More

    ಲ್ಯಾಪ್​​​​​ಟಾಪ್​ ರಿಪೇರಿ ಮಾಡುವವನನ್ನು ಮನೆಗೆ ಕರೆಸಿಕೊಂಡ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​!

    ಬೆಂಗಳೂರು: ಯಾರೇ ಆಗಲಿ ಮೊಬೈಲ್​, ಲ್ಯಾಪ್​ಟಾಪ್​ಗಳನ್ನು ರಿಪೇರಿಗೆ ಕೊಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ವೈಯಕ್ತಿಕ ಮಾಹಿತಿಗಳು, ಫೋಟೋ ಅಥವಾ ವಿಡಿಯೋಗಳಿದ್ದರೆ ಅವುಗಳ ಬಗ್ಗೆ ಗಮನಹರಿಸಬೇಕು. ಸ್ವಲ್ಪ ಯಾಮಾರಿದರೆ ಏನಾಗಲಿದೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.

    ಲ್ಯಾಪ್‌ಟಾಪ್ ರಿಪೇರಿ ಮಾಡಲು ಮನೆಗೆ ಬಂದಿದ್ದಾಗ ಮಹಿಳೆಯ ಖಾಸಗಿ ಪೋಟೋ ಪಡೆದು ಬ್ಲಾಕ್​ಮೇಲ್ ಮಾಡಿದ ಆರೋಪದ ಮೇಲೆ ಬಾಗಲಗುಂಟೆ ಪೊಲೀಸರು ಖತರ್ನಾಕ್​ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

    ಬಂಧಿತನನ್ನು ಪ್ರವೀಣ್​ ರಾವ್​ ಎಂದು ಗುರುತಿಸಲಾಗಿದೆ. ಈತ ದಾಸರಹಳ್ಳಿಯ ಮಹೇಶ್ವರಿ ನಗರದ ನಿವಾಸಿ. ಲ್ಯಾಪ್​ಟಾಪ್​ ರಿಪೇರಿ ಮಾಡಿಕೊಡಲು ಬಂದವನು ಅದರಲ್ಲಿದ್ದ ಮಹಿಳೆಯ ಖಾಸಗಿ ಫೋಟೋಗಳನ್ನು ಪಡೆದುಕೊಂಡು ಬ್ಲಾಕ್​ಮೇಲ್​ ಮಾಡಲು ಆರಂಭಿಸಿದ್ದ. ಅಲ್ಲದೆ, ಖಾಸಗಿ ಪೋಟೋಗಳನ್ನು ಮಹಿಳೆಯ ಪತಿಯ ಮೊಬೈಲ್​ಗೆ ಶೇರ್ ಮಾಡಿದ್ದ.

    ಠಾಣೆಗೆ ದೂರು ಕೊಟ್ಟರೆ ಜೀವ ತಗೆಯುವುದಾಗಿ ಬೆದರಿಕೆ ಹಾಕಿದ್ದ. ಕೊನೆಗೂ ಆತನ ಕಾಟ ತಡೆಯಲಾರದೆ ಮಹಿಳೆ ದೂರು ನೀಡಿದ್ದಳು. ಕಾರ್ಯಾಚರಣೆಗೆ ಇಳಿದ ಬಾಗಲಗುಂಟೆ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಮದುವೆ ಮುಗಿಸಿ ಬರುವಾಗ ನಿಂತಿದ್ದ ಟ್ರಕ್​ಗೆ ಕಾರು ಡಿಕ್ಕಿ: ಸ್ಥಳದಲ್ಲೇ 8 ಮಂದಿ ದುರ್ಮರಣ, ಮೂವರ ಸ್ಥಿತಿ ಗಂಭೀರ

    ಬಾಡಿಗೆ ಕಾರಿನೊಳಗೆ ಪೆಟ್ರೋಲ್​ ಸುರಿದುಕೊಂಡು ಪ್ರೇಮಿಗಳಿಬ್ಬರ ದುರಂತ ಸಾವು: ಉಡುಪಿಯಲ್ಲಿ ದುರ್ಘಟನೆ

    ನಟ ಅಲ್ಲು ಅರ್ಜುನ್​ ವರದಕ್ಷಿಣೆ ತೆಗೆದುಕೊಂಡಿದ್ದಾರಾ? ಅಚ್ಚರಿಯ ಹೇಳಿಕೆ ನೀಡಿದ ಪತ್ನಿ ಸ್ನೇಹಾ ರೆಡ್ಡಿ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts