More

  ಮುಂದಿನ ಚುನಾವಣೆಗೆ ಮುಳ್ಳುಗುತ್ತಾ ಮಾಜಿ ಸಿಎಂ ಅಖಿಲೇಶ್​ ಯಾದವ್​ರ ಆ ಒಂದು ಹೇಳಿಕೆ?!

  ಲಖನೌ: ಉತ್ತರಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಬಂಧಿಸಿರುವ ಪ್ರಕರಣದ ಬಗ್ಗೆ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರ ವ್ಯಕ್ತಪಡಿಸಿರುವ ಅಭಿಪ್ರಾಯವು ಪ್ರಸಕ್ತ ಮತದಾನದ ಋತುವಿನಲ್ಲಿ ಅವರ ರಾಜಕೀಯ ಹಿನ್ನಡೆಗೆ ಕಾರಣವಾಗಿದೆ.

  ನಾನು ಉತ್ತರ ಪ್ರದೇಶ ಪೊಲೀಸರನ್ನು ನಂಬುವುದಿಲ್ಲ. ಅದರಲ್ಲೂ ಬಿಜೆಪಿ ಸರ್ಕಾರವನ್ನು ನಂಬುವುದಿಲ್ಲ ಎಂದು ಭಾನುವಾರ ಮಾಧ್ಯಮಗಳಿಗೆ ಅಖಿಲೇಶ್​ ಯಾದವ್​ ಹೇಳಿಕೆ ನೀಡಿದ್ದರು. ಇದೀಗ ಅವರ ಹೇಳಿಕೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, ಉಗ್ರರರ ಬಂಧನದ ಬಗ್ಗೆ ಮಾಹಿತಿ ತಿಳಿಯದ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಅವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲು ನಕಲಿ ವಿಡಿಯೋ ಎಡಿಟ್​ ಮಾಡಿ ಹರಿಬಿಡಲಾಗಿದೆ ಎಂದು ಸಮಾಜವಾದಿ ಪಕ್ಷ ಗಂಭೀರ ಆರೋಪ ಮಾಡಿದೆ.

  ಅಂದಹಾಗೆ ಭಾನುವಾರ ಉತ್ತರ ಪ್ರದೇಶದಲ್ಲಿ ಬಂಧನವಾಗಿರುವ ಉಗ್ರರು ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಅಲ್ ಖೈದಾದೊಂದಿಗೆ ಸಂಬಂಧ ಹೊಂದಿದ್ದಾರೆಂದು ನಂಬಲಾಗಿದೆ. ಲಖನೌದ ಜನನಿಬಿಡ ಪ್ರದೇಶಗಳಲ್ಲಿ ಆತ್ಮಾಹುತಿ ದಾಳಿ ನಡೆಸಲು ಇವರು ಸಜ್ಜಾಗಿದ್ದರು ಎನ್ನಲಾಗಿದೆ. ಇದರ ಮಾಹಿತಿ ದೊರೆತ ಕೂಡಲೇ ಕಾರ್ಯ ಪ್ರವೃತ್ತರಾದ ಎಟಿಎಸ್ ಸಿಬ್ಬಂದಿ ದಾಳಿ ನಡೆಸಿ, ಮಿನಾಜ್ ಅಹ್ಮದ್ ಹಾಗೂ ನಾಸಿರುದ್ದೀನ್ ಎಂಬುವವರನ್ನು ಬಂಧಿಸಿದ್ದಾರೆ. ಜತೆಗೆ ಸಜೀವ ಬಾಂಬ್ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ದಾರೆ. ಅಲ್ಲದೆ, ಲಖನೌದಲ್ಲಿ ಅವರು ವಾಸವಿದ್ದ ಮನೆಯಲ್ಲಿ ಸಾಕಷ್ಟು ಸ್ಫೋಟಕಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  ಇವರಿಬ್ಬರು ಲಖನೌ ಸೇರಿದಂತೆ ವಿವಿಧ ನಗರಗಳಲ್ಲಿ ಆಗಸ್ಟ್ 15ರ ಮೊದಲು (ಸ್ವಾತಂತ್ರ್ಯ ದಿನ) ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಯೋಜಿಸುತ್ತಿದ್ದರು ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ ಖೈದಾದ ಉತ್ತರ ಪ್ರದೇಶದ ಶಾಖೆಯ ಮುಖ್ಯಸ್ಥ ಉಮರ್ ಹಲ್ಮಂಡಿಯವರ ಸೂಚನೆಯ ಮೇರೆಗೆ ಅಹ್ಮದ್ ಮತ್ತು ಮಸೀರುದ್ದೀನ್ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

  See also  ಅತ್ಯಾಚಾರ ವಿರೋಧಿಸಿದ್ದಕ್ಕೆ ಮೂಗನ್ನೇ ಕತ್ತರಿಸಿದರು

  ಉಗ್ರರ ಬಂಧನ ಪ್ರಕರಣ ಇದೀಗ ರಾಜಕೀಯ ಲಾಭ-ನಷ್ಟಕ್ಕೆ ತಿರುಗಿದೆ. ಮುಂದಿನ ವರ್ಷದ ಆರಂಭದಲ್ಲೇ ಉತ್ತರ ಪ್ರದೇಶ ಚುನಾವಣೆ ನಡೆಯಲಿದೆ. ಈಗಾಗಲೇ ಚುನಾವಣೆ ಸಿದ್ಧತೆಗೆ ಎಲ್ಲ ಪಕ್ಷಗಳು ಮುಂದಾಗಿವೆ. ಈ ಮಧ್ಯೆ ಬಿಜೆಪಿ ನಾಯಕರು ಉ್ರಗರ ಬಂಧನ ಕುರಿತು ಅಖಿಲೇಶ್​ ಯಾದವ್​ ಅವರ ವ್ಯಕ್ತಪಡಿಸಿರುವ ಅನುಮಾನದ ವಿಡಿಯೋವನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ.

  ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್​ ಯಾದವ್​ ಅವರು ಯುಪಿ ಪೊಲೀಸ್​ ಮತ್ತು ಬಿಜೆಪಿ ಸರ್ಕಾರವನ್ನು ನಂಬುವುದಿಲ್ಲ ಎಂದು ಹೇಳಿದ್ದನ್ನು ಕೇಳಿ ಶಾಕ್​ ಆಯಿತು. ಇದೇ ವ್ಯಕ್ತಿಯೇ ಕರೊನಾ ಲಸಿಕೆಯನ್ನು ನಂಬುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅವರು ಯಾರನ್ನು ನಂಬುತ್ತಾರೆ? ಪಾಕಿಸ್ತಾನ ಸರ್ಕಾರ ಮತ್ತು ಅದರ ಭಯೋತ್ಪಾದಕರನ್ನಾ? ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ನಾಯಕ ಸಿ ಟಿ ರವಿ ಕಿಡಿಕಾರಿದ್ದಾರೆ.

  ಅಖಿಲೇಶ್ ಯಾದವ್ ಅವರಿಗೆ ಮೊದಲು ಲಸಿಕೆ ಬಗ್ಗೆ ಅನುಮಾನವಿತ್ತು, ಈಗ ಭಯೋತ್ಪಾದಕರ ವಿರುದ್ಧ ಉತ್ತರ ಪ್ರದೇಶ ಪೊಲೀಸರ ಕ್ರಮವನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ರಾಜ್ಯ ಅಥವಾ ಆಡಳಿತವನ್ನೂ ನಂಬುವುದಿಲ್ಲ ಅನ್ನುವುದಾದರೆ, ಅವರೇಕೆ ಮುಖ್ಯಮಂತ್ರಿ ಆಗಲು ಬಯಸುತ್ತಾರೆ? ಸುಮ್ಮನೇ ಮನೆಯಲ್ಲಿ ಕುಳಿತುಕೊಳ್ಳಲಿ ಎಂದು ಮತ್ತೊಬ್ಬ ಬಿಜೆಪಿ ನಾಯಕ ಅಮಿತ್​ ಮಾಳವೀಯ ಟೀಕಿಸಿದ್ದಾರೆ. (ಏಜೆನ್ಸೀಸ್​)

  ಬಾಂಬ್​ ಕಟ್ಟಿಕೊಂಡು ಭಾರಿ ಸ್ಫೋಟಕ್ಕೆ ಸಂಚು! ಸ್ವಲ್ಪದರಲ್ಲಿಯೇ ತಪ್ಪಿತು ಭಾರಿ ಅನಾಹುತ

  ಸರ್ಕಾರಕ್ಕೆ ಜಾತಿ ಸಂಕಟ: ಮಡಿಲ ಕೆಂಡವಾದ ವರದಿ; ಸ್ವೀಕರಿಸಿದರೆ ಕಷ್ಟ, ಬಿಟ್ಟರೆ ನಷ್ಟ..

  ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ ಸಿಬಿಐಗೆ ವಹಿಸಿ: ಗುಹಾ ಆಗ್ರಹ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts