More

    ಗಣೇಶನ ಮೂರ್ತಿ ಹಿಡಿದ ಎಬಿಡಿ: ವೈರಲ್​ ಫೋಟೋ ಹಿಂದಿರುವ ಅಸಲಿಯತ್ತು ಹೀಗಿದೆ ನೋಡಿ…

    ನವದೆಹಲಿ: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಟಗಾರ ಎಬಿ ಡಿವಿಲಿಯರ್ಸ್​ ಗಣೇಶನ ಮೂರ್ತಿಯನ್ನು ಹಿಡಿದು ನಿಂತಿರುವ ಫೋಟೋವೊಂದು #happyganeshchaturthi ಎಂಬ ಹ್ಯಾಶ್​ಟ್ಯಾಗ್​ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಎಬಿ ಡಿವಿಲಿಯರ್ಸ್​ ಅಭಿಮಾನಿಗಳ ಇನ್​ಸ್ಟಾಗ್ರಾಂ ಫ್ಯಾನ್ಸ್​ ಪೇಜ್​ನಲ್ಲಿ ಈ ಫೋಟೋ ಅಪ್​ಲೋಡ್​ ಮಾಡಿದ್ದು, ಗಣೇಶ ಹಬ್ಬಕ್ಕೆ ಶುಭಕೋರಿದ್ದಾರೆ. ಆದರೆ, ಈ ಫೋಟೋ ಕುರಿತು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್​ ನಡೆಸಿದ್ದು, ಇದೊಂದು ತಿರುಚಿರುವ ಫೋಟೋ ಎಂಬ ತಿಳಿದುಬಂದಿದೆ.

    ಗಣೇಶನ ಮೂರ್ತಿ ಹಿಡಿದ ಎಬಿಡಿ: ವೈರಲ್​ ಫೋಟೋ ಹಿಂದಿರುವ ಅಸಲಿಯತ್ತು ಹೀಗಿದೆ ನೋಡಿ...

    ಅಧಿಕೃತ ಫೋಟೋದಲ್ಲಿ ಡಿವಿಲಿಯರ್ಸ್​ ಹಿಡಿದಿರುವ ಟ್ರೋಫಿಯನ್ನು. ಅದನ್ನು ಎಡಿಟ್​ ಮಾಡಿ ಗಣೇಶನ ಮೂರ್ತಿಯನ್ನು ಹಿಡಿದಿರುವಂತೆ ತಿರುಚಲಾಗಿದೆ. ಅಧಿಕೃತ ಫೋಟೋವನ್ನು 2017ರಲ್ಲಿ ಲಂಡನ್​ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್​ ಟ್ರೋಫಿಯ ಪತ್ರಿಕಾಗೋಷ್ಠಿಯ ವೇಳೆ ತೆಗೆಯಲಾಗಿದೆ. ಸದ್ಯ ಗಣೇಶನ ಮೂರ್ತಿ ಹಿಡಿದಿರುವಂತೆ ತಿರುಚಿರುವ ಫೋಟೋ ವೈರಲ್​ ಆಗಿದ್ದು, ಈ ವರ್ಷವಾದರೂ ಗಣೇಶನ ಆಶೀರ್ವಾದದೊಂದಿಗೆ ಆರ್​ಸಿಬಿ ಕಪ್​ ಗೆಲ್ಲಲಿ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

    ವೈರಲ್​ ಚಿತ್ರದ ಹಿಂದೆಯೇ ಐಸಿಸಿ ಚಾಂಪಿಯನ್ಸ್​ ಟ್ರೋಫಿ-2017 ಎಂದು ಬರೆದಿರುವುದನ್ನು ನೀವು ಗಮನಿಸಬಹುದು. ಇದೇ ಸುಳಿವಿನ ಮೇಲೆ ಫೋಟೋವನ್ನು ಗೂಗಲ್​ ರಿವರ್ಸ್​ ಸರ್ಚ್​ ಮಾಡಿದಾಗ ಅಧಿಕೃತ ಫೋಟೋವನ್ನು ಐಸಿಸಿ 2017ರ ಜೂನ್​ 3ರಂದು ಟ್ವೀಟ್​ ಮಾಡಿರುವುದು ಪತ್ತೆಯಾಗಿದೆ. ಅದರಲ್ಲಿ ಡಿವಿಲಿಯರ್ಸ್​ ಹಿಡಿದಿರುವುದು ಟ್ರೋಫಿಯೇ ಹೊರತು ಗಣೇಶನ ಮೂರ್ತಿಯಲ್ಲ. ಜೂನ್​ 2ರಂದು ನಡೆದ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಟೂರ್ನಮೆಂಟ್​ನ ಪತ್ರಿಕಾಗೋಷ್ಠಿಯಲ್ಲಿ ಸೆರೆಹಿಡಿಯಲಾಯಿತು. ಆ ವೇಳೆ ಡಿವಿಲಿಯರ್ಸ್​ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿದ್ದರು. ಶ್ರೀಲಂಕಾ ವಿರುದ್ಧದ ತಮ್ಮ ಪಂದ್ಯಕ್ಕೂ ಮುನ್ನ ಪ್ರೆಸ್​ಮೀಟ್​ನಲ್ಲಿ ಮಾತನಾಡಿದ್ದರು.

    ಇದೇ ಚಿತ್ರದೊಂದಿಗೆ 2017 ಜೂನ್​ 3ರಂದು ಎಕ್ಸ್​ಪ್ರೆಸ್​ ಹೆಸರಿನ ವೆಬ್​ಸೈಟ್​ ಒಂದು ಸುದ್ದಿಯನ್ನು ಪ್ರಕಟಿಸಿದೆ. ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಎರಡನೇ ಇನ್ನಿಂಗ್ಸ್​ಗಾಗಿ ಬ್ಯಾಟಿಂಗ್ ಮ್ಯಾಸ್ಟ್ರೋ ಎಬಿ ಡಿ ವಿಲಿಯರ್ಸ್ ಯುಎಇಗೆ ಆಗಮಿಸಿರುವುದಾಗಿ ಘೋಷಿಸಿತ್ತು. ಸೆಪ್ಟೆಂಬರ್ 19 ರಂದು ಐಪಿಎಲ್​ ಎರಡನೇ ಇನ್ನಿಂಗ್ಸ್​ ಆರಂಭವಾಗಲಿದೆ.

    ಹಲವಾರು ದೇಶಗಳಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ ಎಂಬುದು ನಿಜವಾಗಿದ್ದರೂ, ಎಬಿ ಡಿವಿಲಿಯರ್ಸ್ ಅವರ ಎಡಿಟೆಡ್​ ಚಿತ್ರವನ್ನು ಈ ಸಂದರ್ಭದಲ್ಲಿ ಪ್ರಸಾರ ಮಾಡಲಾಗುತ್ತಿದೆ, ಇದು ಅವರು ಗಣೇಶನ ವಿಗ್ರಹವನ್ನು ಹಿಡಿದಿರುವುದನ್ನು ತೋರಿಸುತ್ತದೆ. ಆದರೆ, ಇದು ನಿಜವಲ್ಲ ಎಂಬುದು ಫ್ಯಾಕ್ಟ್​ಚೆಕ್​ನಿಂದ ತಿಳಿದುಬಂದಿದೆ. (ಏಜೆನ್ಸೀಸ್​)

    ಸಂಚಾರಿ ಪೊಲೀಸ್ ಆಯುಕ್ತರು ಓದಲೇಬೇಕಾದ ಸ್ಟೋರಿ ಇದು: ಪೊಲೀಸರಿಗೆ ಸವಾಲಾದ ಬೈಕ್ ಸವಾರ ಈತ!

    ರಾಜ್ಯವೇ ಕಂಬನಿ ಮಿಡಿದಿದ್ದ ವಿಸ್ಮಯ ಸಾವು ಪ್ರಕರಣ: ಪೊಲೀಸ್​ ಚಾರ್ಜ್​ಶೀಟ್​ನಲ್ಲಿ ಗಂಡನ ಕರಾಳ ಮುಖ ಬಯಲು!

    VIDEO| ಅಪಘಾತದಲ್ಲಿ ನಟ ಧರಮ್​ ತೇಜ್​ ಸ್ಥಿತಿ ಗಂಭೀರ: ಬೈಕ್​ ಸ್ಕಿಡ್​ ಆದ ಭಯಾನಕ ವಿಡಿಯೋ ವೈರಲ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts