More

    ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಕಳಚಿಬಿತ್ತು ವಿಮಾನದ ಲ್ಯಾಂಡಿಂಗ್​ ಗೇರ್​ ಟೈರ್! ಮುಂದೇನಾಯ್ತು ನೀವೇ ನೋಡಿ…​

    ನ್ಯೂಯಾರ್ಕ್​: ಇಟಲಿಯ ಟರಂಟೋ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಅಟ್ಲಾಸ್​ ವಾಯು ವಿಮಾನ ಸಂಸ್ಥೆಯ ಬೋಯಿಂಗ್​ 747 ಡ್ರೀಮ್​ಲಿಫ್ಟರ್​ ವಿಮಾನದ ಲ್ಯಾಂಡಿಂಗ್​ ಗೇರ್​ ಟೈರ್​ ಕಳಚಿಬಿದ್ದ ಘಟನೆ ನಡೆದಿದೆ.

    ಬೋಯಿಂಗ್ 787 ಡ್ರೀಮ್‌ಲೈನರ್ ಘಟಕಗಳನ್ನು ಸಾಗಿಸಲು ಮುಖ್ಯವಾಗಿ ಬಳಸಲಾಗುವ ಬೋಯಿಂಗ್​ 747 ದೈತ್ಯ ವಿಮಾನವು ಇಟಲಿಯ ಟರಂಟೋದಿಂದ ಯುನೈಟೆಡ್ ಸ್ಟೇಟ್ಸ್‌ನ ಚಾರ್ಲ್ಸ್‌ಟನ್‌ ಹೊರಡುವಾಗ ಈ ಘಟನೆ ಸಂಭವಿಸಿದೆ.

    ಟೈರ್​ ಕಳಚಿಬಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೊರಡಲು ಸಿದ್ಧವಾಗುವ ವಿಮಾನ ರನ್​ವೇನಲ್ಲಿ ವೇಗವಾಗಿ ಬಂದು ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಲ್ಯಾಂಡಿಂಗ್​ ಗೇರ್​ ಟೈರ್​ ಕಳಚಿ, ನೆಲಕ್ಕೆ ಬಿದ್ದು ಉರುಳಿಕೊಂಡು ಹೋಗುವ ದೃಶ್ಯ ವಿಡಿಯೋದಲ್ಲಿ ಇದೆ. ಟೈರ್​ ಕಳಚಿ ಬೀಳುವಾಗ ಕಪ್ಪು ಹೊಗೆ ಕೂಡ ವಿಮಾನದಿಂದ ಬರುತ್ತದೆ.

    ಟೈರ್​ ಕಳಚಿಬಿದ್ದರೂ ಅಮೆರಿಕದಲ್ಲಿ ಚಾರ್ಲ್ಸ್‌ಟನ್​ನಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್​ ಆಗಿದೆ. ಟೈರ್​​ ಟರಂಟೋ ವಿಮಾನ ನಿಲ್ದಾಣದ ರನ್​ವೇ ಕೊನೆಯಲ್ಲಿ ಪತ್ತೆಯಾಗಿದೆ. ಕಳಚಿಬಿದ್ದಿದ್ದು ವಿಮಾನದ ಹಿಂಬದಿಯ ಲ್ಯಾಂಡಿಂಗ್​ ಗೇರ್​ ಟೈರ್. ಒಂದು ವೇಳೆ ವಿಮಾನದ ಮುಂಭಾಗದ ಟೈರ್​ ಕಳಚಿಬಿದ್ದಿದ್ದರೆ, ಅಪಾಯ ಸಂಭವಿಸುವ ಸಾಧ್ಯತೆ ಇತ್ತು.

    ಅಂದಹಾಗೆ ಬೋಯಿಂಗ್ 747 ಡ್ರೀಮ್‌ಲಿಫ್ಟರ್ ವಿಮಾನ, ಮೂಲಭೂತವಾಗಿ ಸಾರಿಗೆ ವಿಮಾನವಾಗಿದೆ ಮತ್ತು ಅನೇಕ ವಿಮಾನಯಾನ ಸಂಸ್ಥೆಗಳು ಬಳಸಿದ ಬೋಯಿಂಗ್ 747-400 ವಿಮಾನದ ಮಾರ್ಪಡಿಸಿದ ಆವೃತ್ತಿಯಾಗಿದೆ. ಇದು ಡ್ರೀಮ್‌ಲಿಫ್ಟರ್ ಅಸೆಂಬ್ಲಿಗಳು ಮತ್ತು ಬೋಯಿಂಗ್ 787 ಡ್ರೀಮ್‌ಲೈನರ್‌ನ ಘಟಕಗಳನ್ನು ಸಾಗಿಸುತ್ತದೆ. ಬೋಯಿಂಗ್ ಪ್ರಕಾರ, ಅಗತ್ಯ ಸಿಬ್ಬಂದಿಯನ್ನು ಮೀರಿ ಪ್ರಯಾಣಿಕರನ್ನು ಸಾಗಿಸಲು ಡ್ರೀಮ್‌ಲಿಫ್ಟರ್ ಪ್ರಮಾಣೀಕರಿಸಲ್ಪಟ್ಟಿಲ್ಲ. ಇದು ತನ್ನ ಮೊದಲ ಹಾರಾಟವನ್ನು ಸೆಪ್ಟೆಂಬರ್ 2006 ರಲ್ಲಿ ನಡೆಸಿತು. (ಏಜೆನ್ಸೀಸ್​)

    ಮಾಲ್ಡೀವ್ಸ್​ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ರಶ್ಮಿಕಾ: ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ಭಾರಿ ನಿರಾಸೆ!

    ಕೇರಳ ನರಬಲಿ ಪ್ರಕರಣ: ವಯಸ್ಕರ ಸಿನಿಮಾದಲ್ಲಿ ನಟಿಸುವ ಆಸೆ, ತನಿಖೆಯಲ್ಲಿ ಬಯಲಾಯ್ತು ಭಯಾನಕ ಸಂಗತಿ

    ಬಡವರ ಅನ್ನಕ್ಕೆ ಕಳ್ಳರ ಕನ್ನ: ನೆರೆರಾಜ್ಯಗಳಿಗೆ ಪಡಿತರ ಅಕ್ರಮ ಸಾಗಾಟ; ಪಾಲಿಷ್ ಮಾಡಿ ಮಾರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts