More

    30 ಸಾವಿರ ರಾಷ್ಟ್ರಧ್ವಜ ವಿತರಿಸಿ “ಹರ್‌ ಘರ್‌ ತಿರಂಗಾ” ಅಭಿಯಾನಕ್ಕೆ ಬಯೋಕಾನ್ ಫೌಂಡೇಷನ್‌ ಬೆಂಬಲ

    ಬೆಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರವ್ಯಾಪಿ “ಹರ್‌ ಘರ್‌ ತಿರಂಗಾ” ಅಭಿಯಾನದಲ್ಲಿ ಬಯೋಕಾನ್‌ ಫೌಂಡೇಷನ್‌ ಬೆಂಬಲಿಸಿದೆ. ತನ್ನ CSR ಅಂಗವಾದ ಬಯೋಕಾನ್ ಫೌಂಡೇಶನ್ ಮೂಲಕ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮತ್ತು ಅದರ ಸುತ್ತಮುತ್ತಲಿನ ಕಚೇರಿಗಳ ಸುತ್ತಮುತ್ತ ವಾಸಿಸುವ ಸಮುದಾಯಗಳಿಗೆ ೩೦,೦೦೦ ಕ್ಕೂ ಹೆಚ್ಚು ರಾಷ್ಟ್ರ ಧ್ವಜಗಳನ್ನು ಆಗಸ್ಟ್‌ ೧೪ ರಂದು ವಿತರಿಸಲಾಯಿತು. ಈ ಮೂಲಕ ಭಾರತದ 75 ನೇ ವರ್ಷವನ್ನು ಬಯೋಕಾನ್‌ ಸಂಸ್ಥೆ ಆಚರಿಸುತ್ತಿದೆ.

    ಬಯೋಕಾನ್ ಫೌಂಡೇಶನ್ ಆಗಸ್ಟ್‌ ೧೩ ರಂದು ಆನೇಕಲ್ ತಾಲ್ಲೂಕಿನ ಮೂರು ಪಂಚಾಯಿತಿಗಳು, 60 ಶಾಲೆಗಳ ವಿದ್ಯಾರ್ಥಿಗಳು, 15 ಗ್ರಾಮಗಳ ನಿವಾಸಿಗಳು, ಬಯೋಕಾನ್ ಗ್ರೂಪ್ ಕಂಪನಿಗಳ ಕ್ಯಾಂಪಸ್‌ಗಳ ನೆರೆಹೊರೆಯಲ್ಲಿರುವ ಎಲೆಕ್ಟ್ರಾನಿಕ್ ಸಿಟಿ, ಹುಸ್ಕೂರು ಮತ್ತು ಜಿಗಣಿ ಕೈಗಾರಿಕಾ ಪ್ರದೇಶಗಳಲ್ಲಿ ಪಂಚಾಯತ್ ಮತ್ತು ಗ್ರಾಮಗಳ ಮೂಲಕ ಧ್ವಜಗಳನ್ನು ವಿತರಿಸಲಾಯಿತು. ಜೊತೆಯಲ್ಲಿ ಸಮುದಾಯದ ಸದಸ್ಯರಿಗೆ ‘ಫ್ಲ್ಯಾಗ್ ಕೋಡ್ ಆಫ್ ಇಂಡಿಯಾ’ ಅನ್ನು ಸಹ ಒದಗಿಸಿದೆ ಮತ್ತು ಅವುಗಳನ್ನು ಪಾಲಿಸುವಂತೆ ಸೂಚಿಸಿದೆ. ಕಾರ್ಯಕ್ರಮದಲ್ಲಿ ಹೆಬ್ಬಗೋಡಿನ ಸಿಎಂಸಿ ಆಯುಕ್ತೆ ಶ್ವೇತಾಬಾಯಿ, ಪಂಚಾಯಿತಿ ಮುಖ್ಯಸ್ಥೆ ಮುನಿರತ್ನ ಮುನಿರಾಜು, ಹೆನ್ನಾಗರ ಪಂಚಾಯಿತಿ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಗ್ರಾ.ಪಂ.ಪ್ರತಿನಿಧಿಗಳು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

    30 ಸಾವಿರ ರಾಷ್ಟ್ರಧ್ವಜ ವಿತರಿಸಿ “ಹರ್‌ ಘರ್‌ ತಿರಂಗಾ” ಅಭಿಯಾನಕ್ಕೆ ಬಯೋಕಾನ್ ಫೌಂಡೇಷನ್‌ ಬೆಂಬಲ

    ಈ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯರಿಗೂ ಶುಭ ಹಾರೈಸುತ್ತಾ, ಬಯೋಕಾನ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಕಿರಣ್ ಮಜುಂದಾರ್-ಶಾ, “ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವು ಜಾಗತಿಕ ನಾಯಕತ್ವಕ್ಕಾಗಿ ಹಾತೊರೆಯುತ್ತಿರುವ ರಾಷ್ಟ್ರಕ್ಕೆ ಹೆಮ್ಮೆಯ ಮೈಲಿಗಲ್ಲು. ‘ಹರ್ ಘರ್ ತಿರಂಗ’ ಅಭಿಯಾನದ ಮೂಲಕ ನಾವು ಸಮುದಾಯಗಳನ್ನು ಒಟ್ಟುಗೂಡಿಸಲು ಸೂಕ್ತವಾಗಿದೆ ಎಂದು ತಿಳಿಸಿದರು.

    ಬಯೋಕಾನ್ ಫೌಂಡೇಶನ್‌ನ ಮಿಷನ್ ನಿರ್ದೇಶಕಿ ಡಾ.ಅನುಪಮಾ ನಾರಾಯಣ ಶೆಟ್ಟಿ ಮಾತನಾಡಿ, ‘ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹರ್ ಘರ್ ತಿರಂಗ ಅಭಿಯಾನದ ಭಾಗವಾಗಿರಲು ಬಯೋಕಾನ್ ಪ್ರತಿಷ್ಠಾನವು ಹೆಮ್ಮೆಪಡುತ್ತದೆ. ಹೆಬ್ಬಗೋಡಿಯ ಹುಸ್ಕೂರಿನ ಪ್ರತಿ ಮನೆಮನೆಗಳಿಗೆ ರಾಷ್ಟ್ರಧ್ವಜವನ್ನು ವಿತರಿಸಿದೆ. ಉತ್ತಮ ಆರೋಗ್ಯ ಮತ್ತು ಶಿಕ್ಷಣ, ಪರಿಸರ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

    ಭಾರತ-2047: ಭರವಸೆಯ ದಿಕ್ಕು, ಹೊಸ ಹೊಳಹು..

    ಸಾಧನೆಯ ಅಮೃತ ಹಾದಿ: 75 ವರ್ಷಗಳ ಪ್ರಗತಿ ಸಾಕಷ್ಟು, ಸಾಧಿಸಬೇಕಾಗಿದೆ ಇನ್ನಷ್ಟು..

    PHOTOS: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ನಟಿ ತಾರಾ ವಿಶೇಷ ಫೋಟೋ ಶೂಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts