More

    ಕೆಂಪು ಇರುವೆ ಚಟ್ನಿ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್​: ಅರ್ಜಿದಾರರಿಗೆ ಶಾಕ್​!​

    ನವದೆಹಲಿ: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕರೊನಾ ಸೋಂಕನ್ನು ಮಣಿಸಲು ನಡೆಯುತ್ತಿರುವ ಹೋರಾಟ ಅಷ್ಟಿಷ್ಟಲ್ಲ. ಶಾಶ್ವತ ಔಷಧಕ್ಕಾಗಿ ಇಡೀ ವಿಶ್ವವೇ ಹಾತೊರೆಯುತ್ತಿದೆ. ಇದರ ನಡುವೆ ಕೋವಿಡ್​ಗೆ ‘ಕೆಂಪು ಇರುವೆ’ ಮದ್ದು ಎಂಬ ಚರ್ಚೆ ಆರಂಭವಾಗಿತ್ತು. ಕೆಂಪು ಇರುವೆ ಚಟ್ನಿ ತಿಂದ್ರೆ ಕರೊನಾ ಗುಣವಾಗುತ್ತದೆ ಎಂಬ ಮಾತುಗಳು ಹಿಂದೊಮ್ಮೆ ಕೇಳಿಬಂದಿತ್ತು. ಇದರ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದೆ.

    ದೇಹದಲ್ಲಿನ ಪ್ರತಿರೋಧಕ ವ್ಯವಸ್ಥೆಯ ಉತ್ತೇಜನಕ್ಕಾಗಿ ಕೆಂಪು ಇರುವೆ ಚಟ್ನಿ ತಿನ್ನುವಂತೆ ನಿರ್ದೇಶನ ನೀಡಿ ಎಂದು ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಗುರುವಾರ ತೀರ್ಪು ನೀಡಿರುವ ಸುಪ್ರೀಂಕೊರ್ಟ್​ ಕರೊನಾ ವೈರಸ್​ಗೆ ಔಷಧವಾಗಿ ಯಾವುದೇ ಸಾಂಪ್ರದಾಯಿಕ ಔಷಧವಾಗಲಿ ಅಥವಾ ಮನೆ ಮದ್ದಾಗಲಿ ಬಳಸುವಂತೆ ಆದೇಶ ನೀಡಲಾಗದು ಎಂದು ಹೇಳುವ ಮೂಲಕ ಅರ್ಜಿಯನ್ನು ತಿರಸ್ಕರಿಸಿದೆ.

    ನ್ಯಾಯಮೂರ್ತಿ ವಿಕ್ರಮ್​ ನಾಥ್​ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​ ನೇತೃತ್ವದ ಸಾಂವಿಧಾನಿಕ ಪೀಠ ಈ ಮಹತ್ವದ ತೀರ್ಪು ನೀಡಿದೆ. ನಮ್ಮಲ್ಲಿ ಸಾಕಷ್ಟು ಸಾಂಪ್ರದಾಯಿಕ ಜ್ಞಾನ ಅಡಗಿದೆ . ಆದರೆ, ಕೆಂಪು ಇರುವೆ ಚಟ್ನಿಯು ಕರೊನಾ ಗುಣವಾಗಿಸುತ್ತದೆ ಎಲ್ಲರೂ ಬಳಸಿ ಎಂದು ತೀರ್ಪು ನೀಡಲಾಗಿದೆ. ಈ ಪರಿಹಾರಗಳನ್ನು ನಿಮ್ಮ ಸ್ವಂತ ಬಳಕೆಗಾಗಿ ನೀವು ಹೊಂದಬಹುದೇ ಹೊರತು, ಸಾಂಪ್ರದಾಯಿಕ ಜ್ಞಾನವನ್ನು ದೇಶಾದ್ಯಂತ ಅನ್ವಯಿಸಲು ನಾವು ಹೇಳಲು ಸಾಧ್ಯವಿಲ್ಲ ಎಂದು ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ.

    ಅರ್ಜಿದಾರರಾದ ನ್ಯಾಧರ್ ಪಾಧಿಯಾಲ್​ ಅರ್ಜಿಯನ್ನು ಒಡಿಶಾ ಹೈಕೋರ್ಟ್ ವಜಾಗೊಳಿಸಿತ್ತು. ಇದಾದ ಬಳಿಕ ಆದೇಶವನ್ನು ಪ್ರಶ್ನಿಸಿ ಅವರು ಉನ್ನತ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಒಡಿಶಾದ ಬುಡಕಟ್ಟು ಸಮುದಾಯದ ಸದಸ್ಯರಾದ ಅರ್ಜಿದಾರರಿಗೆ ಸುಪ್ರೀಂಕೊರ್ಟ್ ಸಲಹೆ ನೀಡಿದ್ದು, ಬುಡಕಟ್ಟು ಜನಾಂಗದವರಿಗೆ ಕೋವಿಡ್‌ಗೆ ಲಸಿಕೆ ಹಾಕುವಂತೆ ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.

    ಅಂದಹಾಗೆ ಕೆಂಪಿರುವೆಯಲ್ಲಿ ಕ್ಯಾಲ್ಸಿಯಂ, ವಿಟಮಿನ್​ ಬಿ-21, ಫಾರ್ಮಿಕ್​ ಆ್ಯಸಿಡ್​, ಸತ್ತು, ಕಬ್ಬಿಣಾಂಶವಿದ್ದು, ಒಟ್ಟಾರೆ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತೆ. ಹಾಗಾಗಿ ಈ ಕೆಂಪಿರುವೆ ಬುಡಕಟ್ಟು ಜನಾಂಗದ ಪ್ರಮುಖ ಆಹಾರ. ಉಸಿರಾಟ ಸಮಸ್ಯೆ ಮತ್ತು ಜ್ವರ ನಿವಾರಕ, ಕಫ ಕರಗಿಸುವಿಕೆ, ಶೀತ ಕಡಿಮೆ ಮಾಡುವ ಗುಣವುಳ್ಳ ಕೆಂಪಿರುವೆ ಬುಡಕಟ್ಟು ಜನರ ಪಾಲಿಗೆ ಔಷಧದ ಆಗರ. ಕಾಲಕ್ಕೆ ತಕ್ಕಂತೆ ರೋಗ ನಿರೋಧಕ ಶಕ್ತಿ ಉತ್ಪತ್ತಿ ಮಾಡುವ ಗುಣವುಳ್ಳ ಕೆಂಪಿರುವೆಯಿಂದ ಕೋವಿಡ್​ಗೆ ಮದ್ದು ಸಿಗಲಿದೆಯೇ? ಎಂಬ ಪ್ರಶ್ನೆ ಮೂಡಿದ್ದು, ಈ ಬಗ್ಗೆ ಸಂಶೋಧನೆ ನಡೆಸಲು ಆಯುಷ್ ಸಚಿವಾಲಯಕ್ಕೆ ಒಡಿಶಾ ಹೈಕೋರ್ಟ್ ಸೂಚನೆ ನೀಡಿತ್ತು.

    ಕೆಂಪಿರುವೆಯಲ್ಲಿ ರೋಗನಿರೋಧಕ ಶಕ್ತಿ ಇರುವ ಹಾಗೂ ಅದರಿಂದ ತಯಾರಿಸಿದ ಚಟ್ನಿ ಸೇವನೆಯಿಂದ ಕೋವಿಡ್​ ಸೋಂಕು ನಿಯಂತ್ರಣ ಸಾಧ್ಯತೆ ಮತ್ತು ಅಸಾಧ್ಯತೆ ಬಗ್ಗೆ ಸಂಶೋಧನೆ ನಡೆಸಬೇಕು ಎಂದು ಇಂಜಿನಿಯರೊಬ್ಬರು ಒಡಿಶಾ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಕೆಂಪಿರುವೆಯಲ್ಲಿ ಕೋವಿಡ್​ ವೈರಸ್​ ಕೊಲ್ಲುವ ಔಷಧ ಗುಣ ಇದೆಯೇ? ಎಂಬುದರ ಬಗ್ಗೆ ಸಂಶೋಧನೆ ಮಾಡಿ ಮೂರು ತಿಂಗಳೊಳಗೆ ವರದಿ ನೀಡುವಂತೆ ಆಯುಷ್ ಸಚಿವಾಲಯ ಹಾಗೂ ಕೌನ್ಸಿಲ್​ ಆಫ್​ ಮೆಡಿಕಲ್​ ಆ್ಯಂಡ್​ ರಿಸರ್ಚ್​ಗೆ ನಿರ್ದೇಶಿಸಿತ್ತು.

    ಜಾರ್ಖಾಂಡ್​, ಆಂಧ್ರ ಪ್ರದೇಶ, ಮಣಿಪುರ, ನಾಗಾಲ್ಯಾಂಡ್​, ತ್ರಿಪುರ, ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ಪಶ್ಚಿಮ ಬಂಗಾಳ ಸೇರಿದಂತೆ ಹಲವೆಡೆ ಬುಡಕಟ್ಟು ಜನಾಂಗ ಕೆಂಪಿರುವೆ ಚಟ್ನಿ ಸೇವಿಸುವುದು ಸಾಮಾನ್ಯ. ಕರ್ನಾಟಕದಲ್ಲಿ ಬುಡಕಟ್ಟು ಜನಾಂಗ ಮಾತ್ರವಲ್ಲದೆ ಮಲೆನಾಡು ಭಾಗದ ಕೆಲ ಜನರು ಕೆಂಪಿರುವೆ ಚಟ್ನಿ ಸೇವಿಸುತ್ತಾರೆ.

    ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಕೋವಿಡ್​ ಸೋಂಕಿನ ವಿರುದ್ಧ ಹೋರಾಡಬಹುದು ಎಂಬ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದೀಗ ಕೆಂಪಿರುವೆ ಚಟ್ನಿ ಸೇವನೆಯೂ ಹೆಚ್ಚು ಪರಿಣಾಮಕಾರಿ ಎಂಬ ಚರ್ಚೆಗಳು ಶುರುವಾಗಿದೆ. (ಏಜೆನ್ಸೀಸ್​)

    VIDEO| ಇಳಿವಯಸ್ಸಿನಲ್ಲಿ ಬುಲೆಟ್ಟು ಬಂಡಿ ಹಾಡಿಗೆ ಹೆಜ್ಜೆ ಹಾಕಿ ಗಂಡನನ್ನು ರಂಜಿಸಿದ ಅಜ್ಜಿ

    ವೈರಲ್​ ಆಯ್ತು ಸಮಂತಾರ ಹಾಟೆಸ್ಟ್​ ಫೋಟೋ: ಒಳಉಡುಪಿನಲ್ಲಿ ಸೌತ್​ ಬ್ಯೂಟಿಯ ಪೋಸ್​!

    ಅಫ್ಘಾನಿಸ್ತಾನದತ್ತ ಬ್ರಿಕ್ಸ್ ಚಿತ್ತ; ಉಗ್ರ ನಿಗ್ರಹ ಕ್ರಿಯಾ ಯೋಜನೆ ಜಾರಿಗೆ ಕರೆ ನೀಡಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts