More

    SSLC ಪರೀಕ್ಷೆಯಲ್ಲಿ ಛತ್ತೀಸ್​ಗಢದ IAS ಅಧಿಕಾರಿ ಪಡೆದಿರುವ ಒಟ್ಟು ಅಂಕ​ ನೋಡಿದ್ರೆ ಹುಬ್ಬೇರೋದು ಖಚಿತ!

    ನವದೆಹಲಿ: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನಕ್ಕಿಂತ ಅಂಕಗಳಿಗೆ ಹೆಚ್ಚಿನ ಮಹತ್ವ ಕೊಡುವುದರಿಂದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಏನು ಅರಿಯದ ವಿದ್ಯಾರ್ಥಿಗಳ ಮನಸ್ಸಲ್ಲಿ ಅಂಕಗಳ ತಾರತಮ್ಯ ಮಾನಸಿಕವಾಗಿ ಕುಗ್ಗಿಸಿ ಬಿಡುತ್ತದೆ. ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಪಾಲಕರು ಕೂಡ ಎಡವಿದ್ದಾರೆ. ಅಚ್ಚರಿಯೆಂದರೆ, ಇಂದು ಎಷ್ಟೇ ಅಂಕಗಳು ಬಂದರು ತೃಪ್ತಿಯ ಭಾವನೆಯೇ ಇಲ್ಲ. ಫಸ್ಟ್​ ಕ್ಲಾಸ್​ನಲ್ಲಿ ಪಾಸ್​ ಆಗಿದ್ದರೂ ತಾತ್ಸಾರದ ಭಾವನೆ. ಇದೆಲ್ಲ ಕಾರಣದಿಂದ ಇಂದು ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎಂಬ ಭಯ ಕಾಡುತ್ತಿದೆ.

    ಕೆಲವರ ಜೀವನದ ಹಾದಿ ನೋಡಿದರೆ ಅಂಕಗಳಿಗಿಂತ ನಮ್ಮ ಕಲಿಕೆಯೇ ಮುಖ್ಯವಾದದ್ದು ಎಂಬುದು ಸಾಬೀತಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬಲು ಐಎಎಸ್​ ಅಧಿಕಾರಿಯೊಬ್ಬರು ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಶೇರ್​ ಮಾಡಿಕೊಂಡಿದ್ದಾರೆ.

    ಇದುವರೆಗೂ ಬೇರೆ ಬೇರೆ ಅಧಿಕಾರಿಗಳ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ಶೇರ್​ ಮಾಡುವ ಸಾಮಾಜಿಕ ಜಾಲತಾಣದಲ್ಲಿ ಹುರಿದುಂಬಿಸುವ ಮಾತುಗಳನ್ನಾಡುತ್ತಿದ್ದ ಛತ್ತೀಸ್​ಗಢ ಕೇಡರ್​ನ 2009ರ ಬ್ಯಾಚಿನ ಐಎಎಸ್​ ಅಧಿಕಾರಿ ಅವನೀಶ್​ ಶರಣ್​ ಅವರು ಇದೀಗ ತಮ್ಮದೇ SSLC ಅಂಕಪಟ್ಟಿಯನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ಬಾರಿ ಅವನೀಶ್​ ಅವರ ಅಂಕಪಟ್ಟಿ ನೋಡಿ ನೆಟ್ಟಿಗರು ಲೈಕ್ಸ್​ಗಳ ಸುರಿಮಳೆಗೈದಿದ್ದಾರೆ.

    ಅಂಕಪಟ್ಟಿಯಲ್ಲಿರುವಂತೆ ಅವನೀಶ್​ ಶರಣ್​ ಅವರು ಬಿಹಾರದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 700 ಅಂಕಗಳಿಗೆ ಕೇವಲ 314 ಅಂಕ ಪಡೆದುಕೊಂಡಿದ್ದಾರೆ. ಅವರ ಶೇಕಡವಾರು ಫಲಿತಾಂಶ 44.85 ಆಗಿದೆ. ಅವನೀಶ್​ ಅವರು ಗಣಿತದಲ್ಲಿ ಕೇವಲ 31 ಅಂಕ ಪಡೆದುಕೊಂಡಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ, ಎಸ್ಸೆಸ್ಸೆಲ್ಸಿಯಲ್ಲಿ ಅವರು ಜಸ್ಟ್​ ಪಾಸ್​ ಆಗಿದ್ದಾರೆ.

    ಅವನೀಶ್​ ಅವರು ಶೇರ್​ ಮಾಡಿಕೊಂಡಿರುವ ಅಂಕಪಟ್ಟಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈವರೆಗೂ 32 ಸಾವಿರ ಲೈಕ್ಸ್​ಗಳನ್ನು ಪಡೆದುಕೊಂಡಿದ್ದು, ಸಾವಿರಕ್ಕೂ ಹೆಚ್ಚು ಶೇರ್​ ಆಗಿದೆ.

    ಎಸ್ಸೆಸ್ಸೆಲ್ಸಿಯಲ್ಲಿ ಜಸ್ಟ್​ ಪಾಸಾದರು ಜೀವನ ಪರೀಕ್ಷೆಯಲ್ಲಿ ಫಸ್ಟ್​ ಕ್ಲಾಸ್​ನಲ್ಲಿ ಪಾಸಾದ ಅವನೀಶ್​ ಅವರನ್ನು ನೋಡಿ ಅನೇಕರು ಸ್ಪೂರ್ತಿ ಪಡೆದುಕೊಂಡಿದ್ದಾರೆ. ಕಡಿಮೆ ಅಂಕಗಳನ್ನು ಹೊಂದಿದ್ದರೂ ಸಹ ಅವರು ಯೂನಿಯನ್ ಪಬ್ಲಿಕ್ ಸರ್ವಿಸ್ ಪರೀಕ್ಷೆಯನ್ನು (UPSC) ಹೇಗೆ ಆಯ್ಕೆ ಮಾಡಿದರು ಅನೇಕರು ಅವನೀಶ್​ ಅವರನ್ನು ಪ್ರಶ್ನಿಸುತ್ತಿದ್ದಾರೆ.

    ಯುವಕರನ್ನು ನೀವು ಎಷ್ಟು ಪ್ರೇರೇಪಿಸುತ್ತೀರಿ ಎಂಬುದು ನಿಮಗೆ ತಿಳಿದಿಲ್ಲ ಸರ್, ನಿಮ್ಮಂತಹ ಜನರ ಬಗ್ಗೆ ನಾನು ಓದುತ್ತೇನೆ. ಅದರಿಂದ ನನಗೆ ಜೀವನದಲ್ಲಿ ಹೋರಾಡಲು ಶಕ್ತಿ ಸಿಗುತ್ತದೆ ಎಂದು ಬಳಕೆದಾರರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಹೀಗೆ ಸಾಕಷ್ಟು ಮಂದಿ ಅವನೀಶ್​ ಅವರ ಅಂಕಪಟ್ಟಿ ನೋಡಿ ತಮ್ಮದೇ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಅವನೀಶ್​ ಶರಣ್​ ಯಾರು?
    ಅವನೀಶ್ ಶರಣ್ ಅವರು ಅತ್ಯಂತ ಕಡಿಮೆ ಆದಾಯದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ಬಾಲ್ಯದ ವರ್ಷಗಳಲ್ಲಿ ಲಾಟಿನ್​ ಬೆಳಕಿನಲ್ಲಿ ಅಧ್ಯಯನ ಮಾಡಿದರು. ಅವರು 10 ಮತ್ತು 12 ನೇ ತರಗತಿಯವರೆಗೆ ಸರಾಸರಿ ವಿದ್ಯಾರ್ಥಿಯಾಗಿದ್ದರು. ಆದರೆ, ಆ ಬಗ್ಗೆ ಅವರು ಎಂದಿಗೂ ನಾಚಿಕೆಪಡಲಿಲ್ಲ. ಇದೀಗ ಅವನೀಶ್ ಶರಣ್ ಅವರು ಛತ್ತೀಸ್‌ಗಢ ಕೇಡರ್​ನ 2009ರ ಬ್ಯಾಚ್‌ಗೆ ಸೇರಿದ ಐಎಎಸ್ ಅಧಿಕಾರಿ. ಈಗ ಅನೇಕ ಯುವಕರಿಗೆ ಅವರು ಸ್ಫೂರ್ತಿಯಾಗಿದ್ದಾರೆ. ಅವರ ಟ್ವಿಟ್ಟರ್ ಖಾತೆಯು 4.2 ಮಿಲಿಯನ್‌ಗಿಂತಲೂ ಹೆಚ್ಚು ಹಿಂಬಾಲಕರನ್ನು ಹೊಂದಿದೆ. (ಏಜೆನ್ಸೀಸ್​)

    ಎಸ್ಸೆಸ್ಸೆಲ್ಸಿಯಲ್ಲಿ ಗಣಿತದಲ್ಲಿ 36, ವಿಜ್ಞಾನದಲ್ಲಿ 38, ಇಂಗ್ಲಿಷ್​ನಲ್ಲಿ 35 ಅಂಕಗಳಿಸಿದ ಇವರು ಇಂದು ಜಿಲ್ಲಾಧಿಕಾರಿ!

    ಮೂವತ್ತು ತಿಂಗಳಲ್ಲಿ 38 ಕೊಲೆ! ಖಾಕಿ ಕಂಡರೆ ಪುಂಡರಿಗಿಲ್ಲ ಭಯ, ಸಿಎಂ ತವರಲ್ಲಿ ಚಾಕು-ಚೂರಿ ಅಟ್ಟಹಾಸ

    ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ: ಭಾರೀ ಶಬ್ದ ಕೇಳಿ ಮನೆಯಿಂದ ಹೊರಗಡೆ ಓಡಿ ಬಂದ ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts