More

    ಹಂಸಲೇಖ ವಿರುದ್ಧ ದಾಖಲಾಗಿದ್ದ ದೂರು ವಾಪಸ್​: ದೂರುದಾರ ಕೃಷ್ಣರಾಜ್​ ಕೊಟ್ಟ ಕಾರಣ ಹೀಗಿದೆ…

    ಬೆಂಗಳೂರು: ಉಡುಪಿ ಮಠದ ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಂಗೀತ ಮಾತ್ರಿಕ ಹಂಸಲೇಖ ವಿರುದ್ಧ ದಾಖಲಾಗಿದ್ದ ದೂರನ್ನು ಕೃಷ್ಣರಾಜ್ ಎಂಬುವರು ಹಿಂಪಡೆದಿದ್ದಾರೆ.

    ಕೃಷ್ಣರಾಜ್​​ ಎಂಬುವರು ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಸವನಗುಡಿಯಲ್ಲಿ ಹಂಸಲೇಖಾರ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ತಮ್ಮ ದೂರವನ್ನು ಹಿಂಪಡೆದುಕೊಂಡಿದ್ದಾರೆ. ಬ್ರಾಹ್ಮಣ ಸಂಘದ‌ ದೂರಿಗೆ ತಾನು ಬೆಂಬಲಿಸ್ತೇನೆ. ಅದಕ್ಕಾಗಿ ನನ್ನ ದೂರನ್ನು ಹಿಂಪಡೆಯುವುದಾಗಿ ಕೃಷ್ಣರಾಜ್​, ಪೊಲೀಸರಿಗೆ ಸಮಜಾಯಿಷಿ ನೀಡಿದ್ದಾರೆ.

    ಮೈಸೂರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರು ಪೇಜಾವರ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ವಿಡಿಯೋ ವೈರಲ್​ ಆಗಿತ್ತು. ‘ಪೇಜಾವರ ಸ್ವಾಮಿಗಳು ದಲಿತರ ಮನೆಯಲ್ಲಿ ಇದ್ದು ಬಂದಿದ್ದರು ಎಂದು ಇತ್ತೀಚೆಗೆ ನೋಡಿದೆ. ದಲಿತರ ಮನೆಯಲ್ಲಿ ಕೋಳಿ ಕೊಟ್ಟರೆ ಶ್ರೀಗಳು ತಿನ್ನೋಕಾಗುತ್ತಾ? ಕೋಳಿ ಬೇಡ.. ಕುರಿಯ ರಕ್ತ ಫ್ರೈ ಮಾಡಿ ಕೊಟ್ಟರೆ, ಲಿವರ್​ ಕೊಟ್ಟರೆ ತಿನ್ನುತ್ತಾರಾ? ದಲಿತರ ಮನೆಗೆ ಬಲಿತರು ಹೋಗುವುದು ಏನು ದೊಡ್ಡ ವಿಚಾರ? ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಶುರು ಮಾಡಿದರು. ಅದು ಗೀಳಾಗಿ ಅಶೋಕ್​, ಅಶ್ವತ್ಥನಾರಾಯಣ ಅದನ್ನೇ ಮಾಡುತ್ತಿದ್ದಾರೆ. ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಹೆಣ್ಣಿನ ಜತೆ ಇರುತ್ತಾನೆ, ಬೆಳಗಾಗುವ ಹೊತ್ತಿಗೆ ವಾಪಸ್​ ಬಂದು ಕಲ್ಲಾಗುತ್ತಾನೆ ಎನ್ನಲಾಗುತ್ತದೆ. ಅದರಲ್ಲಿ ಏನು ದೊಡ್ಡ ವಿಚಾರ? ದಲಿತರನ್ನು ಕರೆದುಕೊಂಡು ಹೋಗಿ ತನ್ನ ದೇವರ ಗುಡಿಯಲ್ಲಿ ಆಕೆಯನ್ನು ಕೂರಿಸಿದ್ದರೆ ಅದು ದೊಡ್ಡ ವಿಚಾರ. ಇದೊಂದು ನಾಟಕ, ಬೂಟಾಟಿಕೆ. ದಲಿತರ ಮನೆಗೆ ಬಲಿತರು ಬರಬೇಕು, ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು. ನಮ್ಮ ಮನೆಯ ಲೋಟವನ್ನು ನೀನು ಮುಟ್ಟು, ಅದನ್ನು ನಾವು ತೊಳೆಯುತ್ತೇವೆ ಎನ್ನಬೇಕು. ಈಗ ಭಾರತದಲ್ಲಿ ಇದೊಂದು ಬೂಟಾಟಿಕೆ ನಡೆಯುತ್ತಿದೆ’ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಎಚ್ಚೆತ್ತ ‘ನಾದಬ್ರಹ್ಮ’ ಕ್ಷಮೆ ಕೋರಿದ್ದಾರೆ.

    ಪೇಜಾವರ ಶ್ರೀಗಳ ಪಾದದ ಧೂಳಿಗೂ ನೀವು ಸಮವಲ್ಲ: ಹಂಸಲೇಖ ವಿರುದ್ಧ ಶಿವರಾಣಿ ಆಕ್ರೋಶ

    ವಿವಾದದ ಸುಳಿಯಲ್ಲಿ ನಾದಬ್ರಹ್ಮ: ಕ್ಷಮಿಸಿ.. ನನ್ನ ಹೆಂಡ್ತಿ ಬಳಿಯೂ ಕ್ಷಮೆ ಕೇಳಿದ್ದೀನಿ.. ಎಂದು ಕೈಮುಗಿದ ಹಂಸಲೇಖ

    ವಿವಾದದ ಸುಳಿಯಲ್ಲಿ ನಾದಬ್ರಹ್ಮ ಹಂಸಲೇಖ: ರಾಜ್ಯದಲ್ಲಿ ಭುಗಿಲೆದ್ದ ಆಕ್ರೋಶ… ಇದೆಂಥಾ ಮಾತು ಹೇಳಿಬಿಟ್ರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts