಮ್​, ಹಿಂಸಾಚಾರ ನಡೆಸುತ್ತಿರುವ ಆಡಳಿತ ಪಕ್ಷದವರನ್ನು ಜೈಲಿಗೆ ಹಾಕಬೇಕು. ಪ್ರಚೋದನೆ ಮತ್ತು ದೇಶದ್ರೋಹಕ್ಕಾಗಿ ಇಮ್ರಾನ್ ಖಾನ್ ಅವರ ಮೇಲೆಯೇ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಇಮ್ರಾನ್​ ಖಾನ್​ ಸರ್ಕಾರ ಮುಂದುವರಿಯಬೇಕೇ? ಅಥವಾ ಬೇಡವೇ? ಎಂಬುದು ಇಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಿರ್ಧಾರವಾಗಲಿದೆ. ಪಾಕಿಸ್ತಾನ ಸಂಸತ್ತಿನ ಕೆಳಮನೆಯಲ್ಲಿ ಒಟ್ಟು 342 ಸದಸ್ಯರ ಬಲವನ್ನು ಹೊಂದಿದೆ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಗಲು ಪ್ರತಿಪಕ್ಷಕ್ಕೆ 172 ಮತಗಳ ಅಗತ್ಯವಿದೆ. ಹಾಗೇ ಪ್ರತಿಪಕ್ಷದ ಪ್ಲಾನ್​ ಅನ್ನು ತಲೆಕೆಳಗಾಗಿಸಲು ಇಮ್ರಾನ್​ಗೂ 172 ಮತಗಳ ಅವಶ್ಯಕತೆ ಇದೆ. (ಏಜೆನ್ಸೀಸ್​)

    ಅವಿಶ್ವಾಸ ನಿರ್ಣಯದಿಂದ ಪಾಕ್​ ಪಿಎಂ ಇಮ್ರಾನ್​ ಖಾನ್ ಸೇಫ್​ ಆಗ್ತಾರಾ? ಇಂದೇ ಇಮ್ರಾನ್ ಸರ್ಕಾರದ ಭವಿಷ್ಯ ನಿರ್ಧಾರ​

    ಯುಗಾದಿ ಹಬ್ಬಕ್ಕೆಂದು ಮನೆಗೆ ಬಂದಿದ್ದ ಲೈಟ್​ ಬಾಯ್​, ಯುವತಿ ವಿಚಾರಕ್ಕೆ ಭೀಕರ ಹತ್ಯೆ

    ದಾರೀಲಿ ಸಿಕ್ಕ ಚಿನ್ನವನ್ನು ಯಾಕೆ ಹಿಂದಿರುಗಿಸಿದ್ರಿ? ವಿದ್ಯಾರ್ಥಿಗಳ ಉತ್ತರ ಕೇಳಿ ಪೊಲೀಸರು ಫಿದಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts