More

    ರಾಷ್ಟ್ರೀಯ ಭದ್ರತೆ ಮುಖ್ಯ: ಚಾರ್​ ಧಾಮ್​ ರಸ್ತೆ ಅಗಲೀಕರಣಕ್ಕೆ ಗ್ರೀನ್​ ಸಿಗ್ನಲ್ ಕೊಟ್ಟ ಸುಪ್ರೀಂಕೋರ್ಟ್​

    ನವದೆಹಲಿ: ಕೇಂದ್ರದ ಚಾರ್​ ಧಾಮ್​ ರಸ್ತೆ ವಿಸ್ತರಣೆ ಯೋಜನೆಯ ಭಾಗವಾಗಿ ರಸ್ತೆ ವಿಸ್ತರಣೆಗೆ ಸುಪ್ರೀಂಕೋರ್ಟ್​ ಗ್ರೀನ್​ ಸಿಗ್ನಲ್​ ನೀಡಿದೆ. ಕಾರ್ಯತಂತ್ರದ ಪ್ರಾಮುಖ್ಯತೆಯ ದೃಷ್ಟಿಯಿಂದ ರಸ್ತೆಯನ್ನು ವಿಸ್ತರಣೆ ಮಾಡಬೇಕಿದೆ ಎಂಬ ಸರ್ಕಾರದ ವಾದವನ್ನು ಕೋರ್ಟ್​ ಒಪ್ಪಿದೆ.

    ಗಡಿ ಭದ್ರತಾ ಕಾಳಜಿಯ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಭದ್ರತೆಗೆ ಗಂಭೀರವಾದ ಸವಾಲುಗಳು ಎದುರಾಗಿದ್ದು, ಸೇನೆ ಮತ್ತು ಶಸ್ತ್ರಾಸ್ತ್ರಗಳ ಸಾಗಾಟ ತುಂಬಾ ಅಗತ್ಯವಾಗಿದ್ದು, ರಸ್ತೆ ವಿಸ್ತರಣೆ ತುಂಬಾ ಮುಖ್ಯವಾಗಿದೆ ಎಂದು ದೇಶದ ಉನ್ನತ ನ್ಯಾಯಾಲಯ ಮಂಗಳವಾರ ಅಭಿಪ್ರಾಯಪಟ್ಟಿದೆ.

    ರಕ್ಷಣಾ ಸಚಿವಾಲಯವು ವಿಶೇಷ ಸಂಸ್ಥೆಯಾಗಿದ್ದು, ಅದರ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಅದು ನಿರ್ಧರಿಸಬಹುದು ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್​, ಸೂರ್ಯಕಾಂತ್​ ಮತ್ತು ವಿಕ್ರಮ್​ ನಾಥ್​ ಅವರನ್ನೊಳಗೊಂಡ ತ್ರಿಸದಸ್ಯ ಪೀಠವೂ ತಿಳಿಸಿದೆ.

    ಗಡಿಯಲ್ಲಿ ಸುರಕ್ಷತಾ ದೃಷ್ಟಿಯಿಂದ ಸೇನಾ ಪಡೆಗಳಿಗೆ ಮೂಲಭೂತ ಸೌಕರ್ಯದ ಅವಶ್ಯಕತೆ ಇದ್ದು, ಆಯಕಟ್ಟಿನ ಪ್ರಾಮುಖ್ಯತೆಯನ್ನು ಹೊಂದಿರುವ ಹೆದ್ದಾರಿಗಳನ್ನು ಇತರ ಗುಡ್ಡಗಾಡು ಪ್ರದೇಶಗಳಲ್ಲಿರುವ ರಸ್ತೆಗಳಂತೆ ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್​ ಹೇಳಿದೆ. ಆದಾಗ್ಯೂ, ನ್ಯಾಯಾಲಯವು ಅರ್ಜಿದಾರರ ಪರಿಸರ ಕಾಳಜಿಯನ್ನು ಒಪ್ಪಿಕೊಂಡಿದ್ದು, ಉನ್ನತ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸುವುದಾಗಿ ಹೇಳಿದೆ.

    ಈ ಸಮಿತಿಯು ಪ್ರತಿ 4 ತಿಂಗಳಿಗೊಮ್ಮೆ ನ್ಯಾಯಾಲಯಕ್ಕೆ ಯೋಜನೆಯ ಪ್ರಗತಿಯ ಬಗ್ಗೆ ವರದಿಯನ್ನು ನೀಡಲಿದೆ. ಈ ಸಮಿತಿಯಲ್ಲಿ ರಾಷ್ಟ್ರೀಯ ಪರಿಸರ ಸಂಶೋಧನಾ ಸಂಸ್ಥೆ ಮತ್ತು ಪರಿಸರ ಸಚಿವಾಲಯದ ಪ್ರತಿನಿಧಿಗಳನ್ನು ಸಹ ಇರಲಿದ್ದಾರೆ. ಅಸ್ತಿತ್ವದಲ್ಲಿರುವ ಶಿಫಾರಸುಗಳ ಅನುಷ್ಠಾನವನ್ನು ಖಚಿತಪಡಿಸುವುದು ಈ ಸಮಿತಿಯ ಉದ್ದೇಶವಾಗಿರಲಿದೆ.

    ರಸ್ತೆ ಅಗಲೀಕರಣವನ್ನು ಖಂಡಿಸಿ ಸಿಟಿಜನ್ಸ್ ಫಾರ್ ಗ್ರೀನ್ ಡೂನ್ ಎಂಬ ಸ್ಥಳೀಯ ಎನ್‌ಜಿಒ ಅರ್ಜಿ ಸಲ್ಲಿಸಿತು. ದುರ್ಬಲವಾದ ಹಿಮಾಲಯನ್ ಪರಿಸರ ವ್ಯವಸ್ಥೆಗೆ ವಿನಾಶವನ್ನು ತಂದೊಡುತ್ತದೆ ಎಂದು ಅರ್ಜಿಯಲ್ಲಿ ಎನ್​ಜಿಒ ಉಲ್ಲೇಖಿಸಿತು. (ಏಜೆನ್ಸೀಸ್​)

    ಮಧ್ಯರಾತ್ರಿ ಕಾರಲ್ಲಿ ಬಂದು ಅಸಭ್ಯ ವರ್ತನೆ​: ಬಂಧಿತ ಆರೋಪಿ ಕಿಮ್ಸ್ ಕಾಲೇಜಿನ ಎಂಎಸ್ ವಿದ್ಯಾರ್ಥಿ

    ಬೆಂಗಳೂರಲ್ಲಿ ಸಾವಿರ ಕೋಟಿ ಒಡೆಯ ಕೆಜಿಎಫ್​ ಬಾಬುಗೆ ಸೋಲು! ಪರಿಷತ್​ ಚುನಾವಣೆಯಲ್ಲಿ ಗೆದ್ದು ಬೀಗಿದ ಬಿಜೆಪಿ

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹಲ್ಲೆ ಪ್ರಕರಣ: ನಟ ವಿಜಯ್​ ಸೇತುಪತಿಗೆ ಸಮನ್ಸ್​ ನೀಡಿದ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts