ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ: ಭಾರೀ ಶಬ್ದ ಕೇಳಿ ಮನೆಯಿಂದ ಹೊರಗಡೆ ಓಡಿ ಬಂದ ಜನ

ಕೊಡಗು: ದಕ್ಷಿಣ ಭಾರತದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯಲ್ಲಿ ಪದೇಪದೆ ಭೂಮಿ ಕಂಪಿಸುತ್ತಿರುವುದು ಅಲ್ಲಿನ ಜನರನ್ನು ಆತಂಕಕ್ಕೆ ದೂಡಿದೆ. ಮೊದಲೇ ಭೂಕುಸಿತಗಳು ಕೊಡಗಿನಲ್ಲಿ ಸಾಮಾನ್ಯವಾಗಿರುವಾಗ ಆಗಾಗ ಭೂಕಂಪನ ಆಗುತ್ತಿರುವುದು ಜನರ ಭಯಕ್ಕೆ ಕಾರಣವಾಗಿದೆ. ಕೊಡಗಿನ ಗಡಿಭಾಗದಲ್ಲಿ ಭೂಮಿ ಮತ್ತೆ ಕಂಪಿಸಿದೆ. ಭಾರಿ ಶಬ್ದದೊಂದಿಗೆ ಭೂಮಿ ನಡುಗಿದೆ. ಮಡಿಕೇರಿ ತಾಲ್ಲೂಕಿನ ಚೆಂಬು, ಸಂಪಾಜೆ ಹಾಗೂ ಪೆರಾಜೆಯಲ್ಲಿ ಮುಂಜಾನೆ 6.23ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಭಾರೀ ಶಬ್ದವನ್ನು ಕೇಳಿ ಜನರು ಭಯಭೀತಿಯಿಂದ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. … Continue reading ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ: ಭಾರೀ ಶಬ್ದ ಕೇಳಿ ಮನೆಯಿಂದ ಹೊರಗಡೆ ಓಡಿ ಬಂದ ಜನ