ಮುಂಬೈ: ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಅವರ ಮುಂಬೈ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಯಾವುದೇ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ.
ಅಗ್ನಿ ಅವಘಡ ಮಾಹಿತಿ ತಿಳಿದ ಬೆನ್ನಲ್ಲೇ ಅಗ್ನಿಶಾಮಕ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್ ಘಟನಾ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಿದೆ. ರಾಕುಲ್ ವಾಸವಿರುವ ಕಟ್ಟಡದ 12ನೇ ಮಹಡಿಯಲ್ಲಿ ಈ ಘಟನೆ ನಡೆದಿದೆ. ಆದರೆ, ಇದಕ್ಕೆ ಕಾರಣ ಏನು ಎಂಬುದು ಇನ್ನು ತಿಳಿದುಬಂದಿಲ್ಲ.
ಇನ್ನು ರಾಕುಲ್ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೆ, ಯಾರಿಯನ್ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಟ್ಟ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಸದ್ಯ ಬಹು ಬೇಡಿಕೆ ನಟಿಯಾಗಿದ್ದಾರೆ. ತನ್ನ ಸಿನಿ ಜರ್ನಿಯಲ್ಲಿ ವಿವಿಧ ಬಗೆಯ ಚಿತ್ರಗಳನ್ನು ಮಾಡಿರುವ ರಾಕುಲ್ ಈ ಬಾರಿ ವಿಭಿನ್ನ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ. ಕಾಂಡೋಮ್ ಪರೀಕ್ಷಕಳಾಗಿ ಕಾಣಿಸಿಕೊಳ್ಳುತ್ತಿರುವ “ಛತ್ರಿವಾಲಿ” ಸಿನಿಮಾದ ಶೂಟಿಂಗ್ ನೆಡೆಯುತ್ತಿದೆ. ಇತ್ತೀಚೆಗಷ್ಟೇ ಚಿತ್ರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
ಕಾಂಡೋಮ್ ಪರೀಕ್ಷಿಸಲು ಉತ್ಸುಕರಾದ ರಾಕುಲ್: ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಫಸ್ಟ್ಲುಕ್ ಪೋಸ್ಟರ್!
ಮಾಡೆಲ್ಗಳಿಬ್ಬರ ದುರಂತ ಸಾವು: ಪಾರ್ಟಿಯಲ್ಲಿ ಡ್ರಗ್ಸ್ ಅಮಲು, ಖಾಸಗಿ ವಿಡಿಯೋ ಬೆನ್ನತ್ತ ಪೊಲೀಸರು!
ಪೇಜಾವರ ಶ್ರೀಗಳ ಪಾದದ ಧೂಳಿಗೂ ನೀವು ಸಮವಲ್ಲ: ಹಂಸಲೇಖ ವಿರುದ್ಧ ಶಿವರಾಣಿ ಆಕ್ರೋಶ
ಹಂಸಲೇಖ ವಿರುದ್ಧ ದಾಖಲಾಗಿದ್ದ ದೂರು ವಾಪಸ್: ದೂರುದಾರ ಕೃಷ್ಣರಾಜ್ ಕೊಟ್ಟ ಕಾರಣ ಹೀಗಿದೆ…