More

    ಐಪಿಎಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್ ವರ್ಗಾವಣೆ ಆದೇಶ ತಡೆಹಿಡಿದ ಸರ್ಕಾರ

    ಬೆಂಗಳೂರು: ಐಪಿಎಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರ ವರ್ಗಾವಣೆ ಆದೇಶವನ್ನು ಸರ್ಕಾರ ತಡೆಹಿಡಿದಿದೆ.

    ಜನವರಿ 27ರಂದು ಸರ್ಕಾರ ರವಿ ಚನ್ನಣ್ಣವರ್​ ಸೇರಿದಂತೆ 9 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿಯಾಗಿರುವ ರವಿ ಚನ್ನಣ್ಣವರ್​ ಅವರನ್ನು ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸರ್ಕಾರ ವರ್ಗಾವಣೆ ಮಾಡಿತ್ತು.

    ಆದರೆ, ಇದೀಗ ಸರ್ಕಾರ ವರ್ಗಾವಣೆ ಆದೇಶವನ್ನು ಏಕಾಏಕಿ ತಡೆಹಿಡಿದಿದ್ದು, ಈ ಬಗ್ಗೆ ಜ. 28ರಂದು ಆದೇಶ ಹೊರಡಿಸಿದೆ. ತಕ್ಷಣ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ರವಿ ಚನ್ನಣ್ಣವರ್ ವರ್ಗಾವಣೆಗೆ ಸರ್ಕಾರ ಬ್ರೇಕ್​ ಹಾಕಿದೆ. ​

    ಕೆಲ ದಿನಗಳಿಂದ ರವಿ ಚನ್ನಣ್ಣವರ್​ ಅವರು ತುಂಬಾ ಸುದ್ದಿಯಲ್ಲಿದ್ದಾರೆ. ಅವರ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ಆರೋಪಗಳು ಕೇಳಿಬಂದಿದೆ. ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ.

    ರವಿ ಚನ್ನಣ್ಣನವರ್ ಸೇರಿದಂತೆ ಒಂಬತ್ತು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ

    ಸುತ್ತಿಗೆಯಿಂದ ಹೊಡೆದು ಗಂಡನನ್ನು ಕೊಲೆಗೈದ ಮಹಿಳೆಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸರು!

    ಸರ್ವೋದಯ ದಿನ: ಜ.30ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ಮಾಡುವಂತಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts