More

    ಕಾನೂನು ಪತ್ರಿಕೋದ್ಯಮದ ಬಗ್ಗೆ ದಕ್ಷ್​ ಸಂಸ್ಥೆಯಿಂದ ಉಚಿತ ಕಾರ್ಯಾಗಾರ: ಭಾಸ್ಕರ್​ ರಾವ್​ರಿಂದ ಉಪಯುಕ್ತ ಸಲಹೆ

    ಬೆಂಗಳೂರು: ನಗರದಲ್ಲಿಂದು ಭಾರತೀಯ ವಿದ್ಯಾ ಭವನದಲ್ಲಿ ಪೊಲೀಸ್‌ ಹಾಗೂ ಮಾಧ್ಯಮ ವಿಷಯ ಕುರಿತಂತೆ ’ಮಾರ್ಗ’ ಎಂಬ ಅಡಿಬರಹದೊಂದಿಗೆ ದಕ್ಷ್‌ ಸಂಸ್ಥೆಯು ಕಾನೂನು ಪತ್ರಿಕೋದ್ಯಮದ ಉಚಿತ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿತು.

    ಕಾನೂನು ಹಾಗೂ ನ್ಯಾಯಾಲಯ ಕಾರ್ಯಕಲಾಪಗಳ ಬಗ್ಗೆ ಮಾಧ್ಯಮದಲ್ಲಿ ವರದಿ ಮಾಡುವಾಗ, ಯಾವ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು ಹಾಗೂ ಎಚ್ಚರಿಕೆ ವಹಿಸಬೇಕಾದ ಅಂಶಗಳು ಯಾವುವು ಎಂಬುದರ ಬಗ್ಗೆ ಕಾರ್ಯಾಗಾರದಲ್ಲಿ ಅರಿವು ಮೂಡಿಸಲಾಯಿತು.

    ಕಾನೂನು ಮೂಲ ಜ್ಞಾನ, ಭಾರತೀಯ ಕಾನೂನು ಪದ್ದತಿಯನ್ನು ಅರ್ಥ ಮಾಡಿಕೊಳ್ಳುವುದು, ಕಾನೂನು ಬರವಣಿಗೆಯಲ್ಲಿ ಪರಿಣತಿ, ಮಲ್ಟಿ ಮೀಡಿಯಾ ಸ್ಟೋರಿ ಟೆಲ್ಲಿಂಗ್, ಪರಿಣಾಮಕಾರಿ ಆನ್‌ಲೈನ್‌ ವರದಿಗಾರಿಕೆ ಮುಂತಾದವುಗಳ ಮೇಲೆ ಬೆಳಕು ಚೆಲ್ಲಲಾಯಿತು.

    ಈ ವೇಳೆ ಅಪರಾಧ ವರದಿಗಾರ ಆದಿತ್ಯ ಭಾರದ್ವಾಜ ಮತ್ತು ಕಾನೂನು ವರದಿಗಾರ್ತಿ ಸುಪ್ರೀತಾ ಹೆಬ್ಬಾರ್‌ ಅವರು ತಮ್ಮ ಅನುಭವ ಹಾಗೂ ವರದಿಗಾರಿಕೆ ಕುರಿತು ಅಭ್ಯರ್ಥಿಗಳಿಗೆ ತಿಳಿವಳಿಕೆ ನೀಡಿದರು. ನ್ಯಾಯಾಲಯ ಆದೇಶ ಉಲ್ಲಂಘನೆ ಹಾಗೂ ಮಾನಹಾನಿ ಮೊಕದ್ದಮೆಗಳನ್ನು ನಿಭಾಯಿಸುವ ಕುರಿತು ಹಿರಿಯ ಕೌನ್ಸೆಲರ್‌ ಮಧುಕರ್‌ ದೇಶಪಾಂಡೆ ಮಾತನಾಡಿದರು.

    ಕಾರ್ಯಗಾರ ಉದ್ದೇಶಿಸಿ ಮಾತನಾಡಿದ ಮಾಜಿ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​, ಪ್ರತಿಯೊಂದು ಅಪರಾಧದ ಹಿಂದೆ ನಿರ್ದಿಷ್ಟ ಕಾರಣವಿರುತ್ತದೆ. ಭಾರೀ ಸದ್ದು ಮಾಡಿದ ಪ್ರಕರಣಗಳಲ್ಲಿ ಮಾಧ್ಯಮ ಮತ್ತು ಪೊಲೀಸರ ನಡುವೆ ಆಗಾಗ ಸಂಘರ್ಷ ಏರ್ಪಡುತ್ತವೆ. ಈ ಸಂದರ್ಭದಲ್ಲಿ ಪೊಲೀಸರು ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts