More

    ಪ್ರೀತಿಯ​ ಪುತಿನ್​ ನಾನು ನಿನ್ನ ತಾಯಿಯಾಗಿದ್ದರೆ… ವೈರಲ್​ ಆಯ್ತು ಅಮೆರಿಕ ನಟಿಯ ವಿಡಿಯೋ ಸಂದೇಶ!

    ಮಾಸ್ಕೋ: ಯೂಕ್ರೇನ್​ ವಿರುದ್ಧ ಯುದ್ಧ ನಿಲ್ಲಿಸುವಂತೆ ಅಮೆರಿಕನ್​ ನಟಿ ಅನ್ನಾಲಿನ್ ಮೆಕ್‌ಕಾರ್ಡ್ ಅವರು ರಷ್ಯಾವನ್ನು ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್ ಕುರಿತು ನಾನು ನಿನ್ನ ತಾಯಿಯಾಗಿದ್ದರೆ ಎಂಬ ಪದ್ಯವನ್ನು ಉಲ್ಲೇಖಸಿರುವುದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

    ಯೂಕ್ರೇನ್​ ವಿರುದ್ಧ ಯುದ್ಧ ಸಾರಿರುವ ವ್ಲಾದಿಮಿರ್​ ಪುತಿನ್​ ಉದ್ದೇಶಿಸಿ 2:20 ನಿಮಿಷದ ವಿಡಿಯೋವನ್ನು 34 ವರ್ಷದ ಅನ್ನಾಲಿನ್ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.​ ಪ್ರೀತಿಯ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಎಂದು ವಿಡಿಯೋದಲ್ಲಿ ಮಾತು ಆರಂಭಿಸಿರುವ ಅನ್ನಾಲಿನ್​, ನಾನು ನಿನ್ನ ತಾಯಿಯಾಗದಿದ್ದಕ್ಕೆ ನನಗೆ ವಿಷಾದವಿದೆ ಎಂದು ಹೇಳುತ್ತಾ ನಾನೇನಾದರೂ ಪುತಿನ್​ ತಾಯಿಯಾಗಿದ್ದರೆ ಆತನ ಜೀವನ ಹೇಗಿರುತ್ತಿತ್ತು ಎಂಬುದನ್ನು ವಿವರಿಸಿದ್ದಾರೆ.

    ನಾನೇನಾದರೂ ನಿನ್ನ ತಾಯಿಯಾಗಿದ್ದರೆ, ಒಂದು ವೇಳೆ ಇಡೀ ಜಗತ್ತು ತಂಪಾಗಿದ್ದರೆ, ನಿನ್ನನ್ನು ಬೆಚ್ಚಗಿಡಲು ನಾನು ಸಾಯುತ್ತಿದ್ದೆ. ನಿನಗೆ ಜೀವನ ನೀಡಲು ನಾನು ಸಾಯುತ್ತಿದ್ದೆ. ಅನ್ಯಾಯ, ಹಿಂಸೆ, ಭಯೋತ್ಪಾದನೆ, ಅನಿಶ್ಚಿತತೆಯಿಂದ ನಿನ್ನನ್ನು ರಕ್ಷಿಸಲು ನಾನು ಸಾಯುತ್ತಿದ್ದೆ. ನಿನ್ನ ತಾಯಿಯಾಗಲು ನಾನು “ತುಂಬಾ ತಡವಾಗಿ” ಜನಿಸಿದೆ ಎಂಬುದನ್ನು ನನ್ನಿಂದ ನಂಬಲು ಸಾಧ್ಯವಿಲ್ಲ ಎಂದು ಪುತಿನ್​ ಉದ್ದೇಶಿಸಿ ಮಾತನಾಡಿದ್ದಾರೆ.

    ಇಲ್ಲಿ ಅನ್ನಾಲಿನ್​ ಅವರು ಪದ್ಯವನ್ನು ರೂಪಕವಾಗಿ ಬಳಸಿದ್ದು, ಪದ್ಯದಲ್ಲಿ ತಾಯಿ ಉಲ್ಲೇಖದೊಂದಿಗೆ ಪುತಿನ್​ ಅವರ ನಡೆಯನ್ನು ಟೀಕಿಸಿದ್ದಾರೆ. ನೀವು ಕಲಿತುಬಂದಿರುವುದು ಸರಿಯಲ್ಲ. ನಿಮ್ಮ ಬೆಳವಣಿಗೆ ಹಾದಿ ಉತ್ತಮವಾಗಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದೀಗ ವಿಡಿಯೋ ವೈರಲ್​ ಆಗಿದ್ದು, ಕೆಲವು ವ್ಯಾಖ್ಯಾನಕಾರರು ಆಕೆ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾಳೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಬಾಲಿವುಡ್ ನಟಿಗೆ ಪ್ರಧಾನಿ ಮೋದಿಯಿಂದ ಭಾವುಕ ಪತ್ರ! ಕಾರಣ?

    ಯೂಕ್ರೇನ್‌ನಿಂದ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ಕ್ರಮ: ಸಿಎಂ ಬೊಮ್ಮಾಯಿ ಹೇಳಿಕೆ

    ಯೂಕ್ರೇನ್‌ನಿಂದ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ಕ್ರಮ: ಸಿಎಂ ಬೊಮ್ಮಾಯಿ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts