More

    ಕರೊನಾ ಬಗ್ಗೆ ಮಾತಾಡಲು ಸರ್ಕಾರದಿಂದ ವಕ್ತಾರರ ನೇಮಕ: ಸಂಶಯ ವ್ಯಕ್ತಪಡಿಸಿದ ಡಾ. ಶ್ರೀನಿವಾಸ ಕಕ್ಕಿಲಾಯ

    ಮಂಗಳೂರು: ಕರೊನಾ ಕುರಿತು ಮಾಧ್ಯಮಗಳಿಗೆ ಮಾಹಿತಿ‌ ನೀಡಲು ಸರ್ಕಾರದಿಂದ ಅಧಿಕೃತ ವಕ್ತಾರರ ನೇಮಕ ವಿಚಾರವಾಗಿ ತಜ್ಞ ವೈದ್ಯ ಡಾ. ಶ್ರೀನಿವಾಸ ಕಕ್ಕಿಲಾಯ ಅವರು ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

    ಮಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ ಅವರು ಸರ್ಕಾರ ನೇಮಿಸಿರುವ ವಕ್ತಾರರ ಪಟ್ಟಿಯಲ್ಲಿರುವ 14 ಜನರಲ್ಲಿ 10 ಮಂದಿ ವೈದ್ಯಕೀಯ ತಜ್ಞರ ಸಮಿತಿಯಲ್ಲಿದ್ದವರು. ಈ ವೈದ್ಯರುಗಳು ಕರೊನಾಗೆ ಹೇಗೆ ಚಿಕಿತ್ಸೆ ನೀಡಬೇಕೆಂದು ಚಿಕಿತ್ಸಾ ಸೂಚಿಯನ್ನು‌ ಸಿದ್ದಪಡಿಸಿರುವವರು. ಈ ಸಮಿತಿಯಲ್ಲಿ ಭಾಗವಹಿಸಿದ 18ರಲ್ಲಿ 10 ಜನರನ್ನು ವಕ್ತಾರರನ್ನಾಗಿ ನೇಮಕ‌ ಮಾಡಲಾಗಿದೆ. ಈ ರೀತಿ ಯಾಕೆ‌ ಮಾಡಿದ್ದಾರೆಂದು ಸರ್ಕಾರ ಉತ್ತರ ಕೊಡಬೇಕು ಎಂದರು.

    ಚಿಕಿತ್ಸಾ ಕಾರ್ಯಸೂಚಿಯ ಬಗ್ಗೆ ನಾವು ಬಹಳ ಗಂಭೀರವಾದ ಪ್ರಶ್ನೆಗಳನ್ನು ಎತ್ತಿದ್ದೆವು. ಹೀಗಾಗಿ ಸೂಚಿಸಿರುವ ಚಿಕಿತ್ಸೆಯನ್ನು ಸಮರ್ಥಿಸಿಕೊಳ್ಳಲು ಈ ಸಮಿತಿಯನ್ನು ನೇಮಕ ಮಾಡಿದೆಯ ಎಂಬ ಸಂಶಯಕ್ಕೆ ಕಾರಣವಾಗಿದೆ. ಬೇರೆ ಯಾರು ಮಾತನಾಡಬಾರದು ಎಂದು ಈ ಹೊಸ ಆದೇಶದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಅಧಿಕೃತವಾಗಿ ಸರ್ಕಾರದ ನೀತಿಯನ್ನು ಜನರಿಗೆ ತಿಳಿಸಲು ಇವರನ್ನು ನಾವು ಸೂಚಿಸುತ್ತೇವೆ ಎಂದಷ್ಟೇ ಇದೆ. ಹೀಗಾಗಿ ನಾವು ಮಾತನಾಡುವುದನ್ನು ಮುಂದುವರಿಸಬಹುದು ಎಂದರು.

    2022 ಜನವರಿ‌ 6ರಂದು ರಾಜ್ಯ ವೈದ್ಯಕೀಯ ತಜ್ಞರ ಸಮಿತಿ ಹೊಸದಾಗಿ ಚಿಕಿತ್ಸಾ ಕಾರ್ಯಸೂಚಿ ಪ್ರಕಟ ಮಾಡಿತ್ತು. ಸೌಮ್ಯ ಲಕ್ಷಣಗಳಿರುವ, ಲಕ್ಷಣಗಳೇ ಇರದ ಕರೊನಾ ಸೋಂಕಿತರಲ್ಲಿ ಹೆಚ್ವು ಅಪಾಯ ಸಾಧ್ಯತೆ ಉಳ್ಳವರನ್ನು ಮಾತ್ರ ಕರೊನಾ ಆರೈಕೆ ಕೇಂದ್ರದಲ್ಲಿ ದಾಖಲು‌ ಮಾಡಬೇಕು. ಇವರಿಗೆ ರೆಮಿಡಿಸಿವರ್ ಅಥವಾ ಮೊಲ್ನುಪಿರವಿರ್ ಕೊಡಬೇಕು ಎಂದು ಪಟ್ಟಿಯಲ್ಲಿ ಹೇಳಿದ್ದರು. ಆದ್ರೆ ಮರುದಿನವೇ ಐ.ಸಿ.ಎಂ.ಆರ್ ನಿರ್ದೇಶಕರು ಮೊಲ್ನುಪಿರವಿರ್ ಬಳಕೆ ಮಾಡಬಾರದು ಎಂದಿದ್ದಾರೆ.

    ಜನವರಿ 16ಕ್ಕೆ ಕೇಂದ್ರ ಆರೋಗ್ಯ ಇಲಾಖೆ, ಐಸಿಎಂಆರ್ ಹೊಸ ಚಿಕಿತ್ಸಾ ಕಾರ್ಯಸೂಚಿ ಪ್ರಕಟಿಸಿದೆ. ಆ ಕಾರ್ಯಸೂಚಿಯಲ್ಲಿ ಮೊಲ್ನುಪಿರವಿರ್ ಬಳಕೆ ಬಗ್ಗೆ ಹೆಸರೇ ಬರೆದಿಲ್ಲ. ರೆಮಿಡಿಸಿವರ್ ಅನ್ನು ಗಂಭೀರ ರೋಗದ ಲಕ್ಷಣ ಇದ್ದವರಿಗಷ್ಟೆ ಬಳಸಿ ಎಂದಿದೆ. ಹೀಗಾಗಿ ರಾಜ್ಯದ ಸಲಹೆಗೂ ಕೇಂದ್ರದ ಸಲಹೆಗೂ ಬಹಳಷ್ಟು ವ್ಯತ್ಯಾಸವಿದೆ. ನಾವು ನಿಮ್ಮ‌ ಕಾರ್ಯಸೂಚಿ ಪಾಲಿಸಬೇಕಾ? ಅಥವಾ ಕೇಂದ್ರ ಸರ್ಕಾರದ ಕಾರ್ಯಸೂಚಿ ಪಾಲಿಸಬೇಕಾ? ಈ ವ್ಯತ್ಯಾಸದ ಬಗ್ಗೆ ವಕ್ತಾರರು ಉತ್ತರ ಕೊಡಬೇಕು. ಆಗ ಯಾರು ಸರಿ? ಯಾರು ತಪ್ಪು? ಮತ್ತು ವೈಜ್ಞಾನಿಕ, ಅವೈಜ್ಞಾನಿಕ ಯಾವುದು ಎಂದು ಗೊತ್ತಾಗುತ್ತದೆ ಎಂದು ಶ್ರೀನಿವಾಸ ಕಕ್ಕಿಲಾಯ ಹೇಳಿದರು. (ದಿಗ್ವಿಜಯ ನ್ಯೂಸ್​)

    ಇವರೇನಾದ್ರು ನಿಮ್ಮ ಊರಿಗೆ ಬಂದ್ರೆ 1 ರೂಪಾಯಿ ನೀಡುವ ಮೂಲಕ ಈ ಉತ್ತಮ ಕೆಲಸಕ್ಕೆ ಕೈಜೋಡಿಸಿ..!

    ಮಧ್ಯರಾತ್ರಿ ದಿಢೀರ್​ ದಾಳಿ ಮಾಡಿದ ದುಷ್ಕರ್ಮಿಗಳಿಂದ ಗಂಡನ ಪ್ರಾಣ ಉಳಿಸಿದ ಪತ್ನಿಯ ಸಾಹಸವೇ ರೋಚಕ!

    ಮತ್ತೆ ಒಂದಾಗ್ತಾರಾ ಮಾಜಿ ತಾರಾದಂಪತಿ? ಸಮಂತಾರ ಈ ನಡೆಯಿಂದ ಅಭಿಮಾನಿಗಳಲ್ಲಿ ಚಿಗುರಿದ ಆಸೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts