More

    ಯುವತಿಯ ಸಂಕಲ್ಪಕ್ಕೆ ಸಿಕ್ತು ಜಯ: ಅಂತೂ ಇಂತೂ ಎಚ್.ರಾಂಪುರಕ್ಕೆ ರೋಡು ಆಯ್ತು, KSRTC ಬಸ್ಸೂ ಬಂತು!

    ದಾವಣಗೆರೆ: ಗ್ರಾಮದಲ್ಲಿ ರಸ್ತೆ ಆಗುವವರೆಗೂ ಮದುವೆ ಆಗುವುದಿಲ್ಲ ಎಂದು ಯುವತಿಯೊಬ್ಬಳು ಮಾಡಿದ್ದ ಸಂಕಲ್ಪಕ್ಕೆ ಬಹುಬೇಗನೇ ಫಲ ಸಿಕ್ಕಿದೆ. ಗ್ರಾಮಕ್ಕೆ ರಸ್ತೆ ಮಾತ್ರವಲ್ಲದೆ ಕೆಎಸ್​ಆರ್​ಟಿಸಿ ಬಸ್​ ಕೂಡ ಆಗಮಿಸಿದ್ದು, ಗ್ರಾಮದ ಬಹುದಿನಗಳ ಕನಸು ಈಡೇರಿದೆ.

    ಅಂತೂ ಇಂತೂ ಎಚ್. ರಾಂಪುರಕ್ಕೆ ರೋಡು ಆಯ್ತು, ಕೆಎಸ್ಸಾರ್ಟಿಸಿ ಬಸ್ಸೂ ಬಂತು ಎಂಬ ಮಾತು ಇದೀಗ ದಾವಣಗೆರೆ ಜಿಲ್ಲೆಯಾದ್ಯಂತ ಕೇಳಿಬರುತ್ತಿದೆ. ಸದ್ಯಕ್ಕೆ ರಾಂಪುರಕ್ಕೆ ಮಣ್ಣಿನ ರಸ್ತೆಯಾಗಿದ್ದು, ಮುಂದೆ ಡಾಂಬರು ರಸ್ತೆಯು ನಿರ್ಮಾಣವಾಗಲಿದೆ. ಅದಕ್ಕಾಗಿ ಸಿದ್ಧತೆಗಳು ಕೂಡ ನಡೆಯುತ್ತಿವೆ.

    ಇನ್ನು ಗ್ರಾಮಕ್ಕೆ ಆಗಮಿಸಿದ ಕೆಎಸ್​ಆರ್​ಟಿಸಿ ಬಸ್‌ಗೆ ರಾಂಪುರದ ಮಹಿಳೆಯೊಬ್ಬರು ಪೂಜೆ ಮಾಡಿ ಸ್ವಾಗತಿಸಿದರು. ಅಂದಹಾಗೆ ಎಚ್​. ರಾಂಪುರ ಗ್ರಾಮ ದಾವಣಗೆರೆ ತಾಲೂಕಿನ ಮಾಯಕೊಂಡ ವಿಧಾನಸಭೆ ಕ್ಷೇತ್ರದಲ್ಲಿ ಬರುತ್ತದೆ. ಈ ಗ್ರಾಮವನ್ನು ಸಂಪರ್ಕಿಸುವ ರಸ್ತೆ ಡಾಂಬರು ಕಾರಣದೇ ದಶಕಗಳಾಗಿತ್ತು. ಗ್ರಾಮದ ರಸ್ತೆ ಸರಿ ಇಲ್ಲ ಎಂಬ ಕಾರಣಕ್ಕೆ ಕೆಎಸ್​ಆರ್​ಟಿಸಿ ಬಸ್ ಸೌಲಭ್ಯವೂ ಮಾಯವಾಗಿತ್ತು. ಜನಪ್ರತಿನಿಧಿಗಳು ಕೂಡ ರಸ್ತೆ ನಿರ್ಮಾಣಕ್ಕೆ ಸ್ಪಂದಿಸಿರಲಿಲ್ಲ. ಮತಗಳು‌ ಕಡಿಮೆ ಇದೆ ಇಲ್ಲೇಕೆ ರಸ್ತೆ ಮಾಡಿಸಬೇಕು ಎಂಬ ಶಾಸಕರ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರು ಪರದಾಡುವಂತಾಗಿತ್ತು. ಕೂಡಲಸಂಗಮದಲ್ಲಿ ಪಂಚಮಸಾಲಿ‌ಮಠದ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ಮಾಡುತ್ತಿರುವ ಆರ್.ಡಿ. ಬಿಂದು ಅವರಿಗೂ ಈಗಾಗಲೇ ಎರಡು ಬಾರಿ ಮದ್ವೆ ಕ್ಯಾನ್ಸಲ್‌ ಆಗಿದ್ದು ಇದಕ್ಕೆ ಕಾರಣ ಕೂಡ ರಸ್ತೆ ಸರಿಯಿಲ್ಲದೇ ಇರುವುದು. ಇದರಿಂದ ಬೇಸತ್ತಿದ್ದ ಡಿ.ಆರ್​. ಬಿಂದು ಎಂಬ ಯುವತಿ ಗ್ರಾಮಕ್ಕೆ ರಸ್ತೆ ಆಗುವವರೆಗೂ ಮದುವೆ ಆಗಲ್ಲವೆಂಬ ಸಂಕಲ್ಪ ಮಾಡಿದ್ದಳು.

    ಯುವತಿಯ ಸೈದ್ಧಾಂತಿಕ ಪ್ರತಿಭಟನೆಗೆ ಗ್ರಾಮಸ್ಥರು ಕೈ ಜೋಡಿಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಈ ಕುರಿತು ಬಿಂದು ಪತ್ರ ಬರೆದಿದ್ದರು. ಎಚ್.ರಾಂಪುರ ಗುಡ್ಡಗಾಡು ಪ್ರದೇಶದಲ್ಲಿದೆ. 50 ಮನೆ, 200 ಜನಸಂಖ್ಯೆ, 180 ಮತದಾರರು ಇರುವ ಪುಟ್ಟ ಗ್ರಾಮ. ಅಲ್ಲಿಗೆ ಹೋಗಲು ರಸ್ತೆಯೇ ಇಲ್ಲ, ಬಸ್ ಸಂಚಾರ ಕನಸಿನ ಮಾತು. ಇದೇ ಕಾರಣಕ್ಕೆ ಇಲ್ಲಿನ ಬಹುತೇಕ ಜನ ಶಿಕ್ಷಣದಿಂದ ವಂಚಿತರಾಗಿದ್ದಾರೆಂದು ಸಿಎಂ ಪತ್ರದಲ್ಲಿ ವಿವರಿಸಿದ್ದರು.

    ಪತ್ರ ಬರೆದ ಪರಿಣಾಮ ಮರುದಿನವೇ ಜಿಲ್ಲಾಧಿಕಾರಿ ತಂಡ ರಾಂಪುರಕ್ಕೆ ದೌಡಾಯಿಸಿತ್ತು. ಜಿಲ್ಲಾಧಿಕಾರಿ ಭೇಟಿ ಮಾಡಿದ ಮಾರನೇ ದಿನವೇ ರಸ್ತೆ ಕಾಮಗಾರಿ‌ ಆರಂಭವಾಗಿತ್ತು. ಸದ್ಯಕ್ಕೆ ಸಮತಟ್ಟದ ಮಣ್ಣಿನ ರಸ್ತೆ ನಿರ್ಮಾಣವಾಗಿದೆ. ಮುಂದೆ ರಸ್ತೆಗೆ ಡಾಂಬರೀಕರಣ ಆಗುವ ನಿರೀಕ್ಷೆ ಇದೆ. ಈ ಕುರಿತು ದಿಗ್ವಿಜಯ‌ ನ್ಯೂಸ್ ಸುದ್ದಿಯನ್ನೂ ಪ್ರಸಾರ ಮಾಡಿತ್ತು. ಅಂತೂ ಇಂತೂ ಎಚ್. ರಾಂಪುರಕ್ಕೆ ರೋಡು ಆಯ್ತು, ಕೆಎಸ್ಸಾರ್ಟಿಸಿ ಬಸ್ಸೂ ಬಂದಿದ್ದು, ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. (ದಿಗ್ವಿಜಯ ನ್ಯೂಸ್​)

    ರಸ್ತೆ ರಿಪೇರಿಯಾಗುವವರೆಗೆ ಮದ್ವೆಯಾಗಲ್ಲ: ದಾವಣಗೆರೆ ಶಿಕ್ಷಕಿಗೆ ಸಿಕ್ತು ಸರ್ಕಾರದ ಸ್ಪಂದನೆ

    ರಸ್ತೆ ರಿಪೇರಿಯಾಗುವವರೆಗೂ ಮದ್ವೆಯಾಗಲ್ಲ ಎಂದು ಶಿಕ್ಷಕಿ ಶಪಥ: ಓಡೋಡಿ ಬಂದ ದಾವಣಗೆರೆ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts