More

    ತಳ್ಳೋ ಗಾಡಿಯಲ್ಲಿ ರೋಗಿ ಸಾಗಿಸುವುದನ್ನು ವರದಿ ಮಾಡಿದ ಪತ್ರಕರ್ತರ ವಿರುದ್ಧ ಎಫ್​ಐಆರ್​ ದಾಖಲು!

    ಭೋಪಾಲ್​: ಮಧ್ಯಪ್ರದೇಶದ ಕುಟುಂಬವೊಂದು ತಳ್ಳೋ ಗಾಡಿಯಲ್ಲಿ ವಯಸ್ಸಾದ ವ್ಯಕ್ತಿಯನ್ನು ಮಲಗಿಸಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದನ್ನು ವಿಡಿಯೋ ವರದಿ ಮಾಡಿದ ಒಂದು ದಿನದ ಬೆನ್ನಲ್ಲೇ ಮೂವರು ಸ್ಥಳೀಯ ಪತ್ರಕರ್ತರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

    ಐಟಿ ಕಾಯ್ದೆ ಅಡಿಯಲ್ಲಿ ವಂಚನೆ ಮತ್ತು ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಪ್ರಕರಣ ದಾಖಿಸಲಾಗಿದೆ. ವಿಡಿಯೋದಲ್ಲಿರುವ ಕುಟುಂಬ ವರದಿ ಮಾಡಿರುವುದು ನಿಜ ಮತ್ತು ಸುದ್ದಿ ಕೂಡ ಸತ್ಯ ಎಂದು ಒಪ್ಪಿಕೊಂಡಿದ್ದರು ಸಹ ವರದಿಯು ತಪ್ಪು ಮತ್ತು ಆಧಾರರಹಿತ ಎಂದು ಎಫ್​ಐಆರ್​ನಲ್ಲಿ ದಾಖಲಿಸಿರುವುದು ಅಚ್ಚರಿಗೆ ಕಾರಣವಾಗಿದೆ.

    ಪತ್ರಕರ್ತರಾದ ಕುಂಜಬಿಹಾರಿ ಕೌರವ್​, ಅನಿಲ್​ ಶರ್ಮಾ ಮತ್ತು ಎನ್​ ಕೆ ಭಟೆಲೆ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಭಿಂಡ್ ಜಿಲ್ಲಾಧಿಕಾರಿ ಸತೀಶ್ ಕುಮಾರ್.ಎಸ್ ರಚಿಸಿದ ಕಂದಾಯ ಮತ್ತು ಆರೋಗ್ಯ ಇಲಾಖೆಗಳ ತನಿಖಾ ತಂಡ, ಕುಟುಂಬವು ಆಂಬ್ಯುಲೆನ್ಸ್‌ಗೆ ಯಾವುದೇ ಕರೆ ಮಾಡಿಲ್ಲ ಎಂದು ಹೇಳಿದ ಬಳಿಕ ದೂರು ಪ್ರಕರಣ ದಾಖಲಿಸಲಾಗಿದೆ. ಕುಟುಂಬವು ವಯಸ್ಸಾದ ವ್ಯಕ್ತಿ ಜ್ಞಾನ ಪ್ರಸಾದ್ ವಿಶ್ವಕರ್ಮರನ್ನು ಸರ್ಕಾರಿ ಆಸ್ಪತ್ರೆಗೆ ಬದಲಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು ಎಂದು ತನಿಖಾ ತಂಡ ಹೇಳಿದೆ.

    ಆದರೆ, ವಿಶ್ವಕರ್ಮರ ಪುತ್ರ ಹರಿಕೃಷ್ಣ ಮತ್ತು ಮಗಳು ಪುಷ್ಪಾ ಹೇಳುವ ಪ್ರಕಾರ, ಸಾಕಷ್ಟು ಬಾರಿ ಕರೆ ಮಾಡಿದರೂ ಆಂಬ್ಯುಲೆನ್ಸ್​ ದೊರೆಯದಿದ್ದಾಗ ತಳ್ಳೋ ಗಾಡಿಯಲ್ಲಿ ಹಾಕಿಕೊಂಡು 5 ಕಿ.ಮೀವರೆಗೂ ತಳ್ಳಿಕೊಂಡು ಹೋದೆವು ಎಂದಿದ್ದಾರೆ. ಈ ಘಟನೆ ಭಿಂದ್​ ಜಿಲ್ಲೆಯ ದಾಭೋಹ್​ ಪಟ್ಟಣದ ಲಾಹರ್​ ಬಳಿ ನಡೆದಿದೆ. ಕುಟುಂಬವು ಮರ್ಪುರಾ ಗ್ರಾಮದವರಾಗಿದ್ದಾರೆ.

    ಕುಟುಂಬವು ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತಿದೆ ಎಂಬ ಆಡಳಿತದ ಹೇಳಿಕೆಗೆ ತಿರುಗೇಟು ಕೊಟ್ಟ ವಿಶ್ವಕರ್ಮರ ಮಗಳು, ನಮಗೆ ಪಿಎಂ ಆವಾಸ್ ಯೋಜನೆಯ ಒಂದೇ ಒಂದು ಕಂತು ಮಾತ್ರ ಸಿಕ್ಕಿದೆ. ಜಿಲ್ಲಾಡಳಿತದ ತಂಡವೊಂದು ನನ್ನ ಸಹೋದರನ ಮನೆಯ ಚಿತ್ರಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

    ಇತ್ತೀಚೆಗೆ ನಮ್ಮ ಗುಡಿಸಲಿಗೆ ಬಂದ ಸರ್ಕಾರಿ ಅಧಿಕಾರಿಗಳು ಖಾಲಿ ಕಾಗದಕ್ಕೆ ಸಹಿ ಹಾಕುವಂತೆ ಮಾಡಿದರು ಎಂದು ಪುತ್ರ ಹರಿಕೃಷ್ಣ ಆರೋಪಿಸಿದ್ದಾರೆ. ಆದರೆ, ಈ ಆರೋಪಕ್ಕೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ. ದಾಬೋ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೀವ್ ಕೌರವ್ ಅವರ ದೂರಿನ ಮೇರೆಗೆ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಜನರಿಗೆ ಆಂಬ್ಯುಲೆನ್ಸ್‌ ಲಭ್ಯವಾಗದ ಹಲವಾರು ಪ್ರಕರಣಗಳು ಇತ್ತೀಚೆಗೆ ವರದಿಯಾಗಿದೆ. ಆದರೆ, ಅದನ್ನು ಮುಚ್ಚಿಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ರಾತ್ರಿ ಸಿನಿಮಾ ನೋಡ್ಕೊಂಡು ಮನೆಗೆ ಮರಳುವಾಗ ಬೈಕ್​ಗೆ ಲಾರಿ ಡಿಕ್ಕಿ: ಪತ್ನಿ ಸಾವು, ಪತಿ ಸ್ಥಿತಿ ಗಂಭೀರ

    ಚಿರು ಸಾವಿನ ನಂತರ 2ನೇ ಮದುವೆಯ ಬಗ್ಗೆ ನಟಿ ಮೇಘನಾ ರಾಜ್​ ಮನಬಿಚ್ಚಿ ಮಾತನಾಡಿದ್ದು ಹೀಗೆ…

    ನಾವು ಭಾರತದೊಂದಿಗೆ ಶಾಶ್ವತ ಶಾಂತಿಯನ್ನು ಬಯಸುತ್ತೇವೆ: ಪಾಕ್​ ಪ್ರಧಾನಿ ಶೆಹಬಾಜ್​ ಷರೀಫ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts