More

    ಅಕ್ಟೋಬರ್​ 17ಕ್ಕೆ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಅ. 19ಕ್ಕೆ ಫಲಿತಾಂಶ, ಕಾಂಗ್ರೆಸ್​ ಸಭೆಯಲ್ಲಿ ನಿರ್ಧಾರ

    ನವದೆಹಲಿ: ಹಿರಿಯ ನಾಯಕ ಗುಲಾಂ ನಬಿ ಆಜಾದ್​ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್​ ವಲಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಅಕ್ಟೋಬರ್​ 17ರಂದು ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅ. 19ರಂದು ಕಾಂಗ್ರೆಸ್​ನ ಮುಂದಿನ ಅಧ್ಯಕ್ಷ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬೀಳಲಿದೆ.

    ನಿರ್ಧಾರ ತೆಗದುಕೊಳ್ಳುವಲ್ಲಿ ಪಕ್ಷದ ಪ್ರಮುಖ ಘಟಕವಾಗಿರುವ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಯು ಇಂದು ಸಭೆ ನಡೆಸಿ, ಮುಂದಿನ ಎಐಸಿಸಿ ಅಧ್ಯಕ್ಷರ ಚುನಾವಣೆಯ ವೇಳಾಪಟ್ಟಿಯನ್ನು ಅನುಮೋದಿಸಿದ್ದು, ಅದರ ವಿವರ ಈ ಕೆಳಕಂಡಂತಿದೆ.

    ಸೆ.22: ಅಧಿಸೂಚನೆ ಪ್ರಕಟ
    ಸೆ.24ರಿಂದ 30: ನಾಮಪತ್ರ ಸಲ್ಲಿಕೆ
    ಅ. 1: ನಾಮಪತ್ರ ಪರಿಶೀಲನೆ
    ಅ.8. ನಾಮಪತ್ರ ವಿತರಣೆ ಕೊನೆಯ ದಿನಾಂಕ
    ಅ. 17. ಅಧ್ಯಕ್ಷ ಚುನಾವಣೆ
    ಅ. 19: ಎಣಿಕೆಯ ದಿನಾಂಕ ಮತ್ತು ಫಲಿತಾಂಶದ ಘೋಷಣೆ (ಅಗತ್ಯವಿದ್ದರೆ)

    ಈ ವರ್ಷ ಆಗಸ್ಟ್ 21 ರಿಂದ ಸೆಪ್ಟೆಂಬರ್ 20ರ ನಡುವೆ ಹೊಸ ಪಕ್ಷದ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಕಾಂಗ್ರೆಸ್ ಕಳೆದ ವರ್ಷ ಅಕ್ಟೋಬರ್‌ನಲ್ಲಿಯೇ ಘೋಷಿಸಿತ್ತು. 2019 ರಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಸತತ ಎರಡನೇ ಸೋಲಿನ ನಂತರ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.

    ರಾಹುಲ್​ ರಾಜೀನಾಮೆ ಬಳಿಕ ಹಂಗಾಮಿ ಅಧ್ಯಕ್ಷರಾಗಿ ಮತ್ತೆ ಪಕ್ಷದ ಆಡಳಿತವನ್ನು ವಹಿಸಿಕೊಂಡ ಸೋನಿಯಾ ಗಾಂಧಿ, ಒಂದು ಗುಂಪಿನ ನಾಯಕರು ಬಹಿರಂಗವಾಗಿ ಬಂಡಾಯ ಎದ್ದಾಗ ಆಗಸ್ಟ್ 2020 ರಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಸಿಡಬ್ಲ್ಯೂಸಿ ಅವರನ್ನು ಮುಂದುವರಿಸಲು ಒತ್ತಾಯಿಸಿತ್ತು. ಸದ್ಯ ಹಂಗಾಮಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್​)

    ಬಿಜೆಪಿ ನಾಯಕಿ ಸೊನಾಲಿ ಸಾವು ಪ್ರರಕಣ: ಗೋವಾ ಪೊಲೀಸರಿಂದ ಮತ್ತೊಬ್ಬ ಡ್ರಗ್ಸ್​ ಪೆಡ್ಲರ್​ ಅರೆಸ್ಟ್​

    ಸೂಪರ್​ ಟೆಕ್​ ಅವಳಿ ಗೋಪುರ ನೆಲಸಮ! 55 ಸಾವಿರ ಟನ್ ಅವಶೇಷ ತೆರವಿಗೆ ಬೇಕಿದೆ ಇಷ್ಟೊಂದು ಸಮಯ…

    VIDEO: ಪಾಕ್​ನಲ್ಲಿ ಮಳೆಯ ರುದ್ರ ನರ್ತನ: ಸಾವಿನ ಸಂಖ್ಯೆ 1033ಕ್ಕೆ ಏರಿಕೆ- ಪ್ರವಾಹದ ಭೀಕರ ವಿಡಿಯೋಗಳು ಇಲ್ಲಿವೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts