More

    ಅಂಡರ್​ 19 ವಿಶ್ವಕಪ್​ ಪಂದ್ಯದ ವೇಳೆ ಭೂಕಂಪನ: ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

    ಹರಾರೆ: ಅಂಡರ್‌-19 ವಿಶ್ವಕಪ್‌ ಟೂರ್ನಿಯ ಐರ್ಲೆಂಡ್​ ಮತ್ತು ಜಿಂಬಾಬ್ವೆ ನಡುವಿನ ಪ್ಲೇಟ್​ ಸಮಿಫೈನಲ್ ಪಂದ್ಯದ ವೇಳೆ ಲಘು ಭೂಕಂಪನ ಸಂಭವಿಸಿರುವ ದೃಶ್ಯ ಟೆಲಿವಿಷನ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಘಟನೆ ಟ್ರಿನಿಡಾಡ್ ಮತ್ತು ಟೊಬೆಗೊದ ಪೋರ್ಟ್​ ಆಫ್​ ಸ್ಪೇನ್​ನಲ್ಲಿರುವ ಕ್ವೀನ್​ ಪಾರ್ಕ್​ ಓವಲ್​ ಮೈದಾನದಲ್ಲಿ ಶನಿವಾರ ನಡೆದಿದೆ. ಪಂದ್ಯದ ನಡುವೆಯೇ ಭೂಕಂಪನ ಅನುಭವವಾಗಿದ್ದು, ಇದನ್ನು ಕಾಮೆಂಟರಿ ಬಾಕ್ಸ್​ನಲ್ಲಿ ಕುಳಿತಿದ್ದ ವೀಕ್ಷಕ ವಿವರಣೆಗಾರರು ಸಹ ವಿವರಿಸಿದ್ದಾರೆ.

    5.2 ತೀವ್ರತೆಯಲ್ಲಿ ಪೋರ್ಟ್​ ಆಫ್​ ಸ್ಪೇನ್​ನ ಕರಾವಳಿ ಪ್ರದೇಶದಲ್ಲಿ ಕಂಪನ ಸಂಭವಿಸಿದೆ. ಪಂದ್ಯವನ್ನು ಸರೆಯುಡಿತ್ತಿದ್ದ ಕ್ಯಾಮೆರಾ ಅಲುಗಾಡಿದ್ದರಿಂದ ಟಿವಿ ಪರದೆಯಲ್ಲಿಯೂ ದೃಶ್ಯ ಅಲುಗಾಡಿದೆ. ಐಸಿಸಿ ಕಾಮೆಂಟೇಟರ್​ ಆ್ಯಂಡ್ರಿವ್​ ಲಿಯೋನಾರ್ಡ್ ಅವರು ಕಾಮೆಂಟರಿ ಬಾಕ್ಸ್​ನಲ್ಲಿ ಕುಳಿತು ಕಂಪನದ ಅನುಭವವನ್ನು ವಿವರಿಸಿದ್ದಾರೆ. ಆದರೆ, ಅವರ ಧ್ವನಿಯಲ್ಲಿ ಎಲ್ಲಿಯೂ ಆತಂಕ ಇರಲಿಲ್ಲ.

    ನಾವು ಇದೀಗ ಭೂಕಂಪನವನ್ನು ಹೊಂದಿದ್ದೇವೆ ಎಂದು ನಾನು ನಂಬುತ್ತೇನೆ. ನಿಜವಾಗಿಯೂ ಭೂಕಂಪನವಾಗಿದೆ. ನಮ್ಮ ಹಿಂದೆ ಕೇವಲ ರೈಲು ಹೋಗುತ್ತಿಲ್ಲ, ಆದರೆ ಇಡೀ ಕ್ವೀನ್ಸ್ ಪಾರ್ಕ್ ಓವಲ್ ಮಾಧ್ಯಮ ಕೇಂದ್ರವೇ ನಡುಗಿದೆ” ಎಂದು ಆ್ಯಂಡ್ರಿವ್​ ವಿವರಿಸಿದ್ದಾರೆ.

    ಸುಮಾರು 15 ರಿಂದ 20 ಸೆಕೆಂಡ್​ಗಳ ಕಾಲ ಭೂಮಿ ಕಂಪಿಸಿದೆ. ಜಿಂಬಾಬ್ವೆ ಇನ್ನಿಂಗ್ಸ್​ನ 6ನೇ ಓವರ್​ನಲ್ಲಿ ಈ ಅನುಭವವಾಗಿದೆ. ಭೂಮಿ ಕಂಪಿಸುತ್ತಿದ್ದರೂ ಎದುರಾಳಿ ಐರ್ಲೆಂಡ್​ ತಂಡದ ಬೌಲರ್​ ಮ್ಯಾಥೀವ್​ ಹಂಪ್ರೇಸ್​ ಬೌಲ್​ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಟಿವಿ ಪರದೆ ಅಲುಗಾಡುವ ಅನುಭವ ಪಂದ್ಯ ನೋಡಿದ ಎಲ್ಲರಿಗೂ ಆಗಿದೆ.

    ಇನ್ನು ಈ ಪಂದ್ಯದಲ್ಲಿ ಐರ್ಲೆಂಡ್​ ತಂಡ ಜಿಂಬಾಬ್ವೆ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿದೆ. (ಏಜೆನ್ಸೀಸ್​)

    ನಾಯಿ ಹುಡುಕುವುದು ಕಷ್ಟವೆಂದ ಪೊಲೀಸರಿಗೆ ಶಾಕ್​ ಕೊಟ್ಟ ಇಂಜಿನಿಯರ್​ ಬ್ರದರ್ಸ್: ಹತ್ತೇ ದಿನದಲ್ಲಿ ಶ್ವಾನ ಪತ್ತೆ​!

    ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಎಂ. ನಾರಾಯಣ ಗೌಡ ನಿಧನ

    ಚಳಿಯ ನಡುವೆಯೇ ಮತ್ತೆ ಕೆಲ ದಿನ ಮಳೆಯ ಕಣ್ಣುಮುಚ್ಚಾಲೆ: ಆರೋಗ್ಯದಲ್ಲಿ ಏರುಪೇರು- ತಜ್ಞರ ಎಚ್ಚರಿಕೆ

    ಪ್ರೀತಿಯ ಹೆಸರಲ್ಲಿ ಕಾನ್ಸ್​ಟೇಬಲ್​ನಿಂದ ವಂಚನೆ: ತಿ. ನರಸೀಪುರ ಠಾಣೆ ಎದುರೇ ಧರಣಿ ಕುಳಿತ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts