More

    ಪ್ರಧಾನಿ ಮೋದಿ ಓರ್ವ ಶ್ರೇಷ್ಠ ವ್ಯಕ್ತಿ, ಭಾರತವು ನನಗಿಂತ ಉತ್ತಮ ಸ್ನೇಹಿತನನ್ನು ಎಂದಿಗೂ ಹೊಂದಿಲ್ಲ: ಡೊನಾಲ್ಡ್​ ಟ್ರಂಪ್​

    ನ್ಯೂಜರ್ಸಿ: ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯುತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ ಮತ್ತು ಭಾರತವು ನನಗಿಂತ ಉತ್ತಮ ಸ್ನೇಹಿತನನ್ನು ಎಂದಿಗೂ ಹೊಂದಿಲ್ಲ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದಾರೆ.

    ನ್ಯೂಯಾರ್ಕ್​ ಸಮೀಪದ ಬೆಡ್ಮಿನ್​ಸ್ಟರ್​ನಲ್ಲಿರುವ ​ಟ್ರಂಪ್ ಅವರ ಗಾಲ್ಫ್​ ಕ್ಲಬ್​ನಲ್ಲಿ​ ಎನ್​ಎನ್​ಡಿಟಿವಿ ನಡೆಸಿದ ಸಂದರ್ಶನದಲ್ಲಿ ಟ್ರಂಪ್​ ಭಾರತ ಮತ್ತು ಪ್ರಧಾನಿ ಮೋದಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಅಲ್ಲದೆ, ಮುಂಬರುವ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಸುಳಿವನ್ನು ನೀಡಿದರು.

    ಹಾಲಿ ಅಧ್ಯಕ್ಷ ಜೋ ಬೈಡೆನ್​ ಮತ್ತು ಮಾಜಿ ಅಧ್ಯಕ್ಷ ಬರಾಕ್​ ಒಬಾಮಗಿಂತ ಭಾರತದೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿದ್ದಾಗಿ ಭಾವಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್​, ಈ ಪ್ರಶ್ನೆಯನ್ನು ನೀವು ಪ್ರಧಾನಿ ಮೋದಿ ಅವರನ್ನು ಕೇಳಬೇಕು. ಆದರೆ ಒಂದಂತೂ ನಿಜ ನೀವು (ಭಾರತ) ಅಧ್ಯಕ್ಷ ಟ್ರಂಪ್ ಅವರೊಂದಿಗೆ ಹೊಂದಿದ್ದಕ್ಕಿಂತ ಉತ್ತಮ ಸಂಬಂಧವನ್ನು ಯಾರೊಂದಿಗೂ ಎಂದಿಗೂ ಹೊಂದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದರು.

    ಟ್ರಂಪ್​ ಅಧ್ಯಕ್ಷರಾಗಿದ್ದಂತಹ ಸಮಯದಲ್ಲಿ ಅಮೆರಿಕದಲ್ಲಿ ನಡೆದ ಬಹುದೊಡ್ಡ ಹೌಡಿ ಮೋದಿ ಕಾರ್ಯಕ್ರಮದ ಸಮಯದಲ್ಲಿ ಭಾರತೀಯ ಸಮುದಾಯದ ನೀಡಿದ ಭಾರಿ ಬೆಂಬಲದ ಬಗ್ಗೆಯೂ ಟ್ರಂಪ್​ ಮಾತನಾಡಿದರು. ನಾನು ಭಾರತ ಮತ್ತು ಪ್ರಧಾನಿ ಮೋದಿಯ ಜೊತೆ ಶ್ರೇಷ್ಠ ಸಂಬಂಧವನ್ನು ಹೊಂದಿದ್ದೇನೆ. ನಾವಿಬ್ಬರು ಸ್ನೇಹಿತರು. ಮೋದಿ ಓರ್ವ ಶ್ರೇಷ್ಠ ವ್ಯಕ್ತಿ ಮತ್ತು ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಗೆ ಸಿಕ್ಕಿರುವುದು ಸುಲಭದ ಕೆಲಸವಲ್ಲ. ನಾವು ಪರಸ್ಪರ ಬಹಳ ಸಮಯದಿಂದ ತಿಳಿದಿದ್ದೇವೆ. ಮೋದಿ ಒಳ್ಳೆಯ ಮನುಷ್ಯ ಎಂದು ಹೊಗಳಿದರು.

    ಮತ್ತೊಮ್ಮೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆಯೇ? ಮತ್ತು ಭಾರತ ಹಾಗೂ ಅಮೆರಿಕ ಅಂತಾ ಬಂದಾಗ ನಿಮ್ಮ ಆದ್ಯತೆ ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್​, ಅಮೆರಿಕದ ಪರವಾಗಿ ಹೇಳುವುದಾದರೆ, ನಾನು ಅಮೆರಿಕಕ್ಕಾಗಿ ಮಾತ್ರ ಮಾತನಾಡಬಲ್ಲೆ, ನಾವು ಸ್ವತಂತ್ರ ಶಕ್ತಿಯಾಗಿದ್ದೇವೆ, ನಾವು ಈಗ ಉತ್ತಮ ಆರ್ಥಿಕತೆಯನ್ನು ಹೊಂದಿದ್ದೇವೆ ಎಂದು ಟ್ರಂಪ್​, ಭಾರತದ ಪರವಾಗಿ ಹೇಳುವುದಾದರೆ, ನನ್ನ ಸ್ನೇಹಿತ ಹಾಗೂ ಪ್ರಧಾನಿ ಮೋದಿ ಆಡಳಿತದ ಅಡಿಯಲ್ಲಿ ಭಾರತವು ಉತ್ತಮವಾಗಿದೆ ಎಂದರು. ಚುನವಣಾ ವಿಚರವಾಗಿ ಮಾತನಾಡಿ, ಎಲ್ಲರೂ ನಾನು ಸ್ಪರ್ಧಿಸಬೇಕೆಂದು ಬಯಸುತ್ತಾರೆ. ಚುನಾವಣೆ ಬಗ್ಗೆ ನಾನು ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

    ಭಾರತವು ನನಗಿಂತ ಉತ್ತಮ ಸ್ನೇಹಿತನನ್ನು ಎಂದಿಗೂ ಹೊಂದಿಲ್ಲ ಎಂದು ನಾನು ಭಾವಿಸುತ್ತೇನೆ. ಅದು ನಾನು ಅಧಿಕಾರದ ಅವಧಿಯಲ್ಲಿ ರೂಪಿಸಿದ ಸಂಬಂಧಗಳಲ್ಲಿ ಒಂದಾಗಿದೆ. ಭಾರತವು ನನಗಿಂತ ಉತ್ತಮ ಸ್ನೇಹಿತನನ್ನು ಅಧ್ಯಕ್ಷನಾಗಿ ಎಂದಿಗೂ ಪಡೆದಿಲ್ಲ ಎಂದು ಟ್ರಂಪ್​ ತಿಳಿಸಿದರು. (ಏಜೆನ್ಸೀಸ್​)

    ಯುವತಿ ಜತೆ ಮೈಸೂರಿನ ಲಾಡ್ಜ್​ನಲ್ಲಿ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ!

    ರಣಾಂಗಣವಾದ ಕ್ರೀಡಾಂಗಣ: ಸೋಲಿನ ಹತಾಶೆ, ಪಾಕ್​ ಫ್ಯಾನ್ಸ್​ಗೆ ಆಫ್ಘಾನ್​ ಅಭಿಮಾನಿಗಳಿಂದ ಕುರ್ಚಿ ಏಟು​

    ಮಹಾಲಕ್ಷ್ಮೀಗೆ ರವೀಂದರ್​ ನೀಡಿರುವ ದುಬಾರಿ ಉಡುಗೊರೆಗಳ ಬಗ್ಗೆ ತಿಳಿದ್ರೆ ಹುಬ್ಬೇರಿಸ್ತೀರಾ! ಇಲ್ಲಿದೆ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts