More

    ಜನರೇ ಎಚ್ಚರ! ಒಂದು ಫೋನ್​ ಕಾಲ್​, ಒಂದು ಸಣ್ಣ ಎಡವಟ್ಟು… 70 ಸಾವಿರ ಹಣ ಕಳೆದುಕೊಂಡ ಮಹಿಳೆ

    ಚಿತ್ತೂರು: ಇತ್ತೀಚೆಗೆ ಸೈಬರ್​ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರಿ ಯೋಜನೆ ಹೆಸರಲ್ಲಿ ಕೆವೈಸಿ, ಬ್ಯಾಂಕ್​ ಖಾತೆ ಮತ್ತು ಎಟಿಎಂ ವಿವರಗಳನ್ನು ಪಡೆಯುವ ಮೂಲಕ ಬ್ಯಾಂಕ್​ ಖಾತೆಯಲ್ಲಿರುವ ಹಣವನ್ನು ಸೈಬರ್​ ಖದೀಮರು ಎಗರಿಸುತ್ತಿದ್ದಾರೆ. ಸೈಬರ್​ ಖದೀಮರ ಮಾತಿಗೆ ಮರುಳಾಗಿ ಸ್ವಲ್ಪವೂ ಯೋಚಿಸಿದೇ ಜನರು ವಿವರಗಳನೆಲ್ಲ ನೀಡಿ ಮೋಸ ಹೋಗುತ್ತಿರುವ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ.

    ಇತ್ತೀಚೆಗೆ ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ಒಂದು ನಡೆದಿದ್ದು, ಸೈಬರ್​ ಠಾಣೆಗೆ ದೂರು ಸಹ ದಾಖಲಾಗಿದೆ. ಪೆದ್ದಪಂಜನಿ ವಲಯದ ನಾಗಿರೆಡ್ಡಿಪಲ್ಲಿ ಪಂಚಾಯಿತಿಯ ಚಲವರಿಪಲ್ಲಿ ಗ್ರಾಮದ ನಿವಾಸಿ ಮಂಜುಳ ರಾಯಲಪೇಟೆಯ ಇಂಡಿಯನ್​ ಬ್ಯಾಂಕ್​ನಲ್ಲಿ ಸೇವಿಂಗ್ಸ್​ ಖಾತೆ ಹೊಂದಿದ್ದಾರೆ.

    ಸಂತ್ರಸ್ತೆಯ ಬ್ಯಾಂಕ್​ ಖಾತೆಗೆ ಲಿಂಕ್​ ಆಗಿದ್ದ ಗಂಡನ ಮೊಬೈಲ್ ನಂಬರ್​ಗೆ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ನಾನು ಬ್ಯಾಂಕ್​ ಮ್ಯಾನೇಜರ್​ ಮಾತನಾಡುತ್ತಿದ್ದೇನೆ. ನಿಮ್ಮ ಎಟಿಎಂ ಕಾರ್ಡ್​ ಅವಧಿ ಮುಗಿದಿದೆ. ಹೀಗಾಗಿ ಆಧಾರ್​ ನಂಬರ್​ ಮತ್ತು ಅಕೌಂಟ್​ ನಂಬರ್​ ಅಪ್ಡೇಟ್​ ಮಾಡಬೇಕಿದೆ ಎಂದು ಕೇಳಿದ್ದಾನೆ.

    ಹಿಂದೆ-ಮುಂದೆ ಯೋಚಿಸದೇ ಕೇಳಿದ ವಿವರವನ್ನೆಲ್ಲ ಸಂತ್ರಸ್ತೆ ನೀಡಿದ್ದಾಳೆ. ಇದಾದ ಬಳಿಕ ಮತ್ತೆ ಕರೆ ಮಾಡಿ ಒಟಿಪಿ ನಂಬರ್​ ಹೇಳುವಂತೆ ಕೇಳಿದ್ದಾನೆ. ಸರಿ ಓಕೆ ಅಂತಾ ಅದನ್ನು ಕೂಡ ಸಂತ್ರಸ್ತೆ ಹೇಳಿದ್ದಾಳೆ. ಇದಾದ ಕೆಲವೇ ಕ್ಷಣದಲ್ಲಿ ಆಕೆಯ ಬ್ಯಾಂಕ್​ ಖಾತೆಯಿಂದ ಸೈಬರ್​ ಖದೀಮ 74,571 ರೂಪಾಯಿ ಹಣವನ್ನು ಎಗರಿಸಿದ್ದಾನೆ. ಇದಾದ ನಂತರ ಸಂತ್ರಸ್ತೆಯ ಮೊಬೈಲ್​ ಹಣ ಕಡಿತವಾಗಿರುವ ಸಂದೇಶ ಹೋಗಿದೆ. ಇದರಿಂದ ಗಾಬರಿಗೊಂಡ ಸಂತ್ರಸ್ತೆ ಬ್ಯಾಂಕ್​ಗೆ ಹೋಗಿ ವಿಚಾರಿಸಿದಾಗ ಸೈಬರ್​ ಖದೀಮನಿಂದ ವಂಚನೆ ಆಗಿರುವುದು ಗೊತ್ತಾಗಿದೆ.

    ಇದೀಗ ಸೈಬರ್​ ಠಾಣೆಯ ಮೆಟ್ಟಿಲೇರಿರುವ ಮಹಿಳೆ ಪೆದ್ದಪಂಜನಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೊಬೈಲ್​ ನಂಬರ್​ ಆಧಾರದ ಮೇಲೆ ಸೈಬರ್​ ಕ್ರಿಮಿನಲ್​ ಜಾಡನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ. (ಏಜೆನ್ಸೀಸ್​)

    ಈ ಫೋಟೋ ನಕಲಿ! ಕೆಟ್ಟದಾಗಿ ತಿರುಚಿದ ಫೋಟೋ ವಿರುದ್ಧ ಗುಡುಗಿದ ನಟಿ ಮಾಳವಿಕ ಮೋಹನನ್​

    U19 World Cup: ಯಶ್​ ಧುಲ್​-ಶೇಕ್​ ರಶೀದ್ ಬ್ಯಾಟಿಂಗ್​​ ಅಬ್ಬರಕ್ಕೆ ಆಸಿಸ್​ ಧೂಳೀಪಟ: ಫೈನಲ್​ಗೆ ಲಗ್ಗೆಯಿಟ್ಟ ಭಾರತ

    ಪಬ್​ಜಿಗೆ ದಾಸನಾಗಿ ಕುಟುಂಬವನ್ನೆ ಕೊಂದ ಬಾಲಕನ ಮಾತು ಕೇಳಿ ಪಾಕ್​ ಪೊಲೀಸರೇ ಶಾಕ್​! PUBG ಬ್ಯಾನ್​ಗೆ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts