More

    ಮುಂದಿನ ವರ್ಷದಿಂದ ಇ- ಪಾಸ್​ಪೋರ್ಟ್​ ವಿತರಣೆ ಆರಂಭ: ಹೇಗಿರಲಿದೆ ಗೊತ್ತಾ ಈ ಪಾಸ್​ಪೋರ್ಟ್​?

    ನವದೆಹಲಿ: ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮುಂದಿನ ವರ್ಷದಿಂದ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಘೋಷಿಸಿದರು.

    ವಿತ್ತ ಸಚಿವೆಯಾಗಿ ನಾಲ್ಕನೇ ಬಜೆಟ್​ ಮಂಡಿಸಿದ ನಿರ್ಮಲಾ ಸೀತಾರಾಮನ್​, ಭವಿಷ್ಯದ ತಂತ್ರಜ್ಞಾನ ಮತ್ತು ಚಿಪ್​ ಅಳವಡಿತ ಇ-ಪಾಸ್​ಪೋರ್ಟ್​ ಹೊರತರಲಾಗುವುದು. ಹೆಚ್ಚು ರಕ್ಷಣಾ ವೈಶಿಷ್ಟ್ಯಗಳನ್ನು ಪಾಸ್​ಪೋರ್ಟ್​ ಹೊಂದಿರಲಿದೆ ಎಂದು ಹೇಳಿದರು.

    ಇ-ಪಾಸ್​ಪೋರ್ಟ್​ನಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್​ ಮತ್ತು ಬಯೋಮೆಟ್ರಿಕ್ ಬಳಸಲಾಗುವುದು ಹಾಗೂ ಪಾಸ್‌ಪೋರ್ಟ್‌ಗಳು ಅಂತರರಾಷ್ಟ್ರೀಯ ನಿಯಮಗಳಿಗೆ ಅನುಗುಣವಾಗಿರುತ್ತವೆ. ಪಾಸ್‌ಪೋರ್ಟ್ ಜಾಕೆಟ್‌ನಲ್ಲಿ ಎಲೆಕ್ಟ್ರಾನಿಕ್ ಚಿಪ್ ಇರಲಿದ್ದು, ಅದರ ಮೇಲೆ ಎನ್‌ಕೋಡ್ ಮಾಡಲಾದ ಭದ್ರತೆಗೆ ಸಂಬಂಧಿಸಿದ ಡೇಟಾ ಇರುತ್ತದೆ ಎಂದು ತಿಳಿಸಿದರು. ಪಾಸ್‌ಪೋರ್ಟ್‌ಗಳನ್ನು ಪ್ರಸ್ತುತ ಬುಕ್‌ಲೆಟ್‌ಗಳಲ್ಲಿ ನೀಡಲಾಗುತ್ತದೆ ಎಂದು ಹೇಳಿದರು. (ಏಜೆನ್ಸೀಸ್​)

    ನೇರ ತೆರಿಗೆಯಲ್ಲಿ ಬದಲಾವಣೆ ಇಲ್ಲ: ಆದಾಯ ತೆರಿಗೆ ತಪ್ಪು ಸರಿಪಡಿಸಲು 2 ವರ್ಷ ಕಾಲಾವಕಾಶ

    5ಜಿ ನಿರೀಕ್ಷೆಯಲ್ಲಿರುವವರಿಗೆ ಗುಡ್‌ನ್ಯೂಸ್: ವರ್ಷದೊಳಗೆ ಸಿಗಲಿದೆ ಸೇವೆ- ಬಜೆಟ್‌ನಲ್ಲಿ ಘೋಷಣೆ

    ಕರೊನಾದಿಂದ ಉಂಟಾದ ಮಾನಸಿಕ ಖಿನ್ನತೆ ಹೋಗಲಾಡಿಸಲು ನ್ಯಾಷನಲ್ ಟೆಲಿಮೆಂಟಲ್ ಹೆಲ್ತ್ ಕೇರ್ ಸೆಂಟರ್‌ಗಳ ಸ್ಥಾಪನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts