More

    ಎಲಾನ್​ ಮಸ್ಕ್​ ಈಗ ಟ್ವಿಟರ್ ಕಂಪನಿ​ ಓನರ್​! 44 ಬಿಲಿಯನ್​ ಡಾಲರ್​ಗೆ ಟ್ವಿಟರ್​ ಖರೀದಿಸಿದ ವಿಶ್ವದ ನಂ.1 ಶ್ರೀಮಂತ

    ನವದೆಹಲಿ: ಸಾಮಾಜಿಕ ಜಾಲತಾಣ ದೈತ್ಯ ಕಂಪನಿಗಳಲ್ಲಿ ಒಂದಾದ ಟ್ವಿಟರ್​ ಅನ್ನು ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್​ ಕಾರು ಕಂಪನಿಯ ಮುಖ್ಯಸ್ಥ ಹಾಗೂ ವಿಶ್ವದ ನಂ.1 ಶ್ರೀಮಂತ ಎಲಾನ್​ ಮಸ್ಕ್​ ಖರೀದಿಸಿರುವುದು ಅಧಿಕೃತವಾಗಿದೆ.

    ಪ್ರತಿ ಷೇರಿಗೆ 54.2 ಡಾಲರ್​ನಂತೆ ಸುಮಾರು 44 ಬಿಲಿಯನ್​ ಡಾಲರ್​ನೊಂದಿಗೆ ಟ್ವಿಟರ್​ನ ಸಂಪೂರ್ಣ 100 ರಷ್ಟು ಷೇರನ್ನು ಎಲಾನ್​ ಮಸ್ಕ್​ ಖರಿದೀಸಿದ್ದಾರೆ. ಮೈಕ್ರೋಬ್ಲಾಗಿಂಗ್ ಸೈಟ್​ ಕಳೆದ ಕೆಲವು ವಾರಗಳಿಂದ ಮಸ್ಕ್‌ ಅವರ ಆಫರ್​ ಅನ್ನು ಮೌಲ್ಯಮಾಪನ ಮಾಡುತ್ತಿತ್ತು. ಕೊನೆಗೂ ಆಫರ್​ಗೆ ಓಕೆ ಆಗಿದ್ದು, ಅಧಿಕೃತವಾಗಿ ಟ್ವಿಟರ್​ ಎಲಾನ್​ ಮಸ್ಕ್​ ತೆಕ್ಕೆಗೆ ಬಿದ್ದಿರುವುದಾಗಿ ಟ್ವಿಟರ್​ ಅಧ್ಯಕ್ಷ ಬ್ರೈಟ್​ ಟೈಲರ್​ ತಿಳಿಸಿದ್ದಾರೆ. ಮಸ್ಕ್​​ ಅವರು ಈ ಹಿಂದೆ ಟ್ವಿಟರ್​ನಲ್ಲಿ 9.2 ರಷ್ಟು ಷೇರನ್ನು ಹೊಂದಿದ್ದರು.

    ಟ್ವೀಟರ್​ ಖರೀದಿಯಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಿಇಒ ಪರಾಗ್​ ಅಗರ್ವಾಲ್​, ಟ್ವಿಟರ್ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುವ ಉದ್ದೇಶ ಮತ್ತು ಪ್ರಸ್ತುತತೆಯನ್ನು ಹೊಂದಿದೆ. ನಮ್ಮ ತಂಡದ ಮೇಲೆ ನನಗೆ ಬಹಳ ಹೆಮ್ಮ ಇದೆ ಎಂದಿದ್ದಾರೆ.

    ಎಲಾನ್ ಅವರ ಆಫರ್​ ಅನ್ನು ನಿರ್ಣಯಿಸಲು ಟ್ವಿಟರ್​ ಮಂಡಳಿಯು ಮೌಲ್ಯ, ಖಚಿತತೆ ಮತ್ತು ಹಣಕಾಸಿನ ಮೇಲೆ ಉದ್ದೇಶಪೂರ್ವಕವಾಗಿ ಗಮನಹರಿಸುವುದರೊಂದಿಗೆ ಚಿಂತನಾಶೀಲ ಮತ್ತು ಸಮಗ್ರ ಪ್ರಕ್ರಿಯೆಯನ್ನು ನಡೆಸಿದೆ. ಪ್ರಸ್ತಾವಿತ ವಹಿವಾಟು ಗಣನೀಯ ನಗದು ಪ್ರೀಮಿಯಂ ಅನ್ನು ನೀಡುತ್ತದೆ ಮತ್ತು ಟ್ವಿಟರ್​​ನ ಷೇರುದಾರರಿಗೆ ಇದೊಂದು ಉತ್ತಮ ಮಾರ್ಗವಾಗಿದೆ ಎನ್ನುವ ಮೂಲಕ ಬ್ರೈಟ್​ ಟೈಲರ್​ ಅವರು ಟ್ವಿಟರ್​ ಮಾರಾಟದ ಧನಾತ್ಮಕ ಪರಿಣಾಮದ ಬಗ್ಗೆ ತಿಳಿಸಿದ್ದಾರೆ.

    ಟ್ವಿಟರ್ ವಾಕ್ ಸ್ವಾತಂತ್ರ್ಯ ಹಕ್ಕನ್ನು ಅನುಸರಿಸುತ್ತಿಲ್ಲ ಎಂಬ ಕಾರಣಕ್ಕೆ ಹೊಸ ಸಾಮಾಜಿಕ ಜಾಲತಾಣ ವೇದಿಕೆಯನ್ನು ಪ್ರಾರಂಭಿಸಬೇಕೆ ಎಂದು ಕಳೆದ ತಿಂಗಳು ಎಲಾನ್​ ಮಸ್ಕ್ ಅವರು ಟ್ವಿಟರ್‌ನಲ್ಲಿ ಬಳಕೆದಾರರನ್ನು ಕೇಳಿದಾಗ ಈ ವಿಚಾರ ಪ್ರಾರಂಭವಾಯಿತು. ಮಸ್ಕ್​ ಅವರ ಪ್ರಶ್ನೆಗೆ ಹೆಚ್ಚಿನ ಬಳಕೆದಾರರು ಟ್ವಿಟರ್​ಗೆ ಬದಲಿ ಆಯ್ಕೆಯೊಂದು ಬೇಕು ಎಂದಿದ್ದರು. ಟೆಸ್ಲಾ ಸಿಇಒ ಕೂಡ ಟ್ವಿಟರ್ ವಾಕ್ ಸ್ವಾತಂತ್ರ್ಯದ ಹಕ್ಕನ್ನು ನಿಗ್ರಹಿಸುತ್ತದೆ ಎಂದು ದೂರಿದ್ದರು. ಇದೀಗ ಟ್ವಿಟರ್​ ಅನ್ನು ತಾವೇ ಕೊಂಡುಕೊಂಡಿರುವುದರಿಂದ ಮಾಲೀಕರಾಗಿ ಅವರು ಪರಿಹರಿಸುವ ಮೊದಲ ವಿಷಯ ಇದೇ ಆಗಿರಲಿದೆ ಎಂದು ನಂಬಲಾಗಿದೆ.

    ಕಳೆದ ಹಲವಾರು ವರ್ಷಗಳಲ್ಲಿ, ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಅನೇಕ ವ್ಯಕ್ತಿಗಳ ಧ್ವನಿಗಳನ್ನು ಸೆನ್ಸಾರ್ ಮಾಡಿದ್ದಕ್ಕಾಗಿ ಎಲಾನ್​​ ಮಸ್ಕ್​ ಅವರು ಆಗಾಗ ಟ್ವಿಟರ್ ಅನ್ನು ಪ್ರಶ್ನಿಸುತ್ತಿದ್ದರು. ವಾಸ್ತವವಾಗಿ, ಕರೊನಾ ವೈರಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಟ್ವೀಟ್ ಮಾಡಲು ಮಸ್ಕ್ ಅವರೇ ಟ್ವಿಟರ್‌ನ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಈ ಹಿಂದೆ ಟ್ವಿಟರ್​ ಆರೋಪ ಸಹ ಮಾಡಿತ್ತು. (ಏಜೆನ್ಸೀಸ್​)

    ಆನಂದ ಸಂಕೇಶ್ವರ ಸೇರಿ ಮೂವರಿಗೆ ಡಾಕ್ಟರೇಟ್ ಪ್ರದಾನ: ರಾಜ್ಯ ಮುಕ್ತ ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವ

    ಕಾಣೆಯಾದವರ ಟ್ರೇಲರ್ ಬಂತು..

    ಕಾಜಲ್ ಪಾತ್ರಕ್ಕೆ ಕತ್ತರಿ; ಆಚಾರ್ಯಕ್ಕೀಗ ಒಬ್ಬಳೇ ನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts