More

    ಮನೆಯಲ್ಲಿ ಎಕೆ-47, 60 ಜೀವಂತ ಬುಲೆಟ್​ಗಳು ಪತ್ತೆ: ಇಡಿಯಿಂದ ಜಾರ್ಖಂಡ್​ ಸಿಎಂ ಆಪ್ತನ ಬಂಧನ

    ರಾಂಚಿ: ಮನೆಯಲ್ಲಿ ಎರಡು ಎಕೆ-47 ರೈಫಲ್ಸ್​ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್​ ಮುಖ್ಯಮಂತ್ರಿ ಹೇಮಂತ್​ ಸೊರೆನ್ ಅವರ ನಿಕಟವರ್ತಿ ಪ್ರೇಮ್​ ಪ್ರಕಾಶ್​ ಎಂಬುವರನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ (ಆ.25) ಬಂಧಿಸಿದೆ.

    ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ಪ್ರಸ್ತುತ ಇಡಿ ತನಿಖೆ ನಡೆಸುತ್ತಿದ್ದು, ನಿನ್ನೆ (ಆ.24) ಜಾರ್ಖಂಡ್​ನ ಅನೇಕ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಜಾರ್ಖಂಡ್​ ಸಿಎಂ ಸೊರೆನ್​ ಆಪ್ತ ಪ್ರೇಮ್​ ಪ್ರಕಾಶ್​ಗೆ ಸೇರಿದ ಮನೆಯ ಬೀರುವಿನಲ್ಲಿ ಎರಡು ಎಕೆ-47 ರೈಫಲ್ಸ್​ ಪತ್ತೆಯಾಗಿದ್ದವು.

    ರೈಫಲ್ಸ್​ ಪತ್ತೆ ಹಿನ್ನೆಲೆಯಲ್ಲಿ ಪ್ರೇಮ್​ ಪ್ರಕಾಶ್​ರನ್ನು ಬುಧವಾರ ರಾತ್ರಿ ಶೋಧ ಕಾರ್ಯ ಮುಗಿದ ಬಳಿಕ ಬಂಧಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. ಪ್ರಕಾಶ್​ ಮನೆಯಲ್ಲಿ ಎಕೆ-47 ರೈಫಲ್ಸ್​ ಮಾತ್ರವಲ್ಲದೆ, 60 ಜೀವಂತ ಬುಲೆಟ್​ಗಳು ಸಹ ಪತ್ತೆಯಾಗಿದ್ದವು. ಎಲ್ಲವನ್ನು ಇಡಿ ತನ್ನ ವಶಕ್ಕೆ ಪಡೆದುಕೊಂಡಿದೆ.

    ಜಾರ್ಖಂಡ್, ಬಿಹಾರ, ತಮಿಳುನಾಡು ಮತ್ತು ದೆಹಲಿ-ಎನ್​ಸಿಆರ್ ಸೇರಿ ಒಟ್ಟು 20 ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸೋರೆನ್ ಅವರ ರಾಜಕೀಯ ಸಹಾಯಕರಾದ ಪಂಕಜ್ ಮಿಶ್ರಾ ಮತ್ತು ಮಿಶ್ರಾ ಅವರ ಸಹವರ್ತಿ ಬಚ್ಚು ಯಾದವ್ ವಿಚಾರಣೆ ಸಂದರ್ಭದಲ್ಲಿ ದೊರೆತ ಮಾಹಿತಿ ಆಧರಿಸಿ ಬುಧವಾರ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಶ್ರಾ ಮತ್ತು ಯಾದವ್ ಅವರನ್ನು ಇ.ಡಿ ಈ ಹಿಂದೆಯೇ ಬಂಧಿಸಿತ್ತು. ಇ.ಡಿಯು ಜುಲೈ 9ರಂದು ಪಂಕಜ್ ಮಿಶ್ರಾ ಮತ್ತು ಅವರ ಸಹಚರರಿಗೆ ಸೇರಿದ ಜಾರ್ಖಂಡ್​ನ 19 ಸ್ಥಳಗಳ ಮೇಲೆ ದಾಳಿ ನಡೆಸಿ, ಅವರ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್​ಎ) ಪ್ರಕರಣ ದಾಖಲಿಸಿತ್ತು. ನಂತರ 50 ಬ್ಯಾಂಕ್ ಖಾತೆಗಳಲ್ಲಿದ್ದ 13.32 ಕೋಟಿ ರೂ. ವಶಪಡಿಸಿಕೊಂಡಿತ್ತು. (ಏಜೆನ್ಸೀಸ್​)

    ಅತ್ಯಾಚಾರ ಎಸಗಿ ಬಿಜೆಪಿ ನಾಯಕಿ ಸೊನಾಲಿ ಕೊಲೆ? ಬೆಳಿಗ್ಗೆ ಬಂದ ಕರೆಯೇ ಅನುಮಾನಕ್ಕೆ ದಾರಿ!

    ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಲಾರಿ-ಕ್ರೂಸರ್​ ನಡುವೆ ಭೀಕರ ಅಪಘಾತ: 9 ಮಂದಿ ಸಾವು, ನಾಲ್ವರ ಸ್ಥಿತಿ ಗಂಭೀರ

    ಭಾರತದ ಚೌಕಿ ಮೇಲಿನ ದಾಳಿಗೆ 30 ಸಾವಿರ ರೂ. ಇನಾಮು: ಬಂಧಿತ ಉಗ್ರ ಬಿಚ್ಚಿಟ್ಟ ಭಯಾನಕ ರಹಸ್ಯವಿದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts