More

    ಹುಟ್ಟುಹಬ್ಬದ ತಂಗಳು ಬಿರಿಯಾನಿ ತಿಂದು 25 ಮಂದಿ ಅಸ್ವಸ್ಥ: ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲು

    ಚಾಮರಾಜನಗರ: ಹುಟ್ಟುಹಬ್ಬದ ಆಚರಣೆ ಬಳಿಕ ಉಳಿದಿದ್ದ ತಂಗಳು ಬಿರಿಯಾನಿ ತಿಂದು 25 ಮಂದಿ ಅಸ್ವಸ್ಥಗೊಂಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ನಡೆದಿದೆ.

    ಜುಲೈ 18 ರಂದು ಅರೇಪಾಳ್ಯ ಗ್ರಾಮದಲ್ಲಿ ಸಂತೋಷ್​ ಎಂಬುವವರು ತಮ್ಮ ಮಗನ ಹುಟ್ಟುಹಬ್ಬಕ್ಕೆ ಚಿಕನ್ ಬಿರಿಯಾನಿ ಮಾಡಿಸಿ, ಸ್ನೇಹಿತರು ಹಾಗೂ ಹಿತೈಷಿಗಳಿಗೆ ಆತಿಥ್ಯ ನೀಡಿದ್ದರು. ಮರುದಿನ ಬೆಳಗ್ಗೆ ಸಂತೋಷ್ ಅವರ ಜಮೀನಿಗೆ ಕಬ್ಬು ಕಟಾವಿಗೆ ಬಂದ ಕೂಲಿ ಕಾರ್ಮಿಕರಿಗೆ ಉಳಿದಿದ್ದ ತಂಗಳು ಬಿರಿಯಾನಿ ನೀಡಲಾಗಿತ್ತು. ಅದನ್ನು ತಿಂದವರೆಲ್ಲರಿಗೂ ಸಂಜೆಯಾಗುತ್ತಿದಂತೆ ವಾಂತಿ-ಭೇದಿ ಶುರುವಾಗಿದೆ.

    ಸದ್ಯ ಎಲ್ಲರೂ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ವಿಚಾರಣೆಯನ್ನು ನಡೆಸಿದ್ದಾರೆ. ಈ ವಿಚಾರ ತಿಳಿದು ಆಸ್ಪತ್ರೆಗೆ ಧಾವಿಸಿದ ಶಾಸಕ ಎನ್.ಮಹೇಶ್ ಎಲ್ಲರ ಆರೋಗ್ಯವನ್ನು ವಿಚಾರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪರೀಕ್ಷೆ ಬರೆಯಲು ಒಳಉಡುಪು ಬಿಚ್ಚಿಸಿದ ಪ್ರಕರಣ: ಇಡೀ ಘಟನೆಯನ್ನು ಮಾಧ್ಯಮ ಮುಂದೆ ಬಿಚ್ಚಿಟ್ಟ ವಿದ್ಯಾರ್ಥಿನಿ

    ಜಿಎಸ್​ಟಿಗೆ ಉದ್ಯಮಿಗಳ ಫುಲ್ ಮಾರ್ಕ್ಸ್: ತೆರಿಗೆ ಪದ್ಧತಿಗೆ ಶೇ.45 ಜನರ ಬೆಂಬಲ, ಈ ವ್ಯವಸ್ಥೆ ಹಿಂದಿಗಿಂತಲೂ ಸುಲಭ

    ಜನ ಕುರಿಗಳಾದಾಗ ಜನನಾಯಕರು ನರಿಗಳಾಗುತ್ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts