More

    ಲ್ಯಾಂಡಿಂಗ್​ ವೇಳೆ ಪತನಗೊಂಡು ಇಬ್ಭಾಗವಾದ ಕಾರ್ಗೋ ವಿಮಾನ: ಭಯಾನಕ ವಿಡಿಯೋ ವೈರಲ್​!

    ಸ್ಯಾನ್​ಜೋಸ್​: ಕಾರ್ಗೋ ವಿಮಾನವೊಂದು ಲ್ಯಾಂಡಿಂಗ್​ ವೇಳೆ ಪತನಗೊಂಡು ಎರಡು ಭಾಗವಾಗಿರುವ ಘಟನೆ ಕೋಸ್ಟಾರಿಕಾದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಬೋಯಿಂಗ್​ 757 ಕಾರ್ಗೋ ವಿಮಾನವು ಕೋಸ್ಟಾರಿಕ ಸಮಯದ ಪ್ರಕಾರ ಗುರುವಾರ (ಏ.7) ಬೆಳಗ್ಗೆ 10 ಗಂಟೆಗೆ ಸ್ಯಾನ್​ಜೋಸ್​ನ ಸಾಂಟಾ ಮಾರಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್​ ಆಯಿತು. ಇದಾದ 25 ನಿಮಿಷದ ಬಳಿಕ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಸಮಸ್ಯೆ ಗುರುತಿಸಿದ ಪೈಲಟ್​ ತಕ್ಷಣ ಮಾಹಿತಿ ನೀಡಿ ತುರ್ತು ಲ್ಯಾಂಡಿಂಗ್​ಗೆ ಅನುಮತಿ ಕೋರಿದರು. ಅನುಮತಿ ಸಿಕ್ಕ ಕೂಡಲೇ ವಾಪಸ್​ ಸಾಂಟಾ ಮಾರಿಯಾ ವಿಮಾನ ನಿಲ್ದಾಣಕ್ಕೆ ವಾಪಾಸಾದರು.

    ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ಆಗುವಾಗ ರನ್​ವೇಯಲ್ಲಿ ವೇಗವಾಗಿ ಬಂದ ವಿಮಾನ ದಿಢೀರ್​ ತಿರುವು ಪಡೆದು ಎರಡು ಭಾಗಗಳಾಗಿ ಪತನವಾಯಿತು. ತಕ್ಷಣ ಬೆಂಕಿಯು ಹೊತ್ತಿಕೊಂಡಿತು. ಆದರೆ, ಏರ್ಪೋರ್ಟ್​ ಸಿಬ್ಬಂದಿ ಮೊದಲೇ ಎಚ್ಚರಗೊಂಡಿದ್ದರು. ಸ್ಥಳದಲ್ಲೇ ಇದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಅವಘಡ ತಪ್ಪಿಸಿದ್ದಾರೆ.

    ಸರಕು ಸಾಗಣೆ ವಿಮಾನವು ಜರ್ಮನ್ ಲಾಜಿಸ್ಟಿಕ್ಸ್ ದೈತ್ಯ DHL ಒಡೆತನದಲ್ಲಿದೆ. ಪತನದ ವೇಳೆ ಇಬ್ಬರು ಸಿಬ್ಬಂದಿ ವಿಮಾನದಲ್ಲಿ ಇದ್ದರು. ಅದೃಷ್ಟವಶಾತ್ ಪೈಲಟ್​ಗಳ ಸಮಯ ಪ್ರಜ್ಞೆಯಿಂದ​ ದುರಂತವೊಂದು ತಪ್ಪಿದೆ. ಸದ್ಯ ವಿಮಾನ ಪತನವಾಗುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

    ಎಸಿ ಸ್ಫೋಟಕ್ಕೆ ಗಂಡ-ಹೆಂಡತಿ, ಇಬ್ಬರು ಮಕ್ಕಳ ಸಾವು: ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಕಣ್ಣೀರು

    ಏಲಿಯನ್​ನಿಂದ ಗರ್ಭಿಣಿಯಾದ ಮಹಿಳೆ! ಯುಎಸ್​ ರಕ್ಷಣಾ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

    ಇದೆಂಥಾ ವಿಧಿಯಾಟ? ಇನ್ನೇನು ಬಿಡುಗಡೆಯಾಗಬೇಕು ಅಷ್ಟರಲ್ಲೇ ಜೈಲಿನಲ್ಲಿ ಯುವಕ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts