More

    ಚಾಮರಾಜನಗರ ಆಕ್ಸಿಜನ್​ ದುರಂತ ಬೆನ್ನಲ್ಲೇ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶಾಸಕ ಪುಟ್ಟರಂಗಶೆಟ್ಟಿ!

    ಚಾಮರಾಜನಗರ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನಡೆದ 24 ಕರೊನಾ ಸೋಂಕಿತರ ದುರಂತ ಸಾವಿನ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಕಾಂಗ್ರೆಸ್​ ನಾಯಕ ಪುಟ್ಟರಂಗಶೆಟ್ಟಿ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

    ಈಗಲೂ ಜಿಲ್ಲಾಸ್ಪತ್ರೆಯಲ್ಲಿ 50 ಜನ‌ ತುಂಬಾ ಗಂಭೀರ ಸ್ಥಿತಿಯಲ್ಲಿದ್ದಾರಂತೆ. ಆಸ್ಪತ್ರೆಯಲ್ಲಿ ಒಟ್ಟು 170 ಕರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ‌ 15 ದಿನಗಳಿಂದ 50 ರೋಗಿಗಳು ಗಂಭೀರ ಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ. ಯಾವ ಸಮಯದಲ್ಲಿ ಏನಾಗಲಿದೆ ಎಂಬುದನ್ನ‌ ಹೇಳುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಪುಟ್ಟರಂಗಶೆಟ್ಟಿ ಮಾಹಿತಿ ನೀಡಿದರು.

    120 ಜನರು ನಾರ್ಮಲ್‌ ಕಂಡಿಷನ್​ನಲ್ಲಿದ್ದಾರೆ. ತಕ್ಷಣದಿಂದಲೇ ಜಿಲ್ಲಾಸ್ಪತ್ರೆಗೆ ‌ಬೆಡ್​ಗಳ ಅವಶ್ಯಕತೆ ಇದೆ. ಸರ್ಕಾರಕ್ಕೆ ಈಗಾಗಲೇ ಡಿಸಿ ಪತ್ರ ಬರೆದು ಬೆಡ್ ಕೊರೆತೆ ಗಮನ ಸೆಳೆದಿದ್ದಾರೆ. ಈಗಲಾದ್ರೂ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಡಿಸಿಗೆ ಹೇಳಿದ್ದೇನೆ ಎಂದರು.

    ಬೆಡ್ ಸಮಸ್ಯೆ ‌‌ನೀಗಿಸುವುದಕ್ಕೆ ವೈಯಕ್ತಿಕವಾಗಿ‌ ಸಹಾಯ ಮಾಡಲು ನಾನು ಸಿದ್ಧನಿದ್ದೇನೆಂದು ಮಾಜಿ ಸಚಿವ ಪುಟ್ಟರಂಗಶೆಟ್ಟಿ ಇದೇ ಸಮಯದಲ್ಲಿ ಭರವಸೆ ನೀಡಿದರು. (ದಿಗ್ವಿಜಯ ನ್ಯೂಸ್​)

    ಐದು ತಿಂಗಳ ಮಗು ಉಳಿಸಲು 16 ಕೋಟಿ ರೂ. ದೇಣಿಗೆ ಸಂಗ್ರಹಿಸಿದ ದಂಪತಿ!

    ಮತ್ತೆ ಮಾರಟೋರಿಯಂ ಅವಕಾಶ ಪ್ರಕಟಿಸಿದ ಆರ್​ಬಿಐ

    ವಿಜಯವಾಣಿ ಸಂಪಾದಕೀಯ: ಆರ್ಥಿಕ ಚೇತರಿಕೆಗೆ ಆರ್​ಬಿಐನ ಪೂರಕ ಕ್ರಮಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts